ತಾ|ಧ್ವನಿ, ಬೆಳಕು, ಶಾಮಿಯಾನ, ಡೆಕೋರೇಶನ್ಸ್ ಮಾಲಕರ ಸಂಘ

0

ಅಧ್ಯಕ್ಷ:ಯೋಗೀಶ್ ಕಾವು,ಕಾರ್ಯದರ್ಶಿ:ಶ್ರೀಹರ್ಷ ರೈ,ಕೋಶಾಧಿಕಾರಿ:ಗೋವರ್ಧನ್ ಶೆಟ್ಟಿ

ಪುತ್ತೂರು: ಪುತ್ತೂರು ತಾಲೂಕು ಧ್ವನಿ, ಬೆಳಕು, ಶಾಮಿಯಾನ, ಡೆಕೋರೇಶನ್ಸ್ ಮಾಲಕರ ಸಂಘದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದ್ದು, ನೂತನ ಅಧ್ಯಕ್ಷರಾಗಿ ಯೋಗೀಶ್ ಕಾವು, ಕಾರ್ಯದರ್ಶಿಯಾಗಿ ಶ್ರೀಹರ್ಷ ರೈ, ಕೋಶಾಧಿಕಾರಿಯಾಗಿ ಪಿ.ಗೋವರ್ಧನ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.


ಉಳಿದಂತೆ ಗೌರವಾಧ್ಯಕ್ಷರಾಗಿ ಶ್ಯಾಮ್ ಮಂಜುನಾಥ್ ಪ್ರಸಾದ್, ಉಪಾಧ್ಯಕ್ಷರಾಗಿ ಜೀವನ್ ಕಿಶೋರ್ ಫೆರ್ನಾಂಡೀಸ್, ಜೊತೆ ಕಾರ್ಯದರ್ಶಿಯಾಗಿ ವಿನ್ಸನ್ ಕಿಶೋರ್ ರೇಗೊ, ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ್ ಶೆಟ್ಟಿ, ಗೌರವ ಸಲಹೆಗಾರರಾಗಿ ಹಸನ್, ಸಿಪ್ರಿಯಾನ್ ಮೊರಾಸ್, ವಿಲಿಯಂ ಪಿಂಟೊ, ರಾಮಕೃಷ್ಣ ಕೆ, ನಾಗೇಶ್ ಕೆ.ಬಲ್ನಾಡು, ಸಮಿತಿ ಸದಸ್ಯರಾಗಿ ಅನೀಶ್ ಶೆಟ್ಟಿ, ಜನಾರ್ದನ ಕೆಮ್ಮಾಯಿ, ಸುಧೀರ್ ಬಲ್ನಾಡು, ವಸಂತ ಬೆಳ್ಳಿಪ್ಪಾಡಿ, ವಿಶ್ವನಾಥ ಪಂಚಮಿ, ನವೀನ್ ಜನನಿ, ಅಬ್ಬಾಸ್ ರಾಯಲ್, ಧನಂಜಯ ಪಂಚಾಕ್ಷರಿ, ಲೋಕೇಶ್ ಸ್ಕಂದ, ಸೀತಾರಾಮ ಬಲ್ನಾಡು, ಪ್ರಕಾಶ್ ಡಿ’ಸೋಜ ಆಶೀರ್ವಾದ, ಹೇಮಂತ್ ಸಾಲ್ಮರ, ಕೇಶವ ಸುವರ್ಣರವರು ಆಯ್ಕೆಯಾಗಿದ್ದಾರೆ.


ಆ.6:ಪದ ಪ್ರದಾನ:
ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಆ.6ರಂದು ಪೂರ್ವಾಹ್ನ ಪಡೀಲು ಎಂಡಿಎಸ್ ಸಭಾಂಗಣದಲ್ಲಿ ಜರಗಲಿದೆ. ಪುತ್ತೂರು ತಾಲೂಕು ಧ್ವನಿ, ಬೆಳಕು, ಶಾಮಿಯಾನ, ಡೆಕೋರೇಶನ್ಸ್ ಮಾಲಕರ ಸಂಘದ ಗೌರವಾಧ್ಯಕ್ಷ ಶ್ಯಾಮ್ ಮಂಜುನಾಥ್ ಪ್ರಸಾದ್ ರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಪುತ್ತೂರು ತಾಲೂಕು ಧ್ವನಿ, ಬೆಳಕು, ಶಾಮಿಯಾನ, ಡೆಕೋರೇಶನ್ಸ್ ಮಾಲಕರ ಸಂಘದ ಅಧ್ಯಕ್ಷ ರಾಮಕೃಷ್ಣ ಕೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಡಾ|ಜಾನ್ ಬ್ಯಾಪ್ಟಿಸ್ಟ್ ಸಲ್ದಾನ್ಹಾ, ಉಪ್ಪಿನಂಗಡಿ ಹಿರಿಯ ಧಾರ್ಮಿಕ ಪಂಡಿತ ಎಸ್.ಬಿ ದಾರಿಮಿ, ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಧನರಾಜ್ ಶೆಟ್ಟಿ, ಶಾಮಿಯಾನ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ.ವಿಟ್ಲ, ಕರ್ನಾಟಕ ರಾಜ್ಯ ಶಾಮಿಯಾನ, ಡೆಕೋರೇಶನ್ಸ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಸಹ ಕಾರ್ಯದರ್ಶಿ ರಾಜಶೇಖರ ಶೆಟ್ಟಿ ಕುಡ್ತಮುಗೇರು, ಪುತ್ತೂರು ತಾಲೂಕು ಧ್ವನಿ, ಬೆಳಕು, ಶಾಮಿಯಾನ, ಡೆಕೋರೇಶನ್ಸ್ ಮಾಲಕರ ಸಂಘದ ಕಾನೂನು ಸಲಹೆಗಾರ ಶ್ರೀಗಿರೀಶ್ ಮಳಿ, ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿ’ಸೋಜರವರು ಭಾಗವಹಿಸಲಿದ್ದಾರೆ ಎಂದು ಸಂಘದ ಉಪಾಧ್ಯಕ್ಷ ನಾಗೇಶ್ ಕೆ.ಬಲ್ನಾಡು, ಕಾರ್ಯದರ್ಶಿ ಅನೀಶ್ ಶೆಟ್ಟಿ, ಕೋಶಾಧಿಕಾರಿ ಹರ್ಷ ರೈ ಕೆ, ಸಹ ಕಾರ್ಯದರ್ಶಿ ಗಣೇಶ್ ಶುಭಂ, ಸಂಘಟನಾ ಕಾರ್ಯದರ್ಶಿ ಯೋಗೀಶ್ ಕಾವು, ಗೌರವ ಸಲಹೆಗಾರರಾದ ಹೆನ್ರಿ ಡಿ’ಸೋಜ, ಸಿಪ್ರಿಯನ್ ಮೊರಾಸ್, ಮನೋಹರ್ ಶೆಟ್ಟಿ, ಪ್ರದೀಪ್ ಕೆ,ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here