






ಪುತ್ತೂರು: ಮಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ (ಮೆಸ್ಕಾಂ) ಪುತ್ತೂರು ಗ್ರಾಮಾಂತರ ಹಾಗೂ ನಗರ ಉಪವಿಭಾಗಗಳ ವ್ಯಾಪ್ತಿಯ ಸಾರ್ವಜನಿಕ ಸಂಪರ್ಕ ಸಭೆಯು ಕುಂಬ್ರದಲ್ಲಿರುವ ಪುತ್ತೂರು ಗ್ರಾಮಾಂತರ ಉಪವಿಭಾಗ ಕಚೇರಿಯಲ್ಲಿ ಆ.5ರಂದು ನಡೆಯಿತು.


ಮಂಗಳೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಮೆಸ್ಕಾಂ ಸಲಹಾ ಸಮಿತಿ ಸದಸ್ಯರುಗಳು, ಸ್ಥಳೀಯ ಗ್ರಾಮಸ್ಥರು ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಇಡೆಂಜಿಲ, ಸವಣೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಳೆಯ ಹಾಗೂ ಸವೆದುಹೋದ ವಿದ್ಯುತ್ ತಂತಿಗಳನ್ನು ತಕ್ಷಣವೇ ಬದಲಾಯಿಸಬೇಕು. ಪಾಲ್ತಾಡಿ ಯ ನೆಲ್ಲಿಗುರಿಯಲ್ಲಿ ಪ್ರಸ್ತುತ ಇರುವ ವಿದ್ಯುತ್ ಅಭಾವ ಹಾಗೂ ವೋಲ್ಟೇಜ್ ಸಮಸ್ಯೆಯನ್ನು ನಿವಾರಿಸಲು ಹೆಚ್ಚುವರಿ ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಅಳವಡಿಸಬೇಕು. ವಿದ್ಯುತ್ ಕಂಬಗಳು ಹಾಗೂ ತಂತಿಗಳಿಗೆ ಅಪಾಯ ತರಬಹುದಾದ ಮರಗಳ ಕೊಂಬೆಗಳನ್ನು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ತೆರವುಗೊಳಿಸಿ, ಸುಗಮ ವಿದ್ಯುತ್ ಸರಬರಾಜಿಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಪವರ್‌ಮ್ಯಾನ್ ಹುದ್ದೆಗಳ ನೇಮಕಾತಿಯ ಕುರಿತು ಮಾತನಾಡಿದ ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ್ ಅವರು, ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇವಲ ೬ ಮಂದಿ ಮಾತ್ರ ಟೆಸ್ಟ್‌ಗೆ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.




