ಆ.9 ಪರಿವಾರ ಬಂಟರ ಸಂಘದಿಂದ ಆಟಿಕೂಟ

0


ಪುತ್ತೂರು: ಪರಿವಾರ ಬಂಟರ ಸಂಘ ಮಂಗಳೂರು, ಪರಿವಾರ ಬಂಟರ ಸಂಘ ಪುತ್ತೂರು ವಲಯ, ಮಹಿಳಾ ವೇದಿಕೆ ಮತ್ತು ಯುವ ಪರಿವಾರ ಬಂಟರ ವೇದಿಕೆ ಪುತ್ತೂರು ವಲಯದ ಸಹಭಾಗಿತ್ವದಲ್ಲಿ ಆ.9ರಂದು ಬೆದ್ರಾಳ ನೆಲ್ಲಿಕೇರಿಯಲ್ಲಿರುವ ದರ್ಬೆ ಸುನಂದ ಸಂಜೀವ ನಾಕ್ ರವರ ಮನೆಯಲ್ಲಿ ಪರಿವಾರ ಬಂಟರ `ಆಟಿಕೂಟ’ ನಡೆಯಲಿದೆ.

ಉದ್ಯಮಿ ಶಶಿಧರ್ ನಾೖಕ್ ಕಂರ್ಬಡ್ಕ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ನಿವೃತ್ತ ಉಪ ತಹಾಶೀಲ್ದಾರ್ ಚಂದ್ರಶೇಖರ್ ನಾೖಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪರಿವಾರ ಬಂಟರ ಸಂಘ ಬೆಂಗಳೂರು ವಲಯದ ಕಾರ್ಯದರ್ಶಿ ಉದ್ಯಮಿ ನಯನ ಚಂದ್ರ ನಾೖಕ್ ಮುಖ್ಯ ಅಭ್ಯಾಗತರಾಗಿದ್ದಾರೆ. ಪರಿವಾರ ಬಂಟರ ಸಂಘ ಕೇಂದ್ರ ಸಮಿತಿ ಅಧ್ಯಕ್ಷರಾದ ವಿಶ್ವನಾಥ ನಾೖಕ್ ಅರೆಹಳ್ಳಿ ಮತ್ತು ಉದ್ಯಮಿಗಳೂ ಪ್ರಗತಿಪರ ಕೃಷಿಕರೂ ಆಗಿರುವ ಅಶೋಕ್ ನಾೖಕ್ ತಲೆಮನೆ ಪಾಂಡಿ ಇವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಕೋಟಿಚೆನ್ನಯ ಜೊಡುಕರೆ ಕಂಬಳ ಸಮಿತಿಯ ಉಪಾಧ್ಯಕ್ಷರಾದ ಸುದರ್ಶನ್ ನಾೖಕ್ ಕಂಪ ರವರನ್ನು ಸನ್ಮಾನಿಸಲಾಗುವುದು, ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here