ಆ.7,8:ದೇಶದ ಅತಿದೊಡ್ಡ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ -24,298ಕ್ಕೂ ಹೆಚ್ಚು ಉದ್ಯೋಗಾವಕಾಶಗಳು, 350ಕ್ಕೂ ಅಧಿಕ ಕಂಪೆನಿಗಳು ಭಾಗಿ

0


ಮಂಗಳೂರು:ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ 16ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ’ ದೇಶದ ಅತಿ ದೊಡ್ಡ ಉದ್ಯೋಗ ಮೇಳ ಆಗಸ್ಟ್ 7, 8ರಂದು ಮೂಡುಬಿದಿರೆಯ ಆಳ್ವಾಸ್‌ನ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ.ಈ ವರ್ಷದ ಆಳ್ವಾಸ್ ಪ್ರಗತಿಯಲ್ಲಿ 24,298ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯ ಇವೆ.350ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸಲಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಅಭ್ಯರ್ಥಿಗಳು ಹಾಗೂ ಉದ್ಯೋಗದಾತರಿಗೆ ಸಂಪೂರ್ಣ ಉಚಿತವಾಗಿರುತ್ತದೆ.ವಿವಿಧ ಕ್ಷೇತ್ರಗಳ ಪ್ರಮುಖ ಉದ್ಯೋಗದಾತ ಕಂಪೆನಿಗಳು ಮತ್ತು ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸಿ, ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ಬೃಹತ್ ಮೇಳ ಇದಾಗಿದೆ.ಉದ್ಯೋಗ ಅರಸುವ ಯುವಕ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದವರು ತಿಳಿಸಿದರು.


350ಕ್ಕೂ ಅಧಿಕ ಕಂಪೆನಿಗಳು ಭಾಗಿ:
ಐಟಿ,ಐಟಿಇಎಸ್,ಉತ್ಪಾದನೆ,ಆರೋಗ್ಯ ಮತ್ತು ಔಷಧ, ಬ್ಯಾಂಕಿಂಗ್ ಮತ್ತು ಹಣಕಾಸು,ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಶಿಕ್ಷಣ, ಮಾಧ್ಯಮ, ಆತಿಥ್ಯ,ಎಲೆಕ್ಟ್ರಾನಿಕ್ಸ್ ಹಾಗೂ ದೂರಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.ಇದುವರೆಗೆ 326 ಕಂಪೆನಿಗಳು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಂಡಿದ್ದು, ಈ ಬಾರಿ 350ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ವಿವೇಕ್ ಆಳ್ವ ತಿಳಿಸಿದರು.


ಪುತ್ತೂರು ಸಹಿತ ವಿವಿಧೆಡೆ ಓರಿಯೆಂಟೇಶನ್ ಕಾರ್ಯಕ್ರಮ:
ಉದ್ಯೋಗ ಮೇಳದ ಕುರಿತು ಅಭ್ಯರ್ಥಿಗಳಿಗೆ ಸಮಗ್ರ ಮಾಹಿತಿ ಹಾಗೂ ಸಂದರ್ಶನಕ್ಕೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಪುತ್ತೂರು,ಬಂಟ್ವಾಳ,ಕುಂದಾಪುರ,ಸುಬ್ರಹ್ಮಣ್ಯ, ಮೂಡುಬಿದಿರೆ,ಮಂಗಳೂರು, ಕಾಪು ಮತ್ತು ಉಪ್ಪಳದಲ್ಲಿ ಆಳ್ವಾಸ್‌ನ ತಜ್ಞರ ತಂಡದಿಂದ ಉಚಿತ ಓರಿಯಂಟೇಶನ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.


ಅಭ್ಯರ್ಥಿಗಳ ಅರ್ಹತೆ:
2026ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಪೂರ್ಣಗೊಳಿಸಿದವರು ಹಾಗೂ ಅದಕ್ಕೂ ಹಿಂದಿನ ವರ್ಷಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಅಭ್ಯರ್ಥಿಗಳೂ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಿವೆ.ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾದ ಉದ್ಯೋಗಾವಕಾಶಗಳನ್ನು www.alvaspragati.com ವೆಬ್‌ಸೈಟ್‌ನಲ್ಲಿ ಸುಲಭವಾಗಿ ಹುಡುಕಬಹುದು ಎಂದು ಆಳ್ವ ಹೇಳಿದರು.


ಎಐ ಆಧಾರಿತ ಚಾಟ್ ಬಾಟ್:
ಉದ್ಯೋಗ ಮೇಳದಲ್ಲಿ ವಿಶೇಷ ಎಐ ಆಧಾರಿತ ಚಾಟ್‌ಬಾಟ್ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು,ಅಭ್ಯರ್ಥಿಗಳು ತಮ್ಮ ಬಯೋಡೇಟಾ ಅಪ್‌ಲೋಡ್ ಮಾಡಿದ ತಕ್ಷಣ ಅವರ ವಿದ್ಯಾರ್ಹತೆ ಹಾಗೂ ಅರ್ಹತೆಗೆ ಅನುಗುಣವಾದ ಕಂಪೆನಿಗಳು ಮತ್ತು ಉದ್ಯೋಗಾವಕಾಶಗಳನ್ನು ಗುರುತಿಸಿ ಶಿಫಾರಸು ಮಾಡುವ ವ್ಯವಸ್ಥೆ ಇರಲಿದೆ ಎಂದು ವಿವರಿಸಿದರು.


