ಪುತ್ತೂರು: ಚೆಕ್ ಅಮಾನ್ಯ ಪ್ರಕರಣ – 1.80 ಲಕ್ಷ ರೂ ಪಾವತಿಗೆ ಆದೇಶ

0

ಪುತ್ತೂರು:ಚೆಕ್ ಅಮಾನ್ಯ ಪ್ರಕರಣವೊಂದರಲ್ಲಿ ಆರೋಪಿಗೆ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.


ಪುತ್ತೂರು ಕಸಬಾ ನಿವಾಸಿ ಪ್ರದೀಪ್ ಶೆಟ್ಟಿ ಎಂಬವರು ತೆಂಕಿಲ ಬೈಪಾಸ್ ರೋಡ್ ನಿವಾಸಿ ಕಿಶನ್ ಡಿ.ಪಿ. ಎಂಬವರಿಗೆ ಸಾಲವಾಗಿ ನೀಡಿದ್ದ 1,30,000 ರೂ.ಗಳಿಗೆ ಕಿಶನ್ ಡಿ.ಪಿ.ಯವರು ನೀಡಿದ್ದ ಚೆಕ್ ಅಮಾನ್ಯಗೊಂಡಿದ್ದರಿಂದ ಪ್ರದೀಪ್ ಶೆಟ್ಟಿಯವರು ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯು 1,80,000 ರೂ.ನೀಡಬೇಕು. ತಪ್ಪಿದಲ್ಲಿ 6 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿತ್ತು.ಇದನ್ನು ಪ್ರಶ್ನಿಸಿ ಕಿಶನ್ ಡಿ.ಪಿರವರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅಫೀಲು ಮಾಡಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.ಪ್ರಕರಣದಲ್ಲಿ ದೂರುದಾರ ಪ್ರದೀಪ್‌ ಶೆಟ್ಟಿಯವರ ಪರವಾಗಿ ವಕೀಲರಾದ ದೇವಾನಂದ ಕೆ., ಮಿಥುನ್ ರೈ ಮತ್ತು ಹರಿಣಿ ವಾದಿಸಿದ್ದರು.

LEAVE A REPLY

Please enter your comment!
Please enter your name here