






ನಿಡ್ಪಳ್ಳಿ: ಪುತ್ತೂರು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ (ರಿ) ಪುತ್ತೂರು ಇದರ 14ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿ ಕೊರಗಜ್ಜ ಸಾನಿಧ್ಯದ ಎದುರಿನ ಗದ್ದೆಯಲ್ಲಿ ವರ್ಷದ ಲೇಸ್ ಆಟಿದ ಕೂಟೊಡು ಕೆಸರ್ದ ಗೊಬ್ಬುಲು ಎಂಬ ವಿನೂತನ ಕಾರ್ಯಕ್ರಮ ಆ.9 ರಂದು ನಡೆಯಿತು.



ಕರ್ನಾಟಕ ರಾಜ್ಯ ನಲಿಕೆಯವರ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ದಯಾನಂದ ಸೇರಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಕಳಸಕ್ಕೆ ಭತ್ತ ತುಂಬಿಸಿ- ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.



ಅತಿಥಿ ಪುತ್ತೂರು ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ ಮಾತನಾಡಿ ಶಾಸಕರ ಮೂಲಕ ರಸ್ತೆ ಕಾಂಕ್ರೀಟೀಕರಣ, ನಿರ್ವಸಿತರಿಗೆ ನಿವೇಶನ ಮತ್ತು ಮನೆ ನಿರ್ಮಿಸಲು ಎರಡು ಲಕ್ಷ ಸರಕಾರದ ಸವಲತ್ತು ಪಡೆದು ಕೊಳ್ಳುವಂತೆ ಮನವಿ ಮಾಡಿದರು.

