ಮಿತ್ತೂರು : ಕ್ಯಾಂಪ್ಕೋ ವತಿಯಿಂದ ಸಾಂತ್ವನ ಯೋಜನೆಯಡಿ ಆರ್ಥಿಕ ನೆರವು ಹಸ್ತಾಂತರ

0

ಮಿತ್ತೂರು: ಕ್ಯಾಂಪ್ಕೋ ಸಂಸ್ಥೆ, ಮಂಗಳೂರು ಇದರ ವತಿಯಿಂದ “ಸಾಂತ್ವನ – ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ” ಯೋಜನೆಯಡಿ ಆರ್ಥಿಕ ನೆರವಿನ ಸಹಾಯ ಧನ ಹಸ್ತಾಂತರ ಕಾರ್ಯಕ್ರಮವು ದಿನಾಂಕ ಆ.4ರಂದು ಕ್ಯಾಂಪ್ಕೋ ಮಿತ್ತೂರು ಶಾಖೆಯಲ್ಲಿ ನಡೆಯಿತು.

ಕ್ಯಾಂಪ್ಕೋ ಮಿತ್ತೂರು ಶಾಖೆಯ ಸಕ್ರಿಯ ಸದಸ್ಯ ಪಾಟ್ರಿಕ್ ಲಾಸ್ರೋಡೊ ಅವರ ವೈದ್ಯಕೀಯ ಚಿಕಿತ್ಸಾ ವೆಚ್ಚ – major hospitalizationಗಾಗಿ ಕ್ಯಾಂಪ್ಕೋ ವತಿಯಿಂದ ನೀಡಲಾದ ರೂ. 67,500/- ಸಹಾಯ ಧನವನ್ನು ಸಂಸ್ಥೆಯ ನಿರ್ದೇಶಕ ಗಣೇಶ್ ಅವರು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಚೀಫ್ ಮೆನೇಜರ್ ಪ್ರಕಾಶ್ ಕುಮಾರ್ ಶೆಟ್ಟಿ, ಪುತ್ತೂರು ರೀಜನ್, ವಿಟ್ಲ ಶಾಖಾಧಿಕಾರಿ ಅಮರೇಶ್ ಪಿ, ಮಿತ್ತೂರು ಶಾಖಾಧಿಕಾರಿ ಧನರಾಜ್ ಹಾಗೂ ಸದಸ್ಯರ ಮನೆಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here