






ಹಂಚಿದರೆ ಕಾನೂನು ಕ್ರಮದ ಚಿಂತನೆ-ಕುಟುಂಬಸ್ಥರ ಹೇಳಿಕೆ


ಪುತ್ತೂರು: ಪತಿಯ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಕೆದಂಬಾಡಿ ಗ್ರಾಮದ ಸಾರೆಪುಣಿಯ ಫಾತಿಮತ್ ನಿಶಾನ ಅವರ ಮಗುವಿನ ವೀಡಿಯೋ, ಫೋಟೋ ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿದ್ದು ಮಗುವಿನ ಫೋಟೋ, ವೀಡಿಯೋಗಳನ್ನು ತಕ್ಷಣವೇ ಅಳಿಸಿ ಹಾಕುವಂತೆ(ಡಿಲೀಟ್) ಮೃತ ಮಹಿಳೆಯ ಕುಟುಂಬಸ್ಥರು ಮನವಿ ಮಾಡಿದ್ದಾರೆ, ಮಾತ್ರವಲ್ಲದೇ ಸಾಮಾಜಿಕ ತಾಣಗಳಲ್ಲಿ ಹಂಚುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಕುಟುಂಬಸ್ಥರು ತಿಳಿಸಿದ್ದಾರೆ.



ಈಗಾಗಲೇ ಮಹಿಳೆಯ ಸಾವಿನಿಂದ ಕುಟುಂಬ ತೀವ್ರ ನೋವಿನಲ್ಲಿದ್ದು ಇಂತಹ ಸಂದರ್ಭದಲ್ಲಿ ಮಗುವಿನ ಫೊಟೋ ವೈರಲ್ ಆಗುವುದರಿಂದ ನೊಂದ ಮನೆಯವರು ಇನ್ನಷ್ಟು ನೋವು ಅನುಭವಿಸಲಿದ್ದಾರೆಯೇ ವಿನಃ ಅದರಿಂದ ಏನೂ ಪ್ರಯೋಜನವಿಲ್ಲ ಎಂದಿರುವ ಕುಟುಂಬಸ್ಥರು ಮಗುವಿನ ವೀಡಿಯೋವನ್ನು ಇನ್ಸ್ಟಾಗ್ರಾಮ್ನಂತಹ ಸೋಶಿಯಲ್ ಮೀಡಿಯಾಗಳಲ್ಲಿ ಹಂಚುತ್ತಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಮನವಿ ಮಾಡಿದ್ದಾರೆ. ಮಗುವಿನ ಫೋಟೋ, ವೀಡಿಯೋಗಳನ್ನು ಅನುಮತಿ ಇಲ್ಲದೇ ಸಾಮಾಜಿಕ ತಾಣಗಳಲ್ಲಿ ಹಂಚುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ ಕೂಡಾ ಆಗಿದ್ದು ಇದು ಭವಿಷ್ಯದಲ್ಲಿ ಮಗುವಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದೆ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.