ಸ್ಥಾಪಕ ಅಧ್ಯಕ್ಷರಾದ ಚಂದ್ರ ಇದ್ಪಾಡಿ ಮಾತನಾಡಿ ದೈವ ನರ್ತನ, ಆಟಿ ಕಳೆಂಜ ಇತ್ಯಾದಿ ಧಾರ್ಮಿಕ ಸಂಪ್ರದಾಯಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ, ಛದ್ಮವೇಷದಲ್ಲಿ ಪ್ರದರ್ಶಿಸ ಬಾರದೆಂದು ತಿಳಿಸಿದರು.
ನಮ್ಮ ಜನಾಂಗವನ್ನು ಬೇರೆ ಬೇರೆ ತಾಲೂಕು ಜಿಲ್ಲೆಗಳಲ್ಲಿ ನಲಿಕೆ, ನಲಿಕೆಯವ, ನಲ್ಕೆಯವ, ನಲ್ಕದಾಯ, ಅಜಿಲ, , ಅಜಲಾಯ, ಪಾಲ, ಪಾಣ, ಪಾಣಾರ, ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ.ಅದನ್ನೆಲ್ಲಾ ಬಿಟ್ಟು ಇಡೀ ದಕ್ಷಿಣ ಕನ್ನಡ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ನಲಿಕೆ ಎಂಬ ಒಂದೇ ಹೆಸರಿನಿಂದ ಗುರುತಿಸುವ ಹಾಗೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಕಿರಿಯರ ವಿಭಾಗದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಬಹುಮುಖ ಪ್ರತಿಭೆ ಎಲ್.ಕೆ. ಧರಣ್ ಮಾಣಿ ಇವರನ್ನು ಗೌರವಿಸಲಾಯಿತು.
ಹಿರಿಯರಾದ ಪಕೀರ ನಲಿಕೆ ಕುಕ್ಕುಪುಣಿ ಗದ್ದೆಗೆ ಹಾಲು ಎರೆಯುವ ಮೂಲಕ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಮಾಜಿ ರಾಜ್ಯಾಧ್ಯಕ್ಷ ಸುಬ್ರಾಯ ಕಲ್ಮಂಜ, ದೈವ ನರ್ತಕ ಕುಟ್ಟಿ ನಲಿಕೆ ಬುಳೇರಿಕಟ್ಟೆ, ಕ್ರೀಡಾ ಕಾರ್ಯದರ್ಶಿ ದೇವಿದಾಸ್ ಕುರಿಯ, ಆನಂದ ಕಾಂಚನ ಉಪಸ್ಥಿತರಿದ್ದರು. ಸಂಘದ ತಾಲೂಕು ಅಧ್ಯಕ್ಷ ಶ್ರೀಧರ ಪೆರ್ಲಂಪಾಡಿ ಅಧ್ಯಕ್ಷತೆ ವಹಿಸಿದ್ದರು.
ಸಂಜೆ ಸಮಾರೋಪ ಸಮಾರಂಭ
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಸಂಘದ ಸ್ಥಾಪಕಾಧ್ಯಕ್ಷ ಚಂದ್ರ ಇದ್ಪಾಡಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತಿಲ ಪರಿವಾರದ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ “ನಲಿಕೆ ಸಮಾಜ ಭಕ್ತಿ -ಶ್ರದ್ಧೆ -ನಂಬಿಕೆ- ಧಾರ್ಮಿಕ ಪರಂಪರೆ ಹಾಗೂ ದೈವಾರಾಧನೆಯನ್ನು ಬಿಡದೆ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಧರ್ಮರಕ್ಷಕರು ಎಂದರು. ನಂತರ ವಿವಿಧ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ನಿಡ್ಪಳ್ಳಿ ಗ್ರಾ. ಪಂ.ಮಾಜಿ ಸದಸ್ಯರಾದ ಅವಿನಾಶ್ ರೈ ಕುಚ್ಚಿಲ,ರಂಜನ್ ರೈ ದೇವತಾ ಮೂಲೆ ಜಿಲ್ಲಾ ಆರೋಗ್ಯ ಸಮಿತಿ ಸದಸ್ಯ ದಾಮೋದರ ಮುರ, ಮಾಜಿ ಅಧ್ಯಕ್ಷರುಗಳಾದ ಹೊನ್ನಮ್ಮ ಎಂಡೆಸಾಗು ಮತ್ತು ರವಿ ಎಂಡೆಸಾಗು , ಹಿರಿಯರಾದ ಕುಟ್ಟಿ ನಲಿಕೆ, ಚೆನ್ನಮ್ಮ ಸೇಡಿಯಾಪು,ಸಿ.ಎಚ್.ಒ ಛಲವಾದಿ ಲಕ್ಷ್ಮಿ, ಆಶಾ ಕಾರ್ಯಕರ್ತೆ ಸುಮತಿ,ತಾಲೂಕು ಸಂಘದ ಕಾರ್ಯದರ್ಶಿ ಕು. ರಕ್ಷಿತಾ ಪೆರ್ಲಂಪಾಡಿ, ಸಂಪ್ಯ ಗ್ರಾಮಾಂತರ ಠಾಣೆಯ ಹೆಡ್ ಕಾನ್ ಸ್ಟೇಬಲ್ ನಾಗರಾಜ ಕಣಿಯೂರು.ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಾಲಚಂದ್ರ ಕುಜುಂಬೋಡಿ, ಡೊಂಬಯ್ಯ ಕಾಪೆಜಾಲು, ಅಣ್ಣು ಕಡಬ ಪಣೆಮಜಲು, ಮ.ಸ. ನ ಸೇ.ಸಂಘದ ಅಧ್ಯಕ್ಷೆ ಉಮಾವತಿ ಬುಳೇರಿಕಟ್ಟೆ, ಕು.ಅರ್ಪಣ ಮುಂಡ್ಯ, ವೇದಾವತಿ ಅಡೆಕ್ಕಲ್, ಕೇಶವ ಕಬಕ, ಪ್ರಕಾಶ್ ಸವಣೂರು, ದೇಜಪ್ಪ ನಿಡ್ಪಳ್ಳಿ, ಆಶಾ ಕಾರ್ಯಕರ್ತೆ ಚಂದ್ರಾವತಿ ಕುಂಜೂರುಪಂಜ, ಲವಕುಮಾರ್ ಪೆರ್ಲಂಪಾಡಿ, ಶಿವಪ್ರಸಾದ್ ಕಡ್ಯ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಜಯರಾಮ ಕಾಂಚನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣ ಬುಳೇರಿಕಟ್ಟೆ ಮತ್ತು ಮೋಹನ ನಿಡ್ಪಳ್ಳಿ ಸ್ವಾಗತಿಸಿ, ಕಾರ್ಯದರ್ಶಿ ಭಾಸ್ಕರ ಕೆ. ವರದಿ ವಾಚಿಸಿದರು. ನಾರಾಯಣ ನಿಡ್ಪಳ್ಳಿ ವಂದಿಸಿದರು.
ರೋಹಿತ್ ಕುರಿಕ್ಕಾರ್ ಮತ್ತು ನಂದಿತ ಬುಳೇರಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು.ಸುಬ್ರಾಯ ಕಲ್ಮಂಜ, ದೇವಿದಾಸ್ ಕುರಿಯ, ಕುಕ್ಕುಪುಣಿ ಕುಟುಂಬಸ್ಥರು ಮತ್ತಿತರರು ಸಹಕರಿಸಿದರು.ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಗಳು ಎಲ್ಲರ ಮನರಂಜಿಸಿತು.
ದೈವ ನರ್ತನ, ಆಟಿ ಕಳೆಂಜ ಇತ್ಯಾದಿ ಧಾರ್ಮಿಕ ಸಂಪ್ರದಾಯಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ, ಛದ್ಮವೇಷದಲ್ಲಿ ಪ್ರದರ್ಶಿಸ ಬಾರದು. ನಮ್ಮ ಜನಾಂಗವನ್ನು ಬೇರೆ ಬೇರೆ ತಾಲೂಕು ಜಿಲ್ಲೆಗಳಲ್ಲಿ ನಲಿಕೆ, ನಲಿಕೆಯವ, ನಲ್ಕೆಯವ, ನಲ್ಕದಾಯ, ಅಜಿಲ, , ಅಜಲಾಯ, ಪಾಲ, ಪಾಣ, ಪಾಣಾರ, ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ.ಅದನ್ನೆಲ್ಲಾ ಬಿಟ್ಟು ಇಡೀ ದಕ್ಷಿಣ ಕನ್ನಡ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ನಲಿಕೆ ಎಂಬ ಒಂದೇ ಹೆಸರಿನಿಂದ ಗುರುತಿಸುವ ಹಾಗೆ ಕ್ರಮ ಕೈಗೊಳ್ಳಬೇಕು.
ಚಂದ್ರ ಇದ್ಪಾಡಿ ತಾಲೂಕು ನ.ಸ.ಸೇ. ಸಂಘದ ಸ್ಥಾಪಕಾಧ್ಯಕ್ಷ










