ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ : ಆಟಿ ಐಸಿರಿ, ಪ್ರತಿಭಾ ಪುರಸ್ಕಾರ, ವನಮಹೋತ್ಸವ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ 

0

ಬಡಗನ್ನೂರು: ಮರಾಟಿ ಸಮಾಜ ಸೇವಾ ಸಂಘ (ರಿ) ಕೊಂಬೆಟ್ಟು ಇದರ ಗ್ರಾಮೀಣ ಶಾಖೆ ಮರಾಟಿ ಸಮಾಜ ಸೇವಾ ಸಂಘ ಪಡುಮಲೆ ಇದರ ವಾರ್ಷಿಕ ಮಹಾಸಭೆ, ಆಟಿ ಐಸಿರಿ ವನಮಹೋತ್ಸವ ,ಮತ್ತು ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮವು ಆ.9 ಪಡುಮಲೆ ಮೈಂದನಡ್ಕ ಶ್ರೀಧರ ನಾಯ್ಕರವರ ಮನೆಯಲ್ಲಿ ನಡೆಯಿತು.

ವನಮಹೋತ್ಸವ ಆಚರಣೆ
ಕಾರ್ಯಕ್ರಮದ ಆರಂಭದಲ್ಲಿ ವನಮಹೋತ್ವವ ಆಚರಣೆ ಮಾಡಲಾಯಿತು. ಪುತ್ತೂರು ದರ್ಬೆ ನಿವೃತ್ತ ಅಂಚೆ ಪಾಲಕ ಲಕ್ಷ್ಮಣ ನಾಯ್ಕ ಕೆ. ಕುತ್ಯಾಡಿ,  ಬಾದಮ್ ಮಾವಿನ ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷೆ ಯಮುನಾ ವೈ.ಕೆ., ಅಧ್ಯಕ್ಷ ಅಪ್ಪಯ್ಯ ನಾಯ್ಕ ತಲೆಂಜಿ, ಕಾರ್ಯದರ್ಶಿ ನಾರಾಯಣ ನಾಯ್ಕ ಪೇರಾಲು,ಕೋಶಾಧಿಕಾರಿ ಶ್ರೀಧರ ನಾಯ್ಕ ನೇರ್ಲಂಪಾಡಿ  ಮತ್ತಿರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಮಂಜುನಾಥ ಎನ್.ಎಸ್. ಉದ್ಘಾಟಿಸಿ ಮಾತನಾಡಿ, ಪಡುಮಲೆ ಮರಾಟಿ ಸಮಾಜ ಸೇವಾ ಸಂಘ ಯಾವುದೇ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ಒಂದು ಕ್ರಿಯಾಶೀಲ ಸಂಘಟನೆ. ಗ್ರಾಮೀಣ ಪ್ರದೇಶದಲ್ಲಿ ಒಂದು ಸಂಘವನ್ನು ಹುಟ್ಟು ಹಾಕಿ ಸತತ 11 ವರ್ಷಕಾಲ ವಿವಿಧ ಕಾರ್ಯಕ್ರಮವನ್ನು ಅಯೋಜನೆ ಮಾಡಿಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸಿದ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿ ಆಟಿ ತಿಂಗಳ ಕಷ್ಟದ ದಿನಗಳನ್ನು ಖುಷಿಯಾಗಿ ಸಂಭ್ರಮಿಸುವುದು ಸಂಪತ್ತು ಕಷ್ಟ ದಿನದ ಆಚರಣೆ ದಿವಂಗತ ವೖೆ.ಕೆ ನಾಯ್ಕ  ರವರ ಮೂಲಕ ಆರಂಭಿಸಿ  ಆಟಿ ಐಸಿರಿಯಾಗಿ ಸಂಭ್ರಮಿಸುತ ವಿವಿಧ ರಂಗಗಳಲ್ಲಿ ಸಾಧನೆಗೖೆದ ಸಾಧಕರನ್ನು ಸನ್ಮಾನಿಸಿರುವುದು ಖುಷಿ ತಂದಿದೆ ಎಂದ ಅವರು ಮಾತೃ ಸಂಘ ಕೊಂಬೆಟ್ಟು ಮರಾಠಿ ಸಮಾಜ ಸೇವಾ ಸಂಘ ಸ್ಥಾಪನೆಗೊಂಡು 2027ಕ್ಕೆ 50 ವರ್ಷ ಪೂರ್ಣಗೊಳ್ಳಲ್ಲಿದ್ದು ಈ ನಿಟ್ಟಿನಲ್ಲಿ 50 ವರ್ಷಗಳ ಸಂಭ್ರಮಾಚರಣೆ ಸಂಭ್ರಮದ ಈ ಸಂಧರ್ಭ ಸಂಘದ ಅಧ್ಯಕ್ಷರನ್ನಾಗಿ ನನನ್ನು ಆಯ್ಕೆ ಮಾಡಿದ್ದಾರೆ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು  ತಮ್ಮೆಲ್ಲರ  ಸಹಕಾರ ಅಗತ್ಯ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೖೆಸಿದರು.

