






ಪುತ್ತೂರು: ರೋಟರಾಕ್ಟ್ ಕ್ಲಬ್ ತಿಂಗಳಾಡಿ ಹಾಗೂ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇವರ ಜಂಟಿ ಆಶ್ರಯದಲ್ಲಿ ಆಗಸ್ಟ್ 08, 2026 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಿಂಗಳಾಡಿಯಲ್ಲಿ ‘ವನಮಹೋತ್ಸವ’ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ರೋ. ರವಿಕುಮಾರ್ ರೈ ವನಮಹೋತ್ಸವದ ಬಗ್ಗೆ ಮಾತನಾಡಿದರು. ರೋಟರಾಕ್ಟ್ ಕ್ಲಬ್ ತಿಂಗಳಾಡಿ ಅಧ್ಯಕ್ಷ ರೋ.ಪ್ರಜ್ವತ್ ರೈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ನಂತರ ಶಾಲಾ ಪರಿಸರದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಡಲಾಯಿತು.



ಕಾರ್ಯಕ್ರಮದಲ್ಲಿ ತಿಂಗಳಾಡಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಹಮೀದ್, ಸದಸ್ಯರಾದ ಆಶಾಲತಾ, ಲಲಿತಾ, ರೋಟರಿ ಕ್ಲಬ್ ಅಧ್ಯಕ್ಷ ರೋ. ರವಿಕುಮಾರ್ ರೈ, ಕಾರ್ಯದರ್ಶಿ ರೋ. ಅಕ್ಷತ್ ರೈ ಹಾಗೂ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.