ಉದ್ಯೋಗಾವಕಾಶ ವಿವರ:
ಎಕ್ಸ್‌ಪರ್ಟೈಸ್ ಸಂಸ್ಥೆಯು ಡಿಪ್ಲೊಮಾ ಹಾಗೂ ಐಟಿಐ ಅಭ್ಯರ್ಥಿಗಳಿಗಾಗಿ ಗಲ್ಫ್ ರಾಷ್ಟ್ರಗಳ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ.ಎಂಬಿಎ,ಎಂಎಚ್‌ಆರ್‌ಡಿ, ಎಂಎಸ್‌ಡಬ್ಲ್ಯು ಮತ್ತು ಬಿಎಸ್‌ಡಬ್ಲ್ಯು ಅಭ್ಯರ್ಥಿಗಳಿಗಾಗಿ 70ಕ್ಕೂ ಹೆಚ್ಚು ಮಾನವ ಸಂಪನ್ಮೂಲ ಹುದ್ದೆಗಳು ಲಭ್ಯವಿವೆ.ಉತ್ಪಾದನಾ ಕ್ಷೇತ್ರದಲ್ಲಿ 74 ಕಂಪೆನಿಗಳು ಭಾಗವಹಿಸುತ್ತಿದ್ದು, 5,877ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ.ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ಕೋಲಾರ) ಮಹಿಳಾ ಅಭ್ಯರ್ಥಿಗಳಿಗಾಗಿ ವಿಶೇಷ ನೇಮಕಾತಿ ಅಭಿಯಾನ ನಡೆಸುತ್ತಿದೆ.ಐಟಿ/ಐಟಿಇಎಸ್ ಕ್ಷೇತ್ರದಲ್ಲಿ 35 ಕಂಪೆನಿಗಳಿಂದ 200ಕ್ಕೂ ಹೆಚ್ಚು ಕೋರ್ ಐಟಿ ಹಾಗೂ 3,500ಕ್ಕೂ ಹೆಚ್ಚು ನಾನ್-ಐಟಿ ಉದ್ಯೋಗಾವಕಾಶಗಳು ಲಭ್ಯವಿವೆ.ಎಎನ್‌ಝಡ್, ಇಎಕ್ಸ್‌ಎಲ್,ಆಕ್ಸಿಸ್ ಬ್ಯಾಂಕ್,ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸೇರಿದಂತೆ 30ಕ್ಕೂ ಹೆಚ್ಚು ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳು ವಾಣಿಜ್ಯ ವಿಭಾಗದ ಪದವಿ ಹಾಗೂ ಸ್ನಾತಕೋತ್ತರ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಒದಗಿಸುತ್ತಿವೆ.
ವೊಕಾರ್ಟ್ ಆಸ್ಪತ್ರೆ, ಸಕ್ರಾ ವರ್ಲ್ಡ್ ಆಸ್ಪತ್ರೆ ಸೇರಿದಂತೆ ಪ್ರಮುಖ ಆಸ್ಪತ್ರೆಗಳು ಮುಂಬೈನಲ್ಲಿ ಆರೋಗ್ಯ ಕ್ಷೇತ್ರದ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸಲಿವೆ.ಮಹೀಂದ್ರ ಫೈನಾನ್ಸ್ ಸಂಸ್ಥೆಯು ಏರಿಯಾ ಬಿಸಿನೆಸ್ ಮ್ಯಾನೇಜರ್ ಹುದ್ದೆಗೆ ವಾರ್ಷಿಕ 8 ಲಕ್ಷ ರೂ.ವರೆಗಿನ ವೇತನ ನೀಡುತ್ತಿದೆ.ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ 5 ಲಕ್ಷ ರೂ.ವರೆಗಿನ ವಾರ್ಷಿಕ ವೇತನದ ಉದ್ಯೋಗಾವಕಾಶಗಳು ಲಭ್ಯವಿವೆ.ಮಾರಾಟ ಕ್ಷೇತ್ರದಲ್ಲಿ ಕೋಡ್‌ಯಂಗ್ ಸಂಸ್ಥೆಯು ಪದವಿ ಹಾಗೂ ಸ್ನಾತಕೋತ್ತರ ಅಭ್ಯರ್ಥಿಗಳಿಗೆ 8 ಲಕ್ಷ ರೂ.ವರೆಗಿನ ವಾರ್ಷಿಕ ವೇತನದ ಉದ್ಯೋಗಾವಕಾಶಗಳನ್ನು ನೀಡುತ್ತಿದೆ ಎಂದು ವಿವೇಕ ಆಳ್ವ ಮಾಹಿತಿ ನೀಡಿದರು. ಆಳ್ವಾಸ್ ಸ್ವಾಯತ್ತ ಕಾಲೇಜು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ ಶೆಟ್ಟಿ, ಪ್ಲೇಸ್‌ಮೆಂಟ್ ವಿಭಾಗ ಮುಖ್ಯಸ್ಥೆ ರಂಜಿತಾ ಆಚಾರ್ಯ ಇದ್ದರು.


