







ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ, ಹಾಗೂ ಸವಣೂರು ಶ್ರವಣರಂಗ ಹಮ್ಮಿಕೊಂಡಿರುವ “ಯಕ್ಷಾಷಾಢ -7” ತಾಳಮದ್ದಳೆ ಕಾರ್ಯಕ್ರಮ ಕುಂಜೂರುಪಂಜ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜು.31ರಂದು “ಏಕಾದಶಿ ದೇವಿ ಮಹಾತ್ಮೆ” ಎಂಬ ಆಖ್ಯಾನ ದೊಂದಿಗೆ ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಇರ್ದೆ, ಆನಂದ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ ಶ್ರೀಪತಿ ಭಟ್ ಉಪ್ಪಿನಂಗಡಿ, ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ(ಮಹಾ ವಿಷ್ಣು) ,ಗುಂಡ್ಯಡ್ಕ ಈಶ್ವರ ಭಟ್ (ನಾಡೀಜಂಘ), ಹರಿಣಾಕ್ಷಿ ಜೆ ಶೆಟ್ಟಿ (ಮುರಾಸುರ), ಪ್ರೇಮಲತಾ ರಾವ್ (ದೇವದೂತ, ಮತ್ತು ರಾಕ್ಷಸ ದೂತ) ಶಾರದಾ ಅರಸ್(ದೇವೇಂದ್ರ), ತಾರಾನಾಥ ಸವಣೂರು(ಮೇಘಮುಖಿ), ಭಾರತಿ ರೈ ಅರಿಯಡ್ಕ (ದೇವಿ)ಸಹಕರಿಸಿದರು.



ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ತಾರಾನಾಥ ಸವಣೂರು ವಂದಿಸಿದರು. ಗುರು ಪೂರ್ಣಿಮೆಯ ಪ್ರಯುಕ್ತ ಆಂಜನೇಯ ಸಂಘದ ನಿರ್ದೇಶಕರಾದ ಭಾಸ್ಕರ ಬಾರ್ಯರಿಗೆ ಗುರುವಂದನೆ ಸಲ್ಲಿಸಲಾಯಿತು. ಶ್ರೀ ದೇವಳದ ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ರೈ ಒಳತ್ತಡ್ಕ ಸದಸ್ಯೆ ಅನುರಾಧಾ ಕಲ್ಲೂರಾಯರನ್ನು ಉಭಯ ಸಂಘಗಳ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.ದೇವಳದ ವತಿಯಿಂದ ಕಲಾವಿದರಿಗೆ ಶ್ರೀ ದೇವರ ಪ್ರಸಾದವನ್ನಿತ್ತು, ಶಾಲು ಹೊದಿಸಿ ಗೌರವಿಸಲಾಯಿತು.










