ಕಾವು: ಆರ್ಥಿಕ ಸಂಕಷ್ಟದಲ್ಲಿದ್ದ ಬಡಕುಟುಂಬಕ್ಕೆ ಧನಸಹಾಯ ವಿತರಣೆ

0

ಕಾವು: ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಮಾಡ್ನೂರು ಗ್ರಾಮದ ಚಾಕೋಟೆ ನಿವಾಸಿ ನಾಗೇಶ್ ಗೌಡರವರ ಮನೆಯ ಆರ್ಥಿಕ ಸಂಕಷ್ಟಕ್ಕೆ ಸ್ಪಂದನೆ ನೀಡಿದ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಾವು ಘಟಕವು ಜು.26ರಂದು ಅವರ ಮನೆಗೆ ತೆರಳಿ ಧನಸಹಾಯ ಹಸ್ತಾಂತರ ಮಾಡಲಾಯಿತು.


ಕೊಳ್ತಿಗೆ ಗ್ರಾಮದಲ್ಲಿ ಗ್ರಾಮಸೇವಕರಾಗಿ ಕೆಲಸ ಮಾಡುತ್ತಿದ್ದ ನಾಗೇಶ್ ಚಾಕೋಟೆಯವರು ಆರೋಗ್ಯ ಸಮಸ್ಯೆಯಿಂದಾಗಿ ನಿಧನರಾದ ಬಳಿಕ ಅವರ ಪತ್ನಿ ಮತ್ತು ಮತ್ತು ಹುಟ್ಟು ಅಂಕವಿಕಲನಾಗಿರುವ ಮಗ ಮನೆಯ ಆಧಾರಸ್ತಂಭವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಇದನ್ನು ಮನಗಂಡ ವಿ.ಹಿಂ.ಪಂ ಕಾವು ಘಟಕದ ಅಧ್ಯಕ್ಷ, ಸಾಮಾಜಿಕ ಮುಂದಾಳು ಕಾವು ಭಾಸ್ಕರ ಬಲ್ಯಾಯರವರು ಸಂಘಟನೆಯ ಕಾರ್ಯಕರ್ತರ ಸಹಕಾರದೊಂದಿಗೆ ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬದ ಮನೆಗೆ ಭೇಟಿ ನೀಡಿ, ಸಾಂತ್ವನವನ್ನು ಹೇಳಿ, ಧನಸಹಾಯವನ್ನು ಹಸ್ತಾಂತರ ಮಾಡಿದರು.


ಈ ಸಂದರ್ಭದಲ್ಲಿ ವಿ.ಹಿಂ.ಪ ನ ಗ್ರಾಮಾಂತರ ಪ್ರಖಂಡ ಕಾರ್ಯದರ್ಶಿ ಸಹದೇವ್ ಏರಾಜೆ, ಚಾಕೋಟೆ ಕುಟುಂಬದ ಗಂಗಾಧರ ಗೌಡ, ಲೋಕೇಶ್ ಚಾಕೋಟೆ, ಸಂಘಟನೆಯ ಕಾರ್ಯಕರ್ತರಾದ ಸುರೇಶ್ ಕಾವು, ಸುಪ್ರೀತ್ ಹೊಸಮನೆ, ಕಿರಣ್ ಕುಮಾರ್ ಮಾಣಿಯಡ್ಕ, ಅಶ್ವಥ್ ಹೊಸಮನೆ, ವಿಶ್ವನಾಥ ಬಾಳೆಕೊಚ್ಚಿ, ಸೀತಾರಾಂ ಬಾಳೆಕೊಚ್ಚಿ, ವರುಣ್ ಬಾಳೆಕೊಚ್ಚಿ, ಪ್ರೀತಮ್ ಅಮ್ಚಿನಡ್ಕ, ಮುರಳಿ ಬಾಳೆಕೊಚ್ಚಿರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here