ವಲಯವಾರು ಉದ್ಯೋಗವಕಾಶಗಳು ಮತ್ತು ವಿಶೇಷತೆಗಳು
ಉತ್ಪಾದನಾ ವಲಯ:

ಉತ್ಪಾದನಾ ಕ್ಷೇತ್ರದ 74 ಪ್ರಮುಖ ಕಂಪೆನಿಗಳು ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುತ್ತಿವೆ.ಈ ಕ್ಷೇತ್ರದಲ್ಲಿ ವಿವಿಧ ವಿದ್ಯಾರ್ಹತೆಗಳಿಗೆ ಒಟ್ಟು 5,877 ಉದ್ಯೋಗಾವಕಾಶಗಳು ಲಭ್ಯ.ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಪ್ರೈವೇಟ್ ಲಿಮಿಟೆಡ್, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್, ಸನ್ಸೆರಾ ಎಂಜಿನಿಯರಿಂಗ್ ಲಿಮಿಟೆಡ್, ಬುಹ್ಲರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕಿರ್ಲೋಸ್ಕರ್ ಟೊಯೋಟಾ ಟೆಕ್ಸ್‌ಟೈಲ್ ಮೆಷಿನರಿ ಪ್ರೈವೇಟ್ ಲಿಮಿಟೆಡ್, ಅಜಾಕ್ಸ್ ಎಂಜಿನಿಯರಿಂಗ್ ಲಿಮಿಟೆಡ್, ಏಸ್ ಡಿಸೈನರ್ಸ್ ಲಿಮಿಟೆಡ್, ಕೆನ್ನಮೆಟಲ್ ಇಂಡಿಯಾ ಲಿಮಿಟೆಡ್, ಸಾಸ್ಮೋಸ್ ಹೆಟ್ ಟೆಕ್ನಾಲಜೀಸ್ ಲಿಮಿಟೆಡ್, ಟಿವಿಎಸ್ ಮೋಟಾರ್ ಕಂಪನಿ ಲಿಮಿಟೆಡ್ ಸೇರಿದಂತೆ ಹಲವು ಪ್ರತಿಷ್ಠಿತ ಕಂಪೆನಿಗಳು ನೇಮಕಾತಿ ನಡೆಸಲಿವೆ.

44 ಕಂಪೆನಿಗಳಲ್ಲಿ ಐಟಿಐ ಅಭ್ಯರ್ಥಿಗಳಿಗೆ 1,806 ಉದ್ಯೋಗಾವಕಾಶಗಳು ಲಭ್ಯ. 54 ಕಂಪೆನಿಗಳಲ್ಲಿ ಡಿಪ್ಲೊಮಾ ಅಭ್ಯರ್ಥಿಗಳಿಗೆ 2,400 ಉದ್ಯೋಗಾವಕಾಶಗಳಿವೆ.33 ಕಂಪೆನಿಗಳಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಿಗೆ 247 ಹುದ್ದೆಗಳು ಲಭ್ಯವಿವೆ.11 ಕಂಪೆನಿಗಳಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಅಭ್ಯರ್ಥಿಗಳಿಗೆ 79 ಹುದ್ದೆಗಳಿವೆ.ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಪದವೀಧರರಿಗೆ 39 ಹುದ್ದೆಗಳು ಲಭ್ಯವಿವೆ.


15 ಕಂಪೆನಿಗಳಲ್ಲಿ ಎಂಬಿಎ ಹಾಗೂ ಎಂಕಾಂ ಅಭ್ಯರ್ಥಿಗಳಿಗೆ 56 ಹುದ್ದೆಗಳು ಇವೆ. 21 ಕಂಪೆನಿಗಳಲ್ಲಿ ಬಿಕಾಂ ಅಭ್ಯರ್ಥಿಗಳಿಗೆ 112 ಉದ್ಯೋಗಾವಕಾಶಗಳು, 7 ಕಂಪೆನಿಗಳಲ್ಲಿ ಬಿಎಸ್ಸಿ ಅಭ್ಯರ್ಥಿಗಳಿಗೆ 71 ಹುದ್ದೆ, 15 ಕಂಪನಿಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳಿವೆ.ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ಕೋಲಾರ) ಮಹಿಳಾ ಅಭ್ಯರ್ಥಿಗಳಿಗಾಗಿ ಅಭಿಯಾನವನ್ನು ನಡೆಸುತ್ತಿದೆ.


ಐಟಿ/ ಐಟಿಇಎಸ್ ವಲಯ:
ಇನ್ಫೋಸಿಸ್ ಬಿಪಿಎಂ, ಟೆಕ್ ಮಹೀಂದ್ರ ಬಿಪಿಒ, ಕೋಡ್ ಕ್ರಾಫ್ಟ್ ಟೆಕ್ನಾಲಜೀಸ್, ಕೋಬೆರೆಸ್ಟೆಲಿಯಮ್, ವಿನ್‌ಮ್ಯಾನ್ ಸಾಫ್ಟ್‌ವೇರ್, ಯುನಿಫೈ ಸಿಎಕ್ಸ್, ಗುಂಬಿ ಸಾಫ್ಟ್‌ವೇರ್, ಟಾಸ್ಕ್‌ಮಾಂಕ್ ಟೆಕ್ನಾಲಜೀಸ್, ಅವಿಷ್ಕಾರ್ ಎಐ, ಇನ್‌ವೆಂಜರ್ ಟೆಕ್ನಾಲಜೀಸ್ ಸೇರಿದಂತೆ 40 ಪ್ರಮುಖ ಐಟಿ/ಐಟಿಇಎಸ್ ಕಂಪೆನಿಗಳು ನೇಮಕಾತಿ ನಡೆಸಲಿವೆ.
ಈ ಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ಕೋರ್ ಐಟಿ ಹಾಗೂ 3,500ಕ್ಕೂ ಹೆಚ್ಚು ನಾನ್-ಐಟಿ ಉದ್ಯೋಗಾವಕಾಶಗಳು ಲಭ್ಯ.ಪೈಥಾನ್ ಡೆವಲಪರ್,ಫಟರ್ ಡೆವಲಪರ್, ಸಾಫ್ಟ್‌ವೇರ್ ಡೆವಲಪರ್. ಎಐ ಡೆವಲಪರ್ ಸೇರಿದಂತೆ ತಾಂತ್ರಿಕ ಹುದ್ದೆಗಳ ಜತೆಗೆ ಕಸ್ಟಮರ್ ಸಪೋರ್ಟ್, ಟೆಕ್ನಿಕಲ್ ಸಪೋರ್ಟ್ ಹಾಗೂ ಬ್ಯುಸಿನೆಸ್ ಪ್ರೊಸೆಸ್ ಸರ್ವಿಸಸ್ ವಿಭಾಗಗಳಲ್ಲಿಯೂ ನೇಮಕಾತಿ ನಡೆಯಲಿದೆ.ಬಿಎಸ್‌ಡಬ್ಲ್ಯೂ, ಬಿಎಚ್‌ಆರ್‌ಡಿ, ಎಂಎಸ್‌ಡಬ್ಲ್ಯೂ, ಎಂಎಚ್‌ಆರ್‌ಡಿ ಹಾಗೂ ಎಂಬಿಎ(ಎಚ್‌ಆರ್)ಅಭ್ಯರ್ಥಿಗಳಿಗೆ 30ಕ್ಕೂ ಹೆಚ್ಚು ಮಾನವ ಸಂಪನ್ಮೂಲ(ಎಚ್‌ಆರ್)ಹುದ್ದೆಗಳು ಲಭ್ಯ.ಬಿಇ/ ಬಿಟೆಕ್, ಬಿಸಿಎ, ಎಂಸಿಎ, ಬಿಎಸ್ಸಿ ಅಭ್ಯರ್ಥಿಗಳಿಗೆ 200ಕ್ಕೂ ಹೆಚ್ಚು ಕೋರ್ ಐಟಿ ಉದ್ಯೋಗಾವಕಾಶಗಳಿವೆ.
1ರಿಂದ 5 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಸೀನಿಯರ್ ಎಕ್ಸಿಕ್ಯೂಟಿವ್, ಟೆಕ್ ಲೀಡ್ ಹಾಗೂ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗಳಿಗೂ ನೇಮಕಾತಿ ನಡೆಯಲಿದೆ.


ಬ್ಯಾಂಕಿಂಗ್, ಹಣಕಾಸು ಮತ್ತು ವಿಮಾ ವಲಯ:
ಬ್ಯಾಂಕಿಂಗ್, ಹಣಕಾಸು ಮತ್ತು ವಿಮಾ ಕ್ಷೇತ್ರದ 30 ಪ್ರಮುಖ ಕಂಪೆನಿಗಳು ಆಳ್ವಾಸ್ ಪ್ರಗತಿ-2026ರಲ್ಲಿ ಭಾಗವಹಿಸುತ್ತಿವೆ.ಈ ವಲಯದಲ್ಲಿ 2450ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯ. ಎಎನ್‌ಝಡ್, ಇಎಕ್ಸ್‌ಎಲ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಉಜ್ಜಿವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಜನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಮಹೀಂದ್ರ ಫೈನಾನ್ಸ್, ಪಿರಮಲ್ ಫೈನಾನ್ಸ್,ಮುತ್ತೂಟ್ ಫೈನಾನ್ಸ್,ರೂಪೀಬಾಸ್ ಫೈನಾನ್ಸಿಯಲ್ ಸರ್ವಿಸಸ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ನೇಮಕಾತಿ ನಡೆಸಲಿವೆ.
ಬಿಕಾಂ, ಬಿಬಿಎ/ಬಿಬಿಎಂ, ಎಂಕಾಂ, ಎಂಬಿಎ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳಿವೆ.


ಆರೋಗ್ಯ ವಲಯ:
25 ಪ್ರಮುಖ ಆಸ್ಪತ್ರೆಗಳು ಹಾಗೂ ಆರೋಗ್ಯ ಸಂಸ್ಥೆಗಳು ಆಳ್ವಾಸ್ ಪ್ರಗತಿ-2026ರಲ್ಲಿ ಭಾಗವಹಿಸುತ್ತಿವೆ.ಈ ವಲಯದಲ್ಲಿ 1700ಕ್ಕೂ ಹೆಚ್ಚು ಉದ್ಯೋಗವಕಾಶಗಳು ಲಭ್ಯ.
ವೊಕಾರ್ಟ ಆಸ್ಪತ್ರೆ, ಅಪೋಲೋ ಆಸ್ಪತ್ರೆ, ಬೆಥನಿ ಆಸ್ಪತ್ರೆ, ಜಪಾನ್ ಸಹಯೋಗದ ಸಕ್ರಾ ವರ್ಲ್ಡ್ ಆಸ್ಪತ್ರೆ ಸೇರಿದಂತೆ ಹಲವು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ನೇಮಕಾತಿ ನಡೆಸಲಿವೆ. 750ಕ್ಕೂ ಹೆಚ್ಚು ಸಿಬ್ಬಂದಿ ನರ್ಸ್ ಹುದ್ದೆಗಳು ಲಭ್ಯ.ವೈದ್ಯರು, ಅಲೈಡ್ ಹೆಲ್ತ್ ಸೈನ್ಸ್ ವೃತ್ತಿಪರರು ಹಾಗೂ ಪದವೀಧರರಿಗೆ ತಲಾ 100ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೂ 50ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ.


