






ಕಾಣಿಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರು ಇಲ್ಲಿ ನೂತನವಾಗಿ ಸ್ಕೌಟ್ಸ್, ಗೈಡ್ಸ್, ಕಬ್ ಮತ್ತು ಬುಲ್ ಬುಲ್ ದಳಗಳನ್ನು ನೂತನವಾಗಿ ಉದ್ಘಾಟಿಸಲಾಯಿತು.


ಕಾರ್ಯಕ್ರಮವನ್ನು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಅಂತಾರಾಷ್ಟ್ರೀಯ ಸ್ಕಾರ್ಫ್ ದಿನವನ್ನು ಕೂಡ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್ವರ ಅನಿಲ ವಹಿಸಿ ಶುಭ ಹಾರೈಸಿದರು.



ಶಾಲಾ ಮುಖ್ಯಗುರು ಶಶಿಕಲಾರವರು ಪ್ರಸ್ತಾವಿಕದೊಂದಿಗೆ ಪ್ರತಿಜ್ಞೆ ಯನ್ನು ಬೋಧಿಸಿದರು. ವೇದಿಕೆಯಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಯಶೋಧ ನೆರೋಲ್ತಡ್ಕ,ಎಸ್ ಡಿ ಎಂ ಸಿ ಸದಸ್ಯ ಚಂದ್ರಶೇಖರ ಬೈತಡ್ಕ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಮಣ್ಣ ಗೌಡ ಮುಗರಂಜ, ಪೋಷಕರಾದ ಬೆಳಿಯಪ್ಪ ಗೌಡ ಎಳುವೆ ಉಪಸ್ಥಿತರಿದ್ದರು. ಶಿಕ್ಷಕಿ ಸುಜಯ ಸ್ವಾಗತಿಸಿ, ಗೌರವ ಶಿಕ್ಷಕಿ ದಿವ್ಯ ವಂದಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿಯರು ಸಹಕರಿಸಿ ಕಾರ್ಯಕ್ರಮ ನಡೆಸಿಕೊಟ್ಟರು.










