







ರೂ.347ಕೋಟಿ ವ್ಯವಹಾರ, ರೂ.4.25ಕೋಟಿ ಲಾಭ, ಶೇ.10 ಡಿವಿಡೆಂಡ್ ಘೋಷಣೆ


ಪುಣಚ: ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ರೂ.347,65,72,310.97 ವ್ಯವಹಾರ ನಡೆಸಿ ರೂ.4,25,25,534.35 ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.10ಡಿವಿಡೆಂಡ್ ನೀಡಲಾಗುವುದು. ಅತೀ ಹೆಚ್ಚು ನಿವ್ವಳ ಲಾಭಾಂಶ ಗಳಿಕೆಯಲ್ಲಿ ಪುಣಚ ಸಂಘವು ತಾಲೂಕಿನಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಸಂಘದ ಅಧ್ಯಕ್ಷ ಜನಾರ್ದನ ಭಟ್ ಅಮೈ ವಾರ್ಷಿಕ ಮಹಾಸಭೆಯಲ್ಲಿ ಹೇಳಿದರು.




ಸಭೆಯು ಆ.2ರಂದು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿ ಇರುವ ಶ್ರೀದೇವಿ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವರದಿ ವರ್ಷಾಂತ್ಯಕ್ಕೆ ಸಂಘವು 5,727 ಸದಸ್ಯರಿಂದ ರೂ.5,63,41,150.00 ಪಾಲು ಬಂಡವಾಳ, ರೂ.68,27,28,779.97 ವಿವಿಧ ರೂಪದ ಠೇವಣಾತಿಗಳನ್ನು ಹೊಂದಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಸಾಲಗಳಲ್ಲಿ ಯಾವುದೇ ವಾಯಿದೆ ದಾಟಿದ ಸಾಲಗಳಿಲ್ಲ. ಸದಸ್ಯರಿಗೆ ರೂ. 62,58,99,496 ವಿವಿಧ ರೂಪದಲ್ಲಿ ಸಾಲ ನೀಡಲಾಗಿದೆ. ಈ ಪೈಕಿ ರೂ.71,63,361 ಸುಸ್ತಿಯಾಗಿದೆ. ಸಾಲ ವಸೂಲಾತಿಯಲ್ಲಿ ಶೇ. 98.80ರಷ್ಟು ಪ್ರಗತಿ ಸಾಧಿಸಿದೆ. ಲಾಭಾಂಶವನ್ನು ಉಪನಿಬಂಧನೆಯAತೆ ವಿಂಗಡಿಸಲಾಗಿದೆ. ಆಡಿಟ್ ವರ್ಗೀಕರಣದಲ್ಲಿ ಸಂಘವು ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ಸಂಘದ ಸಾಧನಾ ಬೆಳವಣಿಗೆಗೆ ದ.ಕ. ಕೇಂದ್ರ ಸಹಕಾರಿ ಬ್ಯಾಂಕ್ನಿAದ ಸತತವಾಗಿ ಪ್ರೋತ್ಸಾಹ ಪ್ರಶಸ್ತಿ ಪಡೆಯುತ್ತಾ ಬಂದಿದೆ ಎಂದರು.
ಗೌರವ ಸನ್ಮಾನ: ಸಂಘದ ಮಾಜಿ ಅಧ್ಯಕ್ಷ, ಪ್ರಸ್ತುತ ಪ್ರತಿಷ್ಠಿತ ಕ್ಯಾಂಪ್ಕೋ ಅಧ್ಯಕ್ಷರೂ ಆಗಿರುವ ಸಹಕಾರಿ ರತ್ನ ಎಸ್.ಆರ್ ಸತೀಶ್ಚಂದ್ರ ಹಾಗೂ ಸಂಘದ ಹಿರಿಯ ಸದಸ್ಯರಾದ ಪೂವ ಮೂಲ್ಯ ಬಾಳೆಕುಮೇರಿ, ತಿಮ್ಮಪ್ಪ ಪೂಜಾರಿ ಮಾರಮಜಲು, ಮೋಹನ ರೈ ಕೊಳಂಬೆ, ಕೃಷ್ಣಪ್ಪ ಪುರುಷ ಬೀಜತಡ್ಕ, ಸುಬ್ರಹ್ಮಣ್ಯ ಶಾಸ್ತಿçà ಕೋಡಂದೂರು ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಹಾಯಧನದ ಚೆಕ್ ವಿತರಣೆ: ಸಂಘದ 17ಮಂದಿ ಸದಸ್ಯರಿಗೆ ಕ್ಯಾನ್ಸರ್ ಮತ್ತು ಡಯಾಲಿಸಿಸ್ ಚಿಕಿತ್ಸಾ ವೆಚ್ಚಕ್ಕಾಗಿ ಹಾಗೂ ಅಶಕ್ತ ವೃದ್ದರಾದ ಸುಂದರಿ ಕೂರೇಲು ಹಾಗೂ ಚಂದ್ರಮುಗೇರ ಕಾಯರ್ತಡ್ಕರವರಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳು, ಸದಸ್ಯರುಗಳು ವಿವಿಧ ಸಲಹೆ, ಸೂಚನೆಗಳನ್ನು ನೀಡಿದರು. ನಿರ್ದೇಶಕರಾದ ಬಾಲಚಂದ್ರ.