ಪವರ್ ಮ್ಯಾನ್ ಹುದ್ದೆಗಳಿಗೆ ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಯುತ್ತಿದ್ದು, ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳು ಇತರ ಉನ್ನತ ಹುದ್ದೆಗಳಿಗೂ ಅರ್ಜಿ ಸಲ್ಲಿಸುವುದರಿಂದ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಭೆಗೆ ವಿವರಣೆ ನೀಡಿದರು. ಸುಮಾರು ೨ ಸಾವಿರ ಅರ್ಜಿಗಳಲ್ಲಿ ದ.ಕ ಜಿಲ್ಲೆಯಿಂದ ಕೇವಲ ೬ ಮಂದಿ ಟೆಸ್ಟ್‌ಗೆ ಆಯ್ಕೆಯಾಗಿದ್ದಾರೆ ಏಕೆಂದರೆ ಇಲ್ಲಿನ ಯುವಕರು ಮೆಸ್ಕಾಂ ಪವರ್‌ಮ್ಯಾನ್ ಹುದ್ದೆಗೆ ಅರ್ಜಿ ಹಾಕುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚು ಅಂಕ ಇದ್ದವರು ಬೇರೆ ಹುದ್ದೆಗಳ ಕಡೆಗೆ ಗಮನ ಹರಿಸುತ್ತಾರೆ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ, ಗ್ರಾಮಾಂತರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಹೆಚ್ ಶಿವಶಂಕರ್ ಉಪಸ್ಥಿತರಿದ್ದರು. ಸಭೆಯಲ್ಲಿ ಸಹಾಯಕ ಇಂಜಿನಿಯರ್ ಗುರುದೇವಿ ಮಂತ್ರಣ್ಣವರ, ಸಹಾಯಕ ಇಂಜಿನಿಯರ್ ಸ್ಮಿತಾ ಕೆ.ಎಸ್, ಶಾಖಾಧಿಕಾರಿ ರಮೇಶ್ ಬಿ, ಕುಂಬ್ರ ಕಿರಿಯ ಇಂಜಿನಿಯರ್ ರವೀಂದ್ರ ಎಂ, ಸಹಾಯಕ ಇಂಜಿನಿಯರ್ ನಿತಿನ್ ಕುಮಾರ್, ಬೆಟ್ಟಂಪಾಡಿ ಕಿರಿಯ ಇಂಜಿನಿಯರ್ ಪುತ್ತು ಜೆ, ಈಶ್ವರಮಂಗಲ ಕಿರಿಯ ಇಂಜಿನಿಯರ್ ರಮೇಶ್ ಕೆ, ಸಹಾಯಕ ಇಂಜಿನಿಯರ್ ರಾಜೇಶ್ ಕೆ, ಸವಣೂರು ಕಿರಿಯ ಇಂಜಿನಿಯರ್ ರಾಜೇಶ್ ಕುಮಾರ್ ಕೆ.ವಿ, ಬನ್ನೂರು ಕಿರಿಯ ಇಂಜಿನಿಯರ್ ದುರ್ಗಾಸಿಂಗ್, ಸಹಾಯಕ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಕೆ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರುಗಳಾದ ದಿನೇಶ್ ಕರ್ಕೆರ, ಶ್ರೀನಿವಾಸ್, ಕೇಶವ ಸುವರ್ಣ, ಶಾಂತರಾಮ ರೈ ಇ, ಅಬ್ದುಲ್ ರಹೀಂ, ಸಲಹಾ ಸಮಿತಿ ಸದಸ್ಯರುಗಳಾದ ಹರಿಣಾಕ್ಷಿ, ಚಂದ್ರಕಲಾ ಮುಕ್ವೆ, ಬಾಬು ಮರಿಕೆ ಆರ್ಯಾಪು, ಸುಬ್ಬಣ್ಣ ಕರ್ನೂರು, ಕೆ.ಬಾಬು ರೈ, ಅಬ್ದುಲ್ ಅಝೀಜ್, ಎ.ಎಂ ಅಬ್ದುಲ್ ಕುಂಞ, ಎ.ಶ್ರೀಧರ ಪಾಲ್ತಾಡಿ, ಗ್ಯಾರಂಟಿ ಸಮಿತಿ ಸದಸ್ಯ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಗೋಪಾಲಕೃಷ್ಣ ಜಿ, ರವೀಂದ್ರನಾಥ ರೈ ಬಿ, ವಿನಯ ಕುಮಾರ್, ಫೌಝಿಯಾ ಇಬ್ರಾಹಿಂ, ಇಬ್ರಾಹಿಂ ಪಲ್ಲತ್ತೂರು, ಯೋಗೀಶ್ ರೈ, ಕಮಲೇಶ್, ರವೀಂದ್ರ ಕಾವು ಮಾಡ್ನೂರು, ಸುಬ್ರಹ್ಮಣ್ಯ ಕೆ, ಕೆ.ಮೋನಪ್ಪ ಪೂಜಾರಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಉಪ ಕೇಂದ್ರದ ಸಹಾಯಕ ಮಳಿಯಪ್ಪ ಸಹಕರಿಸಿದ್ದರು.










