ಕುಂಬ್ರದಲ್ಲಿ ಬಿಎಂಎಸ್ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಮಜ್ದೂರ್ ಸಂಘದ 71ನೇ ಸ್ಥಾಪನಾ ದಿನಾಚರಣೆ

0

ಪುತ್ತೂರು: ಬಿಎಂಎಸ್ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಮಜ್ದೂರ್ ಸಂಘದ 71ನೇ ಸ್ಥಾಪನಾ ದಿನಾಚರಣೆಯನ್ನು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

​ಕಾರ್ಯಕ್ರಮದ ಆರಂಭದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಲಾಯಿತು.

​ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ ಕೈಕಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಯ ಮಹತ್ವ ಮತ್ತು ಬೆಳೆದು ಬಂದ ಹಾದಿಯ ಕುರಿತು ಬೆಳಕು ಚೆಲ್ಲಿದರು. ಕಟ್ಟಡ ಕಾರ್ಮಿಕರ ಸಂಘದ ವಲಯ ಅಧ್ಯಕ್ಷರಾದ ಪುರಂದರ ಶೆಟ್ಟಿ ಮುಡಾಲ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು.

​ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಭಾರತೀಯ ಮಜ್ದೂರ್ ಸಂಘದ (BMS) ಜಿಲ್ಲಾಧ್ಯಕ್ಷರಾದ ಅನಿಲ್ ಅವರು, “ಬಿಎಂಎಸ್ ಸಂಸ್ಥಾಪನೆಯ ಉದ್ದೇಶ, ತತ್ವ ಸಿದ್ಧಾಂತಗಳು ಹಾಗೂ ಕಾರ್ಮಿಕರ ಹಕ್ಕುಗಳು ಮತ್ತು ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಪ್ರತಿಯೊಬ್ಬ ಕಾರ್ಮಿಕನಿಗೂ ತಲುಪಿಸುವುದು ನಮ್ಮ ಮುಖ್ಯ ಧ್ಯೇಯ” ಎಂದು ತಿಳಿಸಿದರು.

​ಸಭೆಯಲ್ಲಿ ಪಾಣಾಜೆ ವಲಯ ಅಧ್ಯಕ್ಷರಾದ ದಿವಾಕರ್ ಕುಲಾಲ್ ಪಾಣಾಜೆ, ಈಶ್ವರಮಂಗಲ ವಲಯ ಅಧ್ಯಕ್ಷರಾದ ಕೇಶವ, ಮುಖಂಡರಾದ ದಿವಾಕರ ಆಚಾರ್ಯ, ಜಯಂತ ಮುಡಾಲ, ಚಿದಾನಂದ ಕಾವು, ಕಚೇರಿ ಸಹಾಯಕಿ ಪ್ರತಿಮಾ ಕೋಡಿಬೈಲು ಹಾಗೂ ಸಂಘದ ಪ್ರಮುಖ ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here