ನಿರ್ಮಾಣ ವಲಯ:
ಈ ವಲಯದ 13 ಪ್ರಮುಖ ಕಂಪೆನಿಗಳು ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುತ್ತಿವೆ.ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್, ಸೋಭಾ ಲಿಮಿಟೆಡ್, ಎಕ್ಸ್‌ಪರ್ಟೈಸ್, ರೋಹನ್ ಕಾರ್ಪೊರೇಷನ್, ಪಿ.ಜಿ.ಶೆಟ್ಟಿ ಹ್ಯಾಬಿಟಾಟ್ ಸಿಸ್ಟಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಅಮರ್ ಇನ್‌ಫ್ರಾ ಪ್ರಾಜೆಕ್ಟ್(ದಿ ಶೂಲಿನ್ ಗ್ರೂಪ್).ಅಗ್ರಿಮಾ ರೂಫ್ & ಫಸಾಡ್ ಸಿಸ್ಟಮ್ಸ್, ಸ್ಟ್ರೇಕಾನ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ನೇಮಕಾತಿ ನಡೆಸಲಿವೆ.
ಸಿವಿಎಲ್ ಎಂಜಿನಿಯರಿಂಗ್ ಪದವೀಧರರಿಗೆ 50ಕ್ಕೂ ಹೆಚ್ಚು ಉದ್ಯೋಗಾವಕಾಶಗಳು, ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಿಗೆ 30ಕ್ಕೂ ಹೆಚ್ಚು ಹುದ್ದೆಗಳು, ಬಿಕಾಂ ಪದವೀಧರರಿಗೆ 35ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಇವೆ.
ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್ ಸಂಸ್ಥೆಯು 2ರಿಂದ 5 ವರ್ಷಗಳ ಅನುಭವ ಹೊಂದಿರುವ ಬಿಎಸ್ಸಿ (ರಸಾಯನಶಾಸ್ತ್ರ) ಅಭ್ಯರ್ಥಿಗಳಿಗೆ 10 ಹುದ್ದೆಗಳನ್ನು ಭರ್ತಿ ಮಾಡಲಿದೆ.ನಿರ್ಮಾಣ ಕ್ಷೇತ್ರದಲ್ಲಿ ಐಟಿಐ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗಾಗಿ 1,೦೦೦ಕ್ಕೂ ಹೆಚ್ಚು ಉದ್ಯೋಗವಕಾಶಗಳಿವೆ.


ಚಿಲ್ಲರೆ ವ್ಯಾಪಾರ ಮತ್ತು ಮಾರಾಟ ವಲಯ:
67 ಪ್ರಮುಖ ಚಿಲ್ಲರೆ ವ್ಯಾಪಾರ ಮತ್ತು ಮಾರಾಟ ಕ್ಷೇತ್ರದ ಕಂಪೆನಿಗಳು ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುತ್ತಿವೆ.
ಕೋಡ್‌ಯಂಗ್, ಟಿವಿಎಸ್ ಸಪ್ರೈ ಚೈನ್ ಮ್ಯಾನೇಜ್‌ಮೆಂಟ್, ಟಾಟಾ ಕ್ಲಾಸ್‌ಎಡ್ಜ್, ಅಕ್ಷಯಕಲ್ಪ ಫಾರ್ಮ್ಸ್ & ಫುಡ್ಸ್, ಪಾರ್ಲೆ ಆಗ್ರೊ, ಕಲ್ಯಾಣ್ ಜ್ಯುವೆಲ್ಲರ್ಸ್, ಲೈಫ್‌ಸ್ಟೈಲ್ ಇಂಟರ್‌ನ್ಯಾಷನಲ್, ಬಿಗ್ ಬಾಸ್ಕೆಟ್, ಬ್ಲಿಂಕಿಟ್, ಜಸ್ಟ್ ಡಯಲ್, ಲುಲು ಇಂಟರ್‌ನ್ಯಾಷನಲ್ ಶಾಪಿಂಗ್ ಮಾಲ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ನೇಮಕಾತಿ ನಡೆಸಲಿವೆ.ಈ ಕ್ಷೇತ್ರದಲ್ಲಿ 4,500ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ.
ರಿಟೇಲ್, ಇ-ಕಾಮರ್ಸ್, ಎಫ್‌ಎಂಸಿಜಿ, ಆಟೋಮೊಬೈಲ್, ಗ್ರಾಹಕ ಎಲೆಕ್ಟ್ರಾನಿಕ್ಸ್, ಆಭರಣ, ಹೈಪರ್‌ಮಾರ್ಕೆಟ್, ಲಾಜಿಸ್ಟಿಕ್ಸ್ ಹಾಗೂ ಹಣಕಾಸು ಸೇವಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ.ಎಸ್‌ಎಸ್‌ಎಲ್‌ಸಿ,ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ಅಭ್ಯರ್ಥಿಗಳು ಭಾಗವಹಿಸಬಹುದು.
ಸೇಲ್ಸ್ ಎಕ್ಸಿಕ್ಯೂಟಿವ್, ರಿಟೇಲ್ ಅಸೋಸಿಯೇಟ್, ಕಸ್ಟಮರ್ ರಿಲೇಷನ್‌ಶಿಪ್ ಎಕ್ಸಿಕ್ಯೂಟಿವ್, ಬಿಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್, ಕ್ಯಾಷಿಯರ್, ಸ್ಟೋರ್ ಎಕ್ಸಿಕ್ಯೂಟಿವ್, ಟೀಮ್ ಲೀಡರ್, ವೇರ್‌ಹೌಸ್ ಅಸೋಸಿಯೇಟ್, ಸ್ಟೋರ್ ಮ್ಯಾನೇಜರ್, ಟೆರಿಟರಿ ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಾರ್ಷಿಕ ರೂ.3 ಲಕ್ಷದಿಂದ ರೂ.16 ಲಕ್ಷದವರೆಗೆ ವೇತನ ಪ್ಯಾಕೇಜ್ ಇದೆ.ಕರ್ನಾಟಕದ ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಉಡುಪಿ, ಶಿವಮೊಗ್ಗ. ಬೆಳಗಾವಿ ಸೇರಿದಂತೆ ವಿವಿಧ ನಗರಗಳಲ್ಲಿ ಉದ್ಯೋಗವಕಾಶಗಳಿವೆ.


