ಸೌತಡ್ಕ ದೇವಸ್ಥಾನಕ್ಕೆ ಕೆನರಾ ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕರ ಭೇಟಿ

0

ನೆಲ್ಯಾಡಿ: ಶ್ರೀ ಕ್ಷೇತ್ರ ಸೌತಡಕ್ಕೆ ಕೆನರಾ ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕ ಅಳವಾಲ ವೀರಾಂಜನೇಯಲು ಮತ್ತು ಪುತ್ತೂರು ಡಿವಿಜನ್‌ನ ಡಿ.ಯಂ. ಹರಿಪ್ರಸಾದ ಎನ್.ಯಸ್. ಅವರು ಆ.೧ರಂದು ಭೇಟಿ ನೀಡಿದರು.


ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ ಸುಬ್ರಹ್ಮಣ್ಯ ಶಬರಾಯ ಅವರು ಶಾಲು ಹಾಕಿ ಸನ್ಮಾನಿಸಿದರು. ಅರ್ಚಕರು ಪ್ರಸಾದ ನೀಡಿ ಗೌರವಿಸಿದರು. ಕೆನರಾ ಬ್ಯಾಂಕ್‌ನಲ್ಲಿರುವ ಕ್ಷೇತ್ರದ ಎಲ್ಲಾ ಖಾತೆಗಳಲ್ಲಿನ ವ್ಯವಹಾರವನ್ನು ಗ್ರಾಹಕ ಸ್ನೇಹ ಪರ ವ್ಯವಹಾರವಾಗುವಂತೆ ವ್ಯವಸ್ಥೆ ಮಾಡುವುದಾಗಿ ಹಾಗೂ ಕ್ಷೇತ್ರದ ಭಕ್ತರ ಸೇವಾ ವ್ಯವಹಾರಗಳಿಗೆ ಅನುಕೂಲವಾಗುವಂತೆ ಆಧುನಿಕ ಸ್ವಯಂ ಚಾಲಿತ ಬಿಲ್ಲಿಂಗ್ ಯಂತ್ರ ಒದಗಿಸುವುದಾಗಿ ಮಹಾಪ್ರಬಂಧಕರು ಭರವಸೆ ನೀಡಿದ್ದಾರೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನೆಲ್ಯಾಡಿ ಕೆನರಾ ಬ್ಯಾಂಕಿನ ಪ್ರಬಂಧಕರಾದ ನೀರಜಾ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here