ಅತಿಥಿಗಳಾಗಿ ಆಗಮಿಸಿದ  ಪುತ್ತೂರು ಕೊಂಬೆಟ್ಟು ಮಹಿಳಾ ವೇದಿಕೆ ಕಾರ್ಯದರ್ಶಿ ಸುಬ್ಬಕ್ಕ ಮೋಹನ ನಾಯ್ಕ ಮಾತನಾಡಿ ತುಳುನಾಡಿ  ಆಟಿ ತಿಂಗಳ ಮಹತ್ವ ಮತ್ತು  ವಿವಿಧ ತಿಂಡಿ ತಿನಿಸುಗಳ ಬಗ್ಗೆ ತಿಳಿಸಿದರು. 

ಪುತ್ತೂರು ದರ್ಬೆ ನಿವೃತ್ತ ಅಂಚೆ ಪಾಲಕ ಲಕ್ಷ್ಮಣ ನಾಯ್ಕ ಕೆ. ಕುತ್ಯಾಡಿ,  ಆಟಿ ಅಪಾವಿತ್ರ ತಿಂಗಳು  ಮತ್ತು ಕಷ್ಟದ ತಿಂಗಳು ಹಿಂದಿನ ಕಾಲದಲ್ಲಿ ತಮ್ಮ ಹಿರಿಯರು ಗೆಡ್ಡೆ ಗೆಣಸು ತಿಂದು ಜೀವನ ಮಾಡುತ್ತಿದ್ದರು. ಆದರೆ ಇಂದು  ಯಾವುದೇ ಕಷ್ಟ ಇಲ್ಲ. ಸುತ್ತ ಮುತ್ತ ಬೆಳೆಯುವ ಗಿಡಮೂಳಿಕೆ ಆಹಾರ ಪದಾರ್ಥ ಬೇಕಿಲ್ಲ  ಬೇಕಾದನ್ನು ಪಟ್ಟಣ ಪ್ರದೇಶದಿಂದ ತರುತ್ತಾರೆ  ಎಂದ ಅವರು ಇಂತಹ ಕಾರ್ಯಕ್ರಮ ಕಷ್ಟ ದಿನಗಳನ್ನು ನೆನಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪುತ್ತೂರು ಕೊಂಬೆಟ್ಟು ಮರಾಟಿ ಯುವ ವೇದಿಕೆಯ ಅಧ್ಯಕ್ಷ ನವೀನ ಕುಮಾರ್ ಕೆ.  ಸಂಧರ್ಭೊಚಿತ ಮಾತನಾಡಿ ಶುಭ ಹಾರೖೆಸಿದರು. ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಪ್ಪಯ್ಯ ನಾಯ್ಕ ತಲೆಂಜಿ ರವರ ಸಭಾಧ್ಯಕ್ಷತೆವಹಿಸಿ ಮಾತನಾಡಿ  ಸಮಾಜ ಬಾಂಧವರ ಎಲ್ಲರ ಸಹಕಾರದಲ್ಲಿ   ಪೂಜ್ಯ ದಿವಂಗತ ವೖೆ ಕೆ ನಾಯ್ಕ ಅವರ ಅರ್ಶಿವಾದಗಳಿಂದ ಸಂಘ 11 ವರ್ಷಕ್ಕೆ ಪಾದರ್ಪಣೆ ಮಾಡಿ ಹನ್ನೊಂದನೇ ವರ್ಷ ಕಾರ್ಯಕ್ರಮದಲ್ಲಿದ್ದೇವೆ. ಮುಂದೆ ನಮ್ಮ ಸಂಘಕ್ಕೆ ಶಾಶ್ವತ ಕಟ್ಟಡ ಆಗಬೇಕು ಅನ್ನುವ ಕನಸು ನಮ್ಮದಾಗಿದೆ  ತಮ್ಮೆಲ್ಲರ ಸಹಕಾರದಲ್ಲಿ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗತ್ತಿದೆ ಮುಂದೆಯೂ  ತಮ್ಮ ಸಹಕಾರ ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷೆ ಯಮುನಾ ವೈ. ಕೆ., ಪುತ್ತೂರು ಕೊಂಬೆಟ್ಟು ಮಹಿಳಾ ವೇದಿಕೆ ಮಾಜಿ ಅಧ್ಯಕ್ಷೆ  ಮೀನಾಕ್ಷಿ ಮಂಜುನಾಥ್,  ನಿವೃತ್ತ ರೖೆಲ್ವೆ ಅಧಿಕಾರಿ ಕೃಷ್ಣ ನಾಯ್ಕ ಮುಡಿಪಿನಡ್ಕ, ಲ್ಯಾಂಪ್ ನಿವೃತ್ತ ಶಾಖಾಧಿಕಾರಿ,  ಹೊನ್ನಪ್ಪ ನಾಯ್ಕ ಅಮ್ಮುಂಜ, ಕರ್ನಾಟಕ ಬ್ಯಾಂಕ್ ನಿವೃತ್ತ ಉದ್ಯೋಗ  ರಾಮಣ್ಣ ನಾಯ್ಕ, ನಿವೃತ್ತ ಬಿ. ಎಸ್ ಎನ್ ಎಲ್  ರಾಮ ನಾಯ್ಕ ಪೇರಿಗೇರಿ,  ಕೋಶಾಧಿಕಾರಿ ಶ್ರೀಧರ ನಾಯ್ಕ ನೇರ್ಲಂಪಾಡಿ, ನಿಕಟಪೂರ್ವ ಕಾರ್ಯದರ್ಶಿ ನಿತಿನ್ ತಲೆಂಜಿ ಪದಾಧಿಕಾರಿಗಳಾದ ದೇವಪ್ಪ ನಾಯ್ಕ ಚಂದುಕೂಡ್ಲು, ಜಯಂತ ನಾಯ್ಕ ತಲೆಂಜಿ ಬುದ್ಧನಾಯ್ಕ ಚಂದುಕೂಡ್ಲು, ಸುಂದರ ನಾಯ್ಕ ತಲೆಂಜಿ, ಪುತ್ತೂರು  ಮಾತೃ ಸಂಘದ ಸದಸ್ಯರು , ಯುವ ವೇದಿಕೆ ಸದಸ್ಯರು ಮಹಿಳಾ ವೇದಿಕೆ ಸದಸ್ಯರು ಹಾಗೂ ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಸದಸ್ಯರು ಹಾಗೂ ಸಮಾಜ ಬಾಂಧವರು ಭಾಗವಹಿಸಿದ್ದರು 

