ಕೆಮ್ಮಾರ : ರಸ್ತೆಗೆ ಉರುಳಿ ಬಿದ್ದ ಮರ – ಯುವಕರಿಂದ ತೆರವು ಕಾರ್ಯಾಚರಣೆ

0

ಉಪ್ಪಿನಂಗಡಿ: ಇಲ್ಲಿಗೆ ಸಮೀಪ ಕೆಮ್ಮಾರ ಎಂಬಲ್ಲಿ ಗುರುವಾರ ರಾತ್ರಿ ರಾಜ್ಯ ಹೆದ್ದಾರಿ ಮೇಲೆ ಬೃಹತ್ ಮರವೊಂದು ಬಿದ್ದಿದ್ದು, ಅದೃಷ್ಟವಶಾತ್ ಸಂಭವನೀಯ ಅವಘಡವೊಂದು ತಪ್ಪಿದೆ. ಸ್ಥಳೀಯ ಯುವಕರು ಧಾವಿಸಿ ಬಂದು ರಸ್ತೆಗೆ ಬಿದ್ದಿದ್ದ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ್ದಾರೆ.


ಕೆಮ್ಮಾರ ಭಜನಾ ಮಂದಿರದ ಬಳಿಯಲ್ಲಿ ರಸ್ತೆಯ ಬದಿಯಲ್ಲಿ ಇದ್ದ ಮರವೊಂದು ಗುರುವಾರ ರಾತ್ರಿ ಬೀಸಿದ ಭಾರೀ ಗಾಳಿ ಮಳೆ ಸಂದರ್ಭದಲ್ಲಿ ರಸ್ತೆಗೆ ಉರುಳಿ ಬಿದ್ದು, ಸುಮಾರು 1 ಗಂಟೆ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಯುವಕರಾದ ಶೌಕತ್ ಕೆಮ್ಮಾರ, ಅರವಿಂದ ನೇಕಾರ, ಶರೀಫ್ ಮಜಲು, ಭವಾನಿ ಶಂಕರ್, ಝುಬೈರ್, ಯಾದವ ನೇಕಾರ, ಬದ್ರುದ್ದೀನ್, ಜಗನ್ನಾಥ ನೇಕಾರ, ಫೈಸಲ್, ಸಂಶುದ್ದೀನ್, ಆಸಿಫ್ ಸ್ಥಳಕ್ಕೆ ಧಾವಿಸಿ ಬಂದು ಮರದ ರೆಂಬೆ, ಕೊಂಬೆಗಳನ್ನು ಕಡಿದು ತೆಗೆದು ತೆರವು ಮಾಡಿ ರಸ್ತೆಯನ್ನು ವಾಹನ ಸಂಚಾರಕ್ಕೆ ತೆರವು ಮಾಡಿಕೊಟ್ಟಿರುತ್ತಾರೆ.

LEAVE A REPLY

Please enter your comment!
Please enter your name here