ಕೆ, ತಾರಾನಾಥ ಆಳ್ವ, ಜಯರಾಮ ಕಾನ, ಚಂದಪ್ಪ ನಾಯ್ಕ, ವಿಘ್ನೇಶ್ವರ ಭಟ್, ಕಿಶೋರ್ ಕುಮಾರ್, ದಯಾನಂದ ಬಿ, ಪ್ರವೀಣ ಪ್ರಭು, ರಾಧಾಕೃಷ್ಣ ಪಿ, ಶ್ರೀಲತಾ ಬಿ, ಹರಿಣಾಕ್ಷಿ ಪಿ, ಸಂಘದ ಲೆಕ್ಕಿಗ ಪದ್ಮನಾಭ ಗೌಡ, ತೋರಣಕಟ್ಟೆ ಶಾಖಾ ವ್ಯವಸ್ಥಾಪಕ ವೀರಪ್ಪ ಮೂಲ್ಯ, ಅಡ್ಯನಡ್ಕ ಶಾಖಾ ವ್ಯವಸ್ಥಾಪಕ ಶಂಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಜನಾರ್ದನ ಭಟ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಪೂಜಾರಿ ವಾರ್ಷಿಕ ವರದಿ, ಲೆಕ್ಕ ಪರಿಶೋಧನಾ ವರದಿ, ಅನುಪಾಲನಾ ವರದಿ ಮಂಡಿಸಿದರು. ಹಿರಿಯ ಪತ್ರಕರ್ತ, ಸಂಘದ ಸದಸ್ಯ ಶಂಕರ್ ಸಾರಡ್ಕ ಹಾಗೂ ಸಂಘದ ಸಿಬ್ಬಂದಿ ನಮಿತಾ ಸನ್ಮಾನಿತರನ್ನು ಪರಿಚಯಿಸಿದರು. ಸಂಘದ ಸಿಬ್ಬಂದಿ ಕೃಷ್ಣರಾಜ್ ಸಹಾಯಧನ ಪಡೆದವರ ಪಟ್ಟಿ ಓದಿದರು. ಉಪಾಧ್ಯಕ್ಷ ಪ್ರೀತಂ ಪೂಂಜ ಅಗ್ರಾಳ ವಂದಿಸಿದರು. ಜಗನ್ನಾಥ ಸಂಕೇಶ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿಗಳು ಸಹಕರಿಸಿದರು. ಮಹಾಸಭೆಯ ಆರಂಭದಲ್ಲಿ ಉಪಾಹಾರ ಮತ್ತು ಮಹಾಸಭೆಯ ಬಳಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಸದಸ್ಯರ ಸಹಕಾರ, ಪ್ರೋತ್ಸಾಹದಿಂದ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಘವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಸಂಘವು ಗರಿಷ್ಠ ಲಾಭಾಂಶ ಪಡೆದುಕೊಂಡು ತಾಲೂಕಿನಲ್ಲಿಯೇ ಸುಭದ್ರ ಸಂಘವಾಗಿ ಹೆಸರು ಪಡೆದಿದೆ. ಸಂಘದ ಅಭಿವೃದ್ಧಿಯಲ್ಲಿ ಸಹಕರಿಸಿದವರಿಗೆಲ್ಲರಿಗೂ ಕೃತಜ್ಞತೆಗಳು. ಮುಂದಿನ ದಿನಗಳಲ್ಲಿ ಸಂಘದ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣ ಕಾರ್ಯ ಹಾಗೂ ಸಂಘದ ಅಭಿವೃದ್ಧಿ, ಬೆಳವಣಿಗೆಯಲ್ಲಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿ ನಮ್ಮೊಂದಿಗೆ ಕೈ ಜೋಡಿಸುವಂತೆ ವಿನಂತಿ.
ಜನಾರ್ದನ ಭಟ್ ಅಮೈ- ಅಧ್ಯಕ್ಷರು










