







ಪುತ್ತೂರು: ನೈರುತ್ಯ ವಲಯ ರೈಲ್ವೇ ಇಲಾಖೆ ಸೀನಿಯರ್ ಸೆಕ್ಷನ್ ಇಂಜಿನಿಯರ್ ಐತ್ತೂರು ನಿವಾಸಿ ಎ ತಿಮ್ಮಪ್ಪ ಗೌಡ ಅವರು ಸುದೀರ್ಘ 36 ವರ್ಷಗಳ ಸೇವೆಯಲ್ಲಿ ಜು.31ರಂದು ನಿವೃತ್ತಿ ಹೊಂದಲಿದ್ದಾರೆ.


ಬೆಂಗಳೂರು ಕಂಟೊನ್ಮೆಂಟ್ ಉಪಮುಖ್ಯ ಇಂಜಿನಿಯರ್ ಕಚೇರಿಯ ಕಾಮಗಾರಿ ವಿಭಾಗದಲ್ಲಿ ಸೀನಿಯರ್ ಸೆಕ್ಷನ್ ಇಂಜಿನಿಯರ್ ಆಗಿರುವ ಇವರು 1990ರಲ್ಲಿ ರೈಲ್ವೇ ಇಲಾಖೆಯಲ್ಲಿ ಮಂಗಳೂರು – ಉಡುಪಿ ರೈಲ್ವೇ ವಿಭಾಗದಲ್ಲಿ ಟೆಕ್ನಿಕಲ್ಮೆಟ್ ಆಗಿ ಸೇರ್ಪಡೆಗೊಂಡರು.



ತನ್ನ ಕಾರ್ಯಕ್ಷಮತೆಯಿಂದ ಜ್ಯೂನಿಯರ್ ಇಂಜಿನಿಯರ್ ಆಗಿ ಬಳಿಕ ಪದೋನ್ನತಿ ಹೊಂದಿ ಸೀನಿಯರ್ ಸೆಕ್ಷನ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಮಂಗಳೂರು – ಕಾಲಿಕಟ್, ಡಬ್ಲಿಂಗ್ ಪ್ರಾಜೇಕ್ಟ್, ಕೊಯಮುತ್ತೂರು, ಮೆದ್ರಾಸ್ಗಳಲ್ಲಿ ಸೇವೆ ಸಲ್ಲಿಸಿ ಬಳಿಕ ಮಂಗಳೂರು ಕಾಸರಗೋಡು ಡಬ್ಲಿಂಗ್ ಪ್ರಾಜೆಕ್ಟ್, ಮಂಗಳೂರು – ಸುಬ್ರಹ್ಮಣ್ಯ ಗೇಜ್ ಪರಿವರ್ತನೆ ಪ್ರಾಜೆಕ್ಟ್, ಶಿವಮೊಗ್ಗ – ತಾಲಗುಪ್ಪ ಗೇಜ್ ಪರಿವರ್ತನೆ ಪ್ರಾಜೆಕ್ಟ್, ಹಾಸನ- ಬೆಂಗಳೂರು ಹೊಸ ರಲ್ವೇ ಮಾರ್ಗ, ಆಂದ್ರಪ್ರದೇಶದ ಹಿಂದುಪುರ -ಪೆನಕೊಂಡದಲ್ಲಿ ಡಬ್ಲಿಂಗ್ ಪ್ರಾಜೆಕ್ಟ್, ಬೆಂಗಳೂರು ಸಿಟಿ ಸುತ್ತಮುತ್ತ ಅಂಡ್ಪಾಸ್ ಸೇತುವೆ ಕಾಮಗಾರಿ ಹಾಗು ಕೊನೆಯದಾಗಿ ಚನ್ನಸಂದ್ರ ರೈಲ್ವೇ ನಿಲ್ದಾಣದ ಪುನರ್ ನವೀಕರಣ ಮತ್ತು ಹೊಸ ಸ್ಟೇಷನ್ ಬಿಲ್ಡಿಂಗ್ ಕಾಮಗಾರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನಲ್ಲಿ ಸೀನಿಯರ್ ಸೆಕ್ಷನ್ ಇಂಜಿನಿಯರ್ ಆಗಿ ನಿವೃತ್ತಿ ಹೊಂದುತ್ತಿದ್ದಾರೆ.
ಇವರ ಪತ್ನಿ ಕಸುಮಾವತಿ ಎ.ಟಿ ಅವರು ಗೃಹಿಣಿಯಾಗಿದ್ದು, ಪುತ್ರ ಶ್ರೇಯಸ್ ಎ.ಟಿ ಬಿ.ಇ ಕಂಪ್ಯೂಟರ್ ಶಿಕ್ಷಣ ಮುಗಿಸಿದ್ದು, ಪುತ್ರಿ ಶ್ರಾವ್ಯ ಎ.ಟಿ ಅವರು ಮಂಗಳೂರು ಎ.ಜೆ ಮೆಡಿಕಲ್ ಕಾಲೇಜಿನಲ್ಲಿ ಎಮ್.ಬಿ.ಬಿ.ಎಸ್ ಶಿಕ್ಷಣ ಪಡೆಯುತ್ತಿದ್ದಾರೆ.










