






ಪುತ್ತೂರು: ಕೆಮ್ಮಾಯಿ ಭರತ್‌ಪುರದ ಶ್ರೀಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್‌ನ ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದ ವತಿಯಿಂದ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ಡಯಾಲಿಸ್ ರೋಗಿಗಳಿಗೆ ನೀಡಲಾಗುವ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಯ ೪೬ನೇ ಯೋಜನೆಯ ಕಾರ್ಯಕ್ರಮ ಸೇವಾಶ್ರಮದಲ್ಲಿ ನಡೆಯಿತು.


ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆಯ ವೈದ್ಯರಾದ ಡಾ. ನಿರಂಜನ್ ರೈ ಕಿಟ್ ವಿತರಿಸಿ ಮಾತನಾಡಿ ಆಹಾರ ಮತ್ತು ವಿಹಾರ ಸರಿಯಿಲ್ಲದೆ ಬಾಲ್ಯದಿಂದಲೇ ನಿರುತ್ಸಾಹ, ಮಾನಸಿಕ ಒತ್ತಡ, ಕ್ರಮೇಣ ಬಿಪಿ, ಶುಗರ್ ಬರುತ್ತದೆ. ಉತ್ತಮ ಅಭ್ಯಾಸ ಬೆಳಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು.



ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಟ್ರಸ್ಟ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸರಕಾರದ ಸಹಾಯಧನ – ಸವಲತ್ತು ಒದಗಿಸಿಕೊಡುವ ಭರವಸೆ ನೀಡಿದರು. ನಿರ್ವಸಿತರಿಗೆ ೩ ಸೆಂಟ್ಸ್ ಜಾಗ, ಮನೆ ನಿರ್ಮಾಣಕ್ಕೆ ಎರಡು ಲಕ್ಷ ರೂ. ಸರಕಾರದ ವತಿಯಿಂದ ದೊರಕುತ್ತಿದ್ದು ಬಡವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡು ರಂಗ ಬೊಳ್ಳಿ ಹಾಸ್ಯ ನಟ ರವಿ ರಾಮಕುಂಜ ಮಾತನಾಡಿ ಟ್ರಸ್ಟ್ ಜೊತೆ ನಾನಿದ್ದೇನೆ ಎಂದು ಆತ್ಮಸ್ಥೈರ್ಯ ತುಂಬಿದರು ಮತ್ತು ಹಾಸ್ಯ ಚಟಾಕಿ ಹಾರಿಸಿದರು.
ಟ್ರಸ್ಟ್ ಅಧ್ಯಕ್ಷರಾದ ಚೇತನ್ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ದೈವರಾಧಕರ ಸಂಘದ ಅಧ್ಯಕ್ಷ ಪ್ರಸಿದ್ಧ ದೈವ ನರ್ತಕ ಜನಾರ್ದನ ಬುಡೋಳಿ, ಬಂಟ್ವಾಳ ಬಡವರ ಬಂಧು ಸೇವಾ ಟ್ರಸ್ಟ್ ಸ್ಥಾಪಕ ಗುರುರಾಜ ಕುಕ್ಕಿಪಾಡಿ, ಟ್ರಸ್ಟ್ ಪೋಷಕ ಪ್ರವೀಣ್ ನಾಯ್ಕ್ (ಕೇಬಲ್) ಮತ್ತು ಮಂಜುನಾಥ್ ಕೆಮ್ಮಾಯಿ ಉಪಸ್ಥಿತರಿದ್ದರು.
ಟ್ರಸ್ಟಿ ಹಾಗೂ ಕಲಾವಿದ ಕೃಷ್ಣಪ್ಪ ಶಿವನಗರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸದಸ್ಯರಾದ ಪ್ರಮೀಳ ಪ್ರಾರ್ಥಿಸಿ ವನಿತಾ ವಂದಿಸಿ, ಪೋಷಕರಾದ ಜಯರಾಮ್ ಕಾಂಚನ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪಕಿ ಶೋಭಾ ಚೇತನ್, ಶ್ರೀಧರ ಮಡಿವಾಳ, ಮ್ಯಾನೇಜರ್ ಲಕ್ಷ್ಮಿ ಜಯರಾಮ್ ಹಾಗೂ ಟ್ರಸ್ಟ್ ಸದಸ್ಯರಾದ ಹರ್ಷಿತಾ. ಕಾವ್ಯ ಬನ್ನೂರು. ಆತ್ಮಿ, ದೀಕ್ಷಾ, ಕಾವ್ಯ ಈಶ್ವರಮಂಗಲ ವಿನೀತ್, ವನಿತಾ, ರಂಜಿತ್, ಪ್ರಮೋದ್, ಜಯಂತಿ ಕಾವು, ಮಿಥುನ್ ಸಹಕರಿಸಿದರು.
25 ಕುಟುಂಬಗಳಿಗೆ ಕಿಟ್ ವಿತರಣೆ
ದಾನಿಗಳಿಂದ ಸಂಗ್ರಹಿಸಿದ ಧನಸಹಾಯದಲ್ಲಿ ಅನಾರೋಗ್ಯ ಪೀಡಿತ ಅಶಕ್ತ 25 ಮಂದಿ ಕುಟುಂಬಗಳಿಗೆ ಗಣ್ಯರು ಆಹಾರ ಕಿಟ್ ವಿತರಿಸಿದರು. ಕಿಟ್ ಸ್ವೀಕರಿಸಿದ ಫಲಾನುಭವಿಗಳು ಅನಿಸಿಕೆ ವ್ಯಕ್ತಪಡಿಸಿದರು.










