






ಪುತ್ತೂರು: ಬೊಳುವಾರು ಶ್ರೀ ದುರ್ಗಾ ಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ದೇವಸ್ಥಾನದಲ್ಲಿ ಕ್ಷೇತ್ರದ ಯಕ್ಷ ಕಲಾ ಪ್ರತಿಷ್ಠಾನದ (ರಿ) ವತಿಯಿಂದ ನಡೆಸುವ ತಿಂಗಳ ತಾಳಮದ್ದಳೆ “ಪಾಂಡವ ಸ್ವರ್ಗಾರೋಹಣ” ಪ್ರಸಂಗ ಕಾರ್ಯಕ್ರಮವು ಆ.2ರಂದು ಮಧ್ಯಾಹ್ನ 2:30ರಿಂದ ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಗೋವಿಂದ ನಾಯಕ್ ಪಾಲೆಚ್ಚಾರು, ಶ್ರೀಪತಿ ನಾಯಕ್ ಅಜೇರು, ರಾಜಗೋಪಾಲ ಜೋಶಿ, ಕು.ಸಂಹಿತಾ ಸಹಕರಿಸಿದರು. ಚೆಂಡೆ, ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ಪ್ರಚೇತ್ ಆಳ್ವ, ರಿಷಭ್ ರಾಮ್, ಸುಧನ್ವ, ಅನೀಶ್, ಆಯುಷ್ ರೈ, ಸಮರ್ಥ್, ಧ್ರುವ, ಶ್ರೀನಿಧಿ, ಜ್ಞಾನಿತ್ ಮತ್ತು ಪ್ರತಿಷ್ಠಾನದ ಇತರ ವಿದ್ಯಾರ್ಥಿಗಳು ಸಹಕರಿಸಿದರು.



ಅರ್ಥಧಾರಿಗಳಾಗಿ ಗುಂಡ್ಯಡ್ಕ ಈಶ್ವರ ಭಟ್, ಗುಡ್ಡಪ್ಪ ಬಲ್ಯ, ಶಂಕರ ಸಾರಡ್ಕ, ಸುಬ್ಬಪ್ಪ ಕೈಕಂಬ, ಪ್ರಸನ್ನ ಕುಮಾರ್ ಬಳ್ಳಾಲ್, ಡಾ. ಗೀತಾ ಕುಮಾರಿ, ಜಗನ್ನಾಥ ಪುಣಚ, ಶಿವಪ್ರಸಾದ್ ಪೈವಳಿಕೆ, ಪ್ರಚೇತ್ ಆಳ್ವ ಸಹಕರಿಸಿದರು. ಪ್ರತಿಷ್ಠಾನದ ಪ್ರಸನ್ನ ಕುಮಾರ್ ಬಳ್ಳಾಲ್ ಸ್ವಾಗತಿಸಿದರು.
ಸಂಘದ ಸದಸ್ಯ ರಾಮ ಕೆ. ಧನ್ಯವಾಗೈದರು. ಶ್ರೀ ದುರ್ಗಾ ಉಳ್ಳಾಲ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ನಡೆಯುವ ಆಷಾಢ ಮಾಸದ ವಿಶೇಷ ದುರ್ಗಾಪೂಜೆಯ ಪ್ರಯುಕ್ತ ಆಗಸ್ಟ್ ತಿಂಗಳ ತಾಳಮದ್ದಳೆಯ ಪ್ರಾಯೋಜಕತ್ವವನ್ನು ದೇವಳದ ವಿಶ್ವಸ್ಥ ಮಂಡಳಿಯವರು ವಹಿಸಿದ್ದರು. ಯಕ್ಷಕಲಾ ಪ್ರತಿಷ್ಠಾನದ ವತಿಯಿಂದ ಧನ್ಯವಾದ ಸಮರ್ಪಿಸಲಾಯಿತು. ಸದಸ್ಯರಾದ ಭಾಸ್ಕರ ಶೆಟ್ಟಿ, ವಸಂತ ನಾಯಕ್ ಅಜೇರು, ಅನಂತನಾರಾಯಣ, ಬಾಲಸುಬ್ರಹ್ಮಣ್ಯ ಶರ್ಮ, ರಾಧಾಕೃಷ್ಣ ಬೋರ್ಕರ್, ಗಣೇಶ್ ಡಿ ಎಸ್, ಶ್ರೀ ಹರ್ಷ ಪುಣಚ ಮೊದಲಾದವರು ಸಹಕರಿಸಿದರು.