ವಿವಿಧ ಸ್ಫರ್ಧೆಗಳು:
ಸಮಾಜದ ಮಹಿಳೆಯರಿಗೆ, ಪುರುಷರಿಗೆ ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು..

ಪುಸ್ತಕ ವಿತರಣೆ 
1 ರಿಂದ 10 ಮತ್ತುಪಿಯುಸಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ  ಹಾಗೂ ಅಂಗನವಾಡಿ ಮಕ್ಕಳಿಗೆ  ಪುಸ್ತಕ ವಿತರಣೆ ಮಾಡಲಾಯಿತು 

ಹಿರಿಯ ನಾಗರಿಕರಿಗೆ ಸನ್ಮಾನ :
ಸಮಾಜ ಹಿರಿಯ ನಾಗರಿಕರು, ಹಾಗೂ ಮಹಾಮ್ಮಯಿ ದೇವಿ ಪೂಜಾಕರ್ಮಿಗಳಾಗಿ ಸೇವೆ ಮಾಡುತ್ತಿರುವ ರಾಮಣ್ಣ ಪದಡ್ಕ, ಮತ್ತು ಈಶ್ವರ ನಾಯ್ಕ ಬೋಳಂಗೂಡೇಲು ಹಾಗೂ  ಮೇಸ್ತ್ರಿ ಕೆಲಸ ಮಾಡಿಕೊಂಡು ಸಂಘದ  ಅಭಿವೃದ್ಧಿಗೆ ಶ್ರಮಿಸಿದ  ಸೇಸಪ್ಪ ಕನ್ನಡ್ಕ ದಂಪತಿಗಳನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ  ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವಾ  ನಿವೃತ್ತಿ ಹೊಂದಿರುವ  ಪಡುಮಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪರಮೇಶ್ವರಿ ಸೋಣೆಗೇರಿ, ಇವರುಗಳನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮ ಅಯೋಜಿಸಿರುವ ಮನೆಯವರಾದ ಯಜಮಾನಿ ದೇವಕಿ, ಮೖೆಂದನಡ್ಕ ಹಾಗೂ ಶ್ರೀಧರ ನಾಯ್ಕ ಮತ್ತು ಸೌಮ್ಯ ದಂಪತಿಗಳನ್ನು ಶಾಲು ಪಲಪುಷ್ಪ ಹೂ ನೀಡಿ ಅಭಿನಂದಿಸಲಾಯಿತು. ಜೊತೆಗೆ ಮುಂದಿ ವರ್ಷದಲ್ಲಿ ಕಾರ್ಯಕ್ರಮ ಅಯೋಜನೆ ಮಾಡಲಿರುವ ಕೃಷ್ಣ ನಾಯ್ಕ ದಂಪತಿಗಳಿಗೆ ಹೂ ನೀಡಿ ಗೌರವಿಸಲಾಯಿತು.

ಕ್ರೀಡೆ ಮತ್ತು ಶಿಕ್ಷಣ  ಕ್ಷೇತ್ರದಲ್ಲಿ ಸಾಧಕರಿಗೆ ಸನ್ಮಾನ :
ಕನ್ನಡ ಮಾಧ್ಯಮ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ  ಇವರು ಭರತನಾಟ್ಯ ವಿದ್ವಾನ್ ಹಾಗೂ ಉತ್ತಮ ತ್ರೋಬಾಲ್ ಆಟಗಾರ್ತಿಯೂ ಆದ ದೀಕ್ಷಿತಾ ಪೇರಾಲು ಇವರು ವೖೆಧ್ರಕೀಯ ಶಿಕ್ಷಣದಲ್ಲಿ ಸ್ನಾತಕೋತ್ತರ ಪಡೆದು (MD) ಪ್ರಸ್ತುತ  ಮಂಗಳೂರು  ಯೆನಪೋಯ  ಹೋಮ್ಯೋಪತಿ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಪೇಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದೀಕ್ಷಿತಾ  ಪೇರಾಲು  ಳಹಾಗೂ  ಸಂಗೀತ ಕ್ಷೇತ್ರದಲ್ಲಿ ಸಾಧನೆಗೖೆದ ದೀವಿಕಾ ಪದಡ್ಕ ಇವರನ್ನು  ಶಾಲು ಹೊದಿಸಿ ಫಲಪುಷ್ಷ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಪ್ರತಿಭಾ ಪುರಸ್ಕಾರ
2025-26 ಸಾಲಿನ ಎಸ್ ಎಸ್ ಎಲ್. ಸಿ ಡಿಸ್ಟಿಂಕ್ಷನ್ ಪಡೆದು ಉತ್ತಿರ್ಣರಾದ  ಚೖೆತ್ರಾ, ಸುಳ್ಳಪದವು, ಲಾವಣ್ಯ ಮೂಂಡೋಲೆ, ಸಿಂಚನ ಮೖೆಂದನಡ್ಕ  ಇವರನ್ನು ಶಾಲು ಹಾಕಿ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ನಾರಾಯಣ ನಾಯ್ಕ ಪೇರಾಲು ಪ್ರಾಸ್ತಾವಿಕ ಮಾತನಾಡಿದರು. ಗೋಪಾಲ ನಾಯ್ಕ ದೊಡ್ಡಡ್ಕ ಸ್ವಾಗತಿಸಿದರು.ಸದಸ್ಯರಾದ ಕುಸುಮಾವತಿ ತಲೆಂಜಿ  ಗತಸಭೆಯ ವರದಿ ವಾಚಿಸಿ, ಸುಶೀಲ ಸೋಣಗೇರಿ ಲೆಕ್ಕ ಪತ್ರ ಮಂಡಿಸಿದರು. ವೇಧಕೃಷ್ಣ ನಾಯ್ಕ ಮುಡಿಪಿನ್ನಡ್ಕ ವಂದಿಸಿದರು. ಪಡುಮಲೆ ಮರಾಟಿ ಸಂಘದ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ನೀಲಗಿರಿ ಹಾಗೂ ಸದಸ್ಯ ರೇಖಾನಾಗರಾಜ್ ಪಟ್ಟೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here