ಕುಂಬ್ರ: ಮಳೆಗೆ ಹಿರಿಯ ವ್ಯಾಪಾರಿಯ ಗೂಡಂಗಡಿ ಧರಾಶಾಹಿ : ಮಣ್ಣಿನಡಿಗೆ ಬಿದ್ದ ಅಂಗಡಿ ಸಾಮಾನು, ಅಪಾರ ನಷ್ಟ

0

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ತೆರಳುವ ರಸ್ತೆಯ ಬದಿಯಲ್ಲಿದ್ದ ಹಿರಿಯ ವ್ಯಾಪಾರಸ್ಥ ಕೇಶವ ಶಾಂತಿನವರವರ ಗೂಡಂಗಡಿ ಜು.2ರಂದು ಸುರಿದ ಭಾರೀ ಮಳೆಗೆ ಮಗುಚಿ ಬಿದ್ದು ಅಂಗಡಿಯೊಳಗಿದ್ದ ಸ್ಟೇಷನರಿ ಐಟಂಗಳು ಸೇರಿದಂತೆ ಇತರ ಸಾಮಾನುಗಳು ಮಣ್ಣು ಪಾಲಾಗಿವೆ. ಇದರಿಂದಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ರಸ್ತೆಯ ಮೋರಿಯ ಅಂಚಿನಲ್ಲಿ ಕೇಶವ ಶಾಂತಿವನರವರ ಗೂಡಂಗಡಿ ಇದ್ದು ಮಳೆಯ ರಭಸಕ್ಕೆ ಸಿಮೆಂಟ್ ಇಟ್ಟಿಗೆಗಳು ಜರಿದು ಬಿದ್ದು ಇಡೀ ಗೂಡಂಗಡಿ ಧಾರಾಶಾಹಿಯಾಗಿದೆ. ಆದಿತ್ಯವಾರವಾಗಿದ್ದರಿಂದ ಅಂಗಡಿ ಮಾಲೀಕರು ಮನೆಯಲ್ಲಿದ್ದುದರಿಂದ ಪ್ರಾಣ ಹಾನಿ ತಪ್ಪಿದೆ ಎನ್ನಲಾಗಿದೆ. ಸ್ಥಳಕ್ಕೆ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ ಸೇರಿದಂತೆ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here