






ಹಿರೇಬಂಡಾಡಿ: ಸೂರ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಹಿರೇಬಂಡಾಡಿ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ಆ.4ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಹಿರೇಬಂಡಾಡಿ ಗ್ರಾ.ಪಂ.ಪಿಡಿಒ ಸತೀಶ್ ಬಂಗೇರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಭವಾನಿ, ವಲಯ ಮೇಲ್ವಿಚಾರಕಿ ಸುವಿನ, ಎಫ್‌ಎಲ್‌ಸಿಆರ್‌ಪಿ ಗೀತಾ, ಬಿಆರ್‌ಪಿಇಪಿ ಕವಿತಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.



ಕಾರ್ಯದರ್ಶಿ ಕುಸುಮವತಿ ವರದಿ ವಾಚಿಸಿದರು. ಕೋಶಾಧಿಕಾರಿ ಜಯಂತಿ ಲೆಕ್ಕ ಪತ್ರ ಮಂಡಿಸಿದರು. ಜಯಶ್ರೀ ಸ್ವಾಗತಿಸಿದರು. ಕೃಷಿ ಸಖಿ ಸಂಪಾವತಿ ವಂದಿಸಿದರು. ಎಂಬಿಕೆ ಭವ್ಯ ಕಾರ್ಯಕ್ರಮ ನಿರೂಪಿಸಿದರು. ರಶ್ಮಿ, ದೀಪ್ತಿ ಪ್ರಾರ್ಥಿಸಿದರು. ಪುಷ್ಪಾವತಿ, ಇಂದಿರಾ ಸಹಕರಿಸಿದರು. ಸಂಜೀವಿನಿ ಒಕ್ಕೂಟದ ಸದಸ್ಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿತ್ತು.