ಶಿಕ್ಷಣ ಮತ್ತು ಸ್ವಯಂಸೇವಾ ಸಂಸ್ಥೆಗಳ ವಲಯ:
11 ಪ್ರಮುಖ ಶಿಕ್ಷಣ ಮತ್ತು ಸ್ವಯಂಸೇವಾ ಸಂಸ್ಥೆಗಳೂ ಆಳ್ವಾಸ್ ಪ್ರಗತಿ 2026ರಲ್ಲಿ ಭಾಗವಹಿಸುತ್ತಿವೆ.
ಗೋವನ್ ಇನ್‌ಸ್ಟಿಟ್ಯೂಟ್ ಇಂಟರ್‌ನ್ಯಾಷನಲ್, ಆಪ್ಸ್ ಎನ್ ಡಿವೈಸಸ್, ಗೋ (ಡಾ.ರೆಡ್ಡಿಸ್ ಫೌಂಡೇಶನ್),ಕ್ವೆಸ್ ಕಾರ್ಪ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸೇರಿದಂತೆ ಹಲವು ಸಂಸ್ಥೆಗಳು ನೇಮಕಾತಿ ನಡೆಸಲಿವೆ.1,332 ಉದ್ಯೋಗಾವಕಾಶಗಳು ಲಭ್ಯ.
ಬಿಎ, ಬಿಕಾಂ, ಬಿಎಸ್ಸಿ, ಬಿಎಸ್‌ಡಬ್ಲ್ಯೂ, ಬಿಬಿಎ, ಬಿಎಚ್‌ಆರ್‌ಡಿ, ಬಿಎಚ್‌ಎಂ, ಬಿಎಚ್‌ಎಸ್ ಪದವೀಧರರಿಗೆ 412 ಹುದ್ದೆಗಳು ಲಭ್ಯ.
ಎಂಎ,ಎಂಬಿಎ, ಎಂಎಸ್‌ಡಬ್ಲ್ಯೂ, ಎಂಕಾಂ ಮತ್ತು ಎಂಎಸ್ಸಿ ಪದವೀಧರರಿಗೆ 40 ಹುದ್ದೆಗಳಿವೆ. ಬಿಸಿಎ, ಎಂಸಿಎ ಹಾಗೂ ಬಿಎಸ್ಸಿ (ಕಂಪ್ಯೂಟರ್ ಸೈನ್ಸ್) ಅಭ್ಯರ್ಥಿಗಳಿಗೆ ತಲಾ 20 ಉದ್ಯೋಗಾವಕಾಶಗಳು ಲಭ್ಯ.


ಎಲೆಕ್ಟ್ರಾನಿಕ್ಸ್ ವಲಯ:
8 ಪ್ರಮುಖ ಎಲೆಕ್ಟ್ರಾನಿಕ್ಸ್ ಕಂಪೆನಿಗಳು ಆಳ್ವಾಸ್ ಪ್ರಗತಿ-2026ರಲ್ಲಿ ಭಾಗವಹಿಸುತ್ತಿವೆ.ಬ್ಲ್ಯಾಕ್ ಫ್ರಾಗ್ ಟೆಕ್ನಾಲಜೀಸ್, ಎಕ್ಸಿಕಾಮ್ ಟೆಲಿ-ಸಿಸ್ಟಮ್ಸ್ ಲಿಮಿಟೆಡ್, ಅನ್ವಯ ಟೆಕ್ನಾಲಜೀಸ್, ಬ್ರೆವರಾ ಟೆಕ್ನಾಲಜೀಸ್, ಎಲೆಕ್ಸಿಕಾನ್ ಟೆಕ್ನಾಲಜೀಸ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ನೇಮಕಾತಿ ನಡೆಸಲಿವೆ.ಈ ಕ್ಷೇತ್ರದಲ್ಲಿ 119ಕ್ಕೂ ಹೆಚ್ಚು ಉದ್ಯೋಗಗಳು ಲಭ್ಯವಿದ್ದು,ವಾರ್ಷಿಕ ರೂ.1.5 ಲಕ್ಷದಿಂದ ರೂ.5 ಲಕ್ಷದವರೆಗೆ ವೇತನ ಪ್ಯಾಕೇಜ್‌ಗಳನ್ನು ನೀಡಲಾಗುತ್ತಿದೆ.
ಎಕ್ಸಿಕಾಮ್ ಟೆಲಿ-ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಯು ಇಸಿಇ ಹಾಗೂ ಇ ಆಂಡ್ ಇ ವಿಭಾಗದ ಬಿಇ/ಬಿಟೆಕ್ ಪದವೀಧರರಿಗೆ ರೂ.3ರಿಂದ 4 ಲಕ್ಷ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ರೂ. 2.1ರಿಂದ 2.4 ಲಕ್ಷ ವಾರ್ಷಿಕ ವೇತನದೊಂದಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ.
ಆತಿಥ್ಯ ವಲಯ 19 ಪ್ರಮುಖ ಆತಿಥ್ಯ ಕ್ಷೇತ್ರದ ಕಂಪೆನಿಗಳು ಆಳ್ವಾಸ್ ಪ್ರಗತಿ-2026ರಲ್ಲಿ ಭಾಗವಹಿಸುತ್ತಿವೆ.


