ಇಂಟರ್‌ಲಾಕ್ ರಸ್ತೆ ಕುಸಿತಗೊಂಡಲ್ಲಿ ಸಿಲುಕಿದ ಕಾರು

0

ಪುತ್ತೂರು:ಇಲ್ಲಿನ ಆದರ್ಶ ಆಸ್ಪತ್ರೆಯ ಬಳಿ ಭಾಗಶಃ ಕುಸಿತಗೊಂಡಿದ್ದ ಇಂಟರ್‌ಲಾಕ್ ರಸ್ತೆಯಲ್ಲಿ ಕಾರೊಂದು ಸಿಲುಕಿದ ಮತ್ತು ತಕ್ಷಣ ಸ್ಥಳೀಯರು ಕಾರನ್ನು ಎತ್ತಿ ಅಪಾಯದಿಂದ ಪಾರು ಮಾಡಿದ ಘಟನೆ ನಡೆದಿದೆ.


ಆದರ್ಶ ಆಸ್ಪತ್ರೆಯ ಬಳಿ ಪಂಚಮಿ ಹೊಟೇಲ್ ಎದುರು ಖಾಸಗಿ ಕಾಮಗಾರಿಯ ಸಂದರ್ಭ ಇಂಟರ್‌ಲಾಕ್ ರಸ್ತೆ ಭಾಗಶಃ ಕುಸಿತಗೊಂಡಿದ್ದು ಕಾರಿನ ಹಿಂಬದಿಯ ಚಕ್ರ ಕುಸಿತಗೊಂಡ ಜಾಗದಲ್ಲಿ ಸಿಲುಕಿತ್ತು.ಇನ್ನೇನು ಕಾರು ಗುಂಡಿಗೆ ಬೀಳಲಿದೆ ಎನ್ನುವಷ್ಟರಲ್ಲಿ ಸ್ಥಳೀಯರು ತಕ್ಷಣ ಬಂದು ಕಾರನ್ನು ಮೇಲಕ್ಕೆ ಎತ್ತಿ ಅಪಾಯದಿಂದ ಪಾರು ಮಾಡಿದ್ದಾರೆ.

LEAVE A REPLY

Please enter your comment!
Please enter your name here