ಬಪ್ಪಳಿಗೆ ಜೈನಭವನದ ಬಳಿ ಮರದ ಕೊಂಬೆ ಮುರಿತ

0

ಪುತ್ತೂರು: ಬಪ್ಪಳಿಗೆ ಜೈನ ಭವನದ ಬಳಿಯಿರುವ ಅಶ್ವತ್ಥ ಮರದ ಕೊಂಬೆಯೊಂದು ಆ.11ರ ಬೆಳಿಗ್ಗೆ ಮುರಿದು ರಸ್ತೆಗೆ ಬಿದ್ದಿದೆ.
ಜೈನಭವದ ಮುಂಭಾಗದ ನಾಗನ ಕಟ್ಟೆಯಲ್ಲಿರುವ ಅಶ್ವತ್ಥ ಮರದ‌ ಕೊಂಬೆ ಮೂರು ರಸ್ತೆ ಸೇರುವ ಜಾಗದಲ್ಲಿ ಬೆಳಿಗ್ಗೆ ಮುರಿದು ಬಿದ್ದಿದೆ. ಬೆಳಿಗ್ಗೆ ವೇಳೆ ವಾಹನ ಸಂಚಾರ ವಿರಳವಾಗಿದ್ದರಿಂದ ಯಾವುದೇ ಅಪಾಯಗಳು ಸಂಭವಿಸಿಲ್ಲ. ಪಕ್ಕದಲ್ಲೇ ವಿದ್ಯುತ್ ಕಂಬ ಹಾಗೂ ಲೈನ್ ಗಳು ಹಾದುಹೋಗುತ್ತಿದ್ದರೂ ಯಾವುದೇ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here