ಲೆಮನ್ ಟ್ರೇ ಹೋಟೆಲ್ಸ್, ಗೋಕುಲಂ ಗ್ರೂಪ್ ಆಫ್ ಹೋಟೆಲ್ಸ್, ಪೆನಿನ್ಸುಲಾ ಡೆಲ್ಕಾರ್ ದಿ ಕ್ಯಾಪಿಟಲ್, ಸ್ಕಿಲ್ಲಾ ರೆಸಾರ್ಟ್ಸ್ & ಹೋಟೆಲ್ಸ್, ಪಿವಿಆರ್ ಐನಾಕ್ಸ್, ತಾಜ್ ಸ್ಯಾಟ್ಸ್ ಏರ್ ಕ್ಯಾಟರಿಂಗ್ ಲಿಮಿಟೆಡ್, ದಿ ತಮಾರಾ ಕೂರ್ಗ್, ಗೋಲ್ಡ್ ಫಿಂಚ್ ಹೋಟೆಲ್ಸ್, ದಿ ಓಷನ್ ಪರ್ಲ್ ಸೇರಿದಂತೆ ಹಲವು ಪ್ರತಿಷ್ಠಿತ ಹೊಟೇಲ್‌ಗಳು ನೇಮಕಾತಿ ನಡೆಸಲಿವೆ. ಈ ವಲಯದಲ್ಲಿ 285ಕ್ಕೂ ಹೆಚ್ಚು ಉದ್ಯೋಗಾವಕಾಶ ಲಭ್ಯ.
ಹೊಟೇಲ್ ಮ್ಯಾನೇಜ್‌ಮೆಂಟ್, ಸಿವಿಲ್ ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ, ಪದವಿ, ಬಿಬಿಎ, ಬಿಕಾಂ, ಎಂಬಿಎ, ಎಂಕಾಂ, ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳಿವೆ.


ಮಾಧ್ಯಮ ವಲಯ:
12 ಪ್ರಮುಖ ಮಾಧ್ಯಮ ಸಂಸ್ಥೆಗಳೂ ಆಳ್ವಾಸ್ ಪ್ರಗತಿ-2026ರಲ್ಲಿ ಭಾಗವಹಿಸುತ್ತಿವೆ.
ಡೆಕ್ಕನ್ ಹೆರಾಲ್ಡ್- ಪ್ರಜಾವಾಣಿ, ದಿ ಟೈಮ್ಸ್ ಆಫ್ ಇಂಡಿಯಾ-ವಿಜಯ ಕರ್ನಾಟಕ,ಉದಯವಾಣಿ ತರಂಗ, ವಾರ್ತಾಭಾರತಿ, ಪವರ್ ಟಿವಿ, ಹೊಸದಿಗಂತ ಸೇರಿದಂತೆ ಹಲವು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ನೇಮಕಾತಿ ನಡೆಸಲಿವೆ.ಈ ಕ್ಷೇತ್ರದಲ್ಲಿ ಕರ್ನಾಟಕದಾದ್ಯಂತ 145ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯ.
ಪತ್ರಕರ್ತರು, ವರದಿಗಾರರು, ವೀಡಿಯೊ ಸಂಪಾದಕರು, ಕಂಟೆಂಟ್ ಡೆವಲಪರ್‌ಗಳು, ಗ್ರಾಫಿಕ್ ಡಿಸೈನರ್‌ಗಳು, ಕಾಪಿ ಎಡಿಟರ್‌ಗಳು, ಮಾನವ ಸಂಪನ್ಮೂಲ ಅಧಿಕಾರಿಗಳು, ಸಾಮಾಜಿಕ ಜಾಲತಾಣ ನಿರ್ವಾಹಕರು, ಛಾಯಾಗ್ರಾಹಕರು, ಜಾಹೀರಾತು ಹಾಗೂ ಮುದ್ರಣ ವೃತ್ತಿಪರರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಮುದ್ರಣ, ಟೆಲಿವಿಷನ್, ಡಿಜಿಟಲ್ ಮಾಧ್ಯಮ, ಮಾರ್ಕೆಟಿಂಗ್, ಜಾಹೀರಾತು, ಮಾನವ ಸಂಪನ್ಮೂಲ, ಸಾಮಾಜಿಕ ಜಾಲತಾಣ ಹಾಗೂ ಮುದ್ರಣ ಮತ್ತು ಉತ್ಪಾದನಾ ವಿಭಾಗಗಳಲ್ಲಿ ಉದ್ಯೋಗಾವಕಾಶಗಳಿವೆ.


