







ಸವಣೂರು : ಪುಣ್ಚಪ್ಪಾಡಿ 38ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸೆ. 14ರಂದು ನಡೆಯುವ ಕಾರ್ಯಕ್ರಮದ ಬಗ್ಗೆ ಆ.9 ರಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಉತ್ಸವ ಸಮಿತಿಯ ಅಧ್ಯಕ್ಷರಾದ ಮಹೇಶ್ ಕೆ ಸವಣೂರುರವರ ಅಧ್ಯಕ್ಷತೆಯಲ್ಲಿ ಗೌರಿ ಸದನ ಸಭಾಂಗಣ ನೇರೋಳ್ತಡ್ಕದಲ್ಲಿ ಜರಗಿತು.


ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಉತ್ಸವ ಸಮಿತಿಯ ಅಧ್ಯಕ್ಷರಾದ ಮಹೇಶ್ ಕೆ ಸವಣೂರು, ಗೌರವಾಧ್ಯಕ್ಷರಾದ ಗಿರಿಶಂಕರ ಸುಲಾಯ, ಕಾರ್ಯದರ್ಶಿ ಪ್ರಮೋದ್ ಬೊಳ್ಳಾಜೆ, ಜೊತೆ ಕಾರ್ಯದರ್ಶಿ ನಿತಿನ್ ಪೂಜಾರಿಮೂಲೆ, ಕೋಶಾಧಿಕಾರಿ ಯತೀಶ್ ಕೊಂಬಕೆರೆ, ಗೌರಿ ಗಣೇಶ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಸಚಿನ್ ಕುಮಾರ್ ಜೈನ್, ಟ್ರಸ್ಟಿಗಳಾದ ರಾಜೇಶ್ವರಿ ಕೆ ಕನ್ಯಾಮಂಗಲ, ಶೀನಪ್ಪ ಶೆಟ್ಟಿ ನೆಕ್ಕರಾಜೆ, ಮಾಜಿ ಅಧ್ಯಕ್ಷರಾದ ಪ್ರಕಾಶ್ ರೈ ಸಾರಕರೆ, ಪುಣ್ಚಪ್ಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸೂರಪ್ಪ ಗೌಡ ಬದಿಯಡ್ಕ, ನಿರ್ದೇಶಕರುಗಳಾದ ಕರುಣಾಕರ ಸಾರಕರೆ, ಶಿವಪ್ರಸಾದ್ ರೈ ಸಾರಕರೆ, ಲೋಕೇಶ್ ಕನ್ಯಾಮಂಗಲ, ಸವಣೂರು ಹಾಲು ಉತ್ಪಾದಕ ಸಹಕಾರಿ ಸಂಘದ ನಿರ್ದೇಶಕ ಪ್ರಶಾಂತ್ ಗುಂಡ್ಯಡ್ಕ, ಸದಸ್ಯರುಗಳಾದ ಲಿಂಗಪ್ಪ ರೈ ಚೆಂಬುತ್ತೋಡಿ, ಸಂಪತ್ ಕುಮಾರ್ ಇಂದ್ರ, ಮೋಹಿತ್ ಕೆ ಕುಮಾರಮಂಗಲ, ರಾಜು ಕುಲಾಲ್ ಪುಣ್ಚಪ್ಪಾಡಿ, ಹೇಮಲತಾ ನೇರೋಳ್ತಡ್ಕ, ಸರೋಜಿನಿ ನೇರೋಳ್ತಡ್ಕ, ರಮಾನಾಥ ಕಟ್ಟತ್ತಾರು, ವಿಜಯ ಕುಮಾರ್ ಕುಮಾರಮಂಗಲ, ದಿಲೀಪ್ ಹೆಗ್ಡೆ ನೇರೋಳ್ತಡ್ಕ, ಸಾಂತಪ್ಪ ಗೌಡ ಸಾರಕರೆ, ಹರೀಶ್ ಸಾರಕರೆ, ಗಣೇಶ್ ಕೊಳಂಬೆತ್ತಡ್ಕ, ರಾಮಚಂದ್ರ ಕೊಳಂಬೆತ್ತಡ್ಕ, ಸಂತೋಷ್ ಕೊಳಂಬೆತ್ತಡ್ಕ, ತೀರ್ಥನ್ ಬೊಳ್ಳಾಜೆ, ದಿವಾಕರ ಗುಂಡ್ಯಡ್ಕ, ಸುಧಾಕರ ಬೊಳ್ಳಾಜೆ ಮೊದಲಾದವರು ಉಪಸ್ಥಿತರಿದ್ದರು.













