ವಿಟ್ಲ: ಕಳ್ಳತನಕ್ಕೆ ವಿಫಲ ಯತ್ನ- ಪ್ರಕರಣ ದಾಖಲು

0

ವಿಟ್ಲ: ಮನೆಯೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಕೇಪು ಗ್ರಾಮದ ಮಣಿಮುಂಡ ಎಂಬಲ್ಲಿ ನಡೆದಿದ್ದು, ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಮುಂಡ ನಿವಾಸಿ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ರವಿಶಂಕರ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.

ರವಿಶಂಕರ್ ಅವರ ತಾಯಿ ಜಲಜಾಕ್ಷಿ ಅವರು ವಾಸವಾಗಿದ್ದು, ಉಮೇಶ್ ಎಂಬಾತ ಅಕ್ರಮವಾಗಿ ಮನೆ ಆವರಣಕ್ಕೆ ಪ್ರವೇಶಿಸಿ, ಸಮೀಪದಲ್ಲಿದ್ದ ಅಡಿಕೆ ಒಣಗಿಸುವ ಶೆಡ್‌ನ ಬಾಗಿಲು ತೆರೆದು ಕಳ್ಳತನಕ್ಕೆ ಯತ್ನಿಸಿದ್ದಾನೆ. ಕಳ್ಳತನದ ಉದ್ದೇಶದಿಂದ ಬಂದಿದ್ದ ಆರೋಪಿಯ ಬಳಿ ಎರಡು ಚೀಲಗಳು ಹಾಗೂ ಒಂದು ಕತ್ತಿ ಇತ್ತು ಎಂದು ಜಲಜಾಕ್ಷಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಮನೆಯವರು ಎಚ್ಚೆತ್ತುಕೊಂಡ ಹಿನ್ನೆಲೆ ಕಳ್ಳತನದ ಯತ್ನ ವಿಫಲಗೊಂಡಿದೆ. ಘಟನೆ ಕುರಿತು ಜಲಜಾಕ್ಷಿ ಅವರು ನೀಡಿದ ದೂರಿನ ಆಧಾರದ ಮೇಲೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here