ಔಷಧ ತಯಾರಿಕಾ ವಲಯ:
7 ಪ್ರಮುಖ ಔಷಧ ತಯಾರಿಕಾ ಕಂಪೆನಿಗಳು ಭಾಗವಹಿಸುತ್ತಿವೆ.ಯುರೋಫಿನ್ಸ್ (ಬೆಂಗಳೂರು), ಆರ್.ಎಲ್.ಫೈನ್ ಕೆಮ್ ಪ್ರೈವೇಟ್ ಲಿಮಿಟೆಡ್, ಸಾಮಿ ನ್ಯೂಟ್ರಾಸ್ಯುಟಿಕಲ್ಸ್ ಪ್ರೈವೇಟ್ ಲಿಮಿಟೆಡ್, ಗ್ರೂಪ್ ಫಾರ್ಮಾ, ಸೋಲಾರಾ ಆಕ್ಟಿವ್ ಫಾರ್ಮಾ, ಮೆಡಾರ್ಗ್ಯಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ವಸುಧಾ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಹಲವು ಸಂಸ್ಥೆಗಳು ನೇಮಕಾತಿ ನಡೆಸಲಿವೆ.ಈ ಕ್ಷೇತ್ರದಲ್ಲಿ 220ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ.
ಡಿಪ್ಲೊಮಾ, ಬಿಎಸ್ಸಿ, ಎಂಎಸ್ಸಿ (ರಸಾಯನಶಾಸ್ತ್ರ), ಎಂಫಾರ್ಮ್, ಪಿಎಚ್‌ಡಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶಗಳಿವೆ.
ಎಂಎಸ್ಸಿ (ರಸಾಯನಶಾಸ್ತ್ರ) ಮತ್ತು ಎಂಫಾರ್ಮ್ ಅಭ್ಯರ್ಥಿಗಳಿಗೆ 120ಕ್ಕೂ ಹೆಚ್ಚು, ಬಿಎಸ್ಸಿ ಅಭ್ಯರ್ಥಿಗಳಿಗೆ 60ಕ್ಕೂ ಹೆಚ್ಚು ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ 50ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ.
ಪಿಎಚ್‌ಡಿ (ರಸಾಯನಶಾಸ್ತ್ರ) ಅಭ್ಯರ್ಥಿಗಳಿಗಾಗಿ ರಿಸರ್ಚ್ ಸೈಂಟಿಸ್ಟ್ ಹುದ್ದೆಗಳಿಗೆ 6ರಿಂದ 8 ಲಕ್ಷ ರು.ವಾರ್ಷಿಕ ವೇತನ, ಇತರ ಹುದ್ದೆಗಳಿಗೆ 4 ಲಕ್ಷ ರು.ವರೆಗೆ ವಾರ್ಷಿಕ ವೇತನ ನೀಡಲಾಗುತ್ತಿದೆ.


ದೂರಸಂಪರ್ಕ ವಲಯ:
6 ಪ್ರಮುಖ ದೂರಸಂಪರ್ಕ ಕಂಪೆನಿಗಳು ಆಳ್ವಾಸ್ ಪ್ರಗತಿ-2026ರಲ್ಲಿ ಭಾಗವಹಿಸುತ್ತಿವೆ.ಏರ್‌ಟೆಲ್, ಜಿಯೋ, ಡೋಸ್‌ನೆಟ್ ಟೆಕ್ನಾಲಜೀಸ್, ಡೀನೆಟ್, ನಾರ್ತ್ ಈಸ್ಟ್ ನೆಟ್ವರ್ಕ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ನೇಮಕಾತಿ ನಡೆಸಲಿವೆ.

ಆನ್‌ಲೈನ್ ನೋಂದಣಿ ಕಡ್ಡಾಯ
ನೇಮಕಾತಿ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮ, ಪಾರದರ್ಶಕ ಹಾಗೂ ಡಿಜಿಟಲ್ ರೂಪದಲ್ಲಿ ನಡೆಸುವ ಉದ್ದೇಶದಿಂದ ಎಲ್ಲ ಅಭ್ಯರ್ಥಿಗಳಿಗೆ ಆನ್‌ಲೈನ್ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಅಭ್ಯರ್ಥಿಗಳು https://alvaspragati.com/candidate-registration ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪೆನಿಗಳ ಮಾಹಿತಿಯನ್ನು www.alvaspragati.com ವೆಬ್‌ಸೈಟ್‌ನಲ್ಲಿ ನಿರಂತರವಾಗಿ ನವೀಕರಿಸಲಾಗುತ್ತದೆ.ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾದ ಉದ್ಯೋಗಾವಕಾಶಗಳು ಹಾಗೂ ಭಾಗವಹಿಸುವ ಕಂಪೆನಿಗಳ ಮಾಹಿತಿಗಾಗಿ ವೆಬ್‌ಸೈಟ್‌ಗೆ ನಿಯಮಿತವಾಗಿ ಭೇಟಿ ನೀಡುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here