ಈಶಾ ಗ್ರಾಮೋತ್ಸವ 2026 : ಪುತ್ತೂರು ಬಡಗನ್ನೂರಿನ ಎಸ್.ಕೆ.ವೈ.ಸಿ ಪಟ್ಟೆ ಫೈನಲ್ ಹಂತಕ್ಕೆ ಆಯ್ಕೆ

0

ಪುತ್ತೂರು: ಈಶಾ ಫೌಂಡೇಶನ್ ಆಯೋಜಿಸುವ ಗ್ರಾಮೋತ್ಸವ ಇದರ 18ನೇ ಆವೃತ್ತಿಯ ತ್ರೋಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಶ್ರೀಕೃಷ್ಣ ಯೂತ್ ಕ್ಲಬ್ ಮಹಿಳೆಯರ ತ್ರೋಬಾಲ್ ತಂಡವು ಕೊಯಮತ್ತೂರಿನ ಆದಿಯೋಗಿ ಸಮ್ಮುಖದಲ್ಲಿ ನಡೆಯುವ ಫೈನಲ್ ಹಂತದ ಪಂದ್ಯಾವಳಿಗೆ ಆಯ್ಕೆಯಾಗಿದೆ. 

ಆ.9ರಂದು  ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ ಡಿವಿಜನ್ ಮಟ್ಟದಲ್ಲಿ  ಪ್ರಥಮ ಸ್ಥಾನ ಪಡೆದು ಸೆಪ್ಟೆಂಬರ್ 4,5,6ರಂದು ಕೊಯಮತ್ತೂರಿನ ಆದಿಯೋಗಿ ಸನ್ನಿಧಿಯಲ್ಲಿ ನಡೆಯುವ ಭಾರತದ 10 ರಾಜ್ಯಗಳನ್ನೊಳಗೊಂಡ ಈಶಾ ಗ್ರಾಮೋತ್ಸವ ಪೖೆನಲ್ ಪಂದ್ಯಾಟಕ್ಕೆ ಆಯ್ಕೆಗೊಂಡಿದೆ. 

 ತಂಡದಲ್ಲಿ ಆಟಗಾರ್ತಿಯರಾಗಿ ರೇಖಾ ರೈ, ಶ್ವೇತಾ ಎಸ್.ರೈ, ಭವ್ಯಾ‚ ಸಾಕ್ಷಿ ರೈ‚ ವಾಣಿಶ್ರೀ‚ ದೀಪಶ್ರೀ‚ ಯಶ್ಮಿತಾ‚ ಹೇಮಲತಾ‚ ಭವಿತಾ  ಭಾಗವಹಿಸಿದ್ದರು.

ಆಲ್ರೌಂಡ್ ಆಟವನ್ನು ಪ್ರದರ್ಶಿಸಿದ ರೇಖಾ ರೈ 
ಡಿವಿಜನ್ ಮಟ್ಟದ ಪಂದ್ಯಾವಳಿಯುದ್ಧಕ್ಕೂ ಆಲ್ರೌಂಡ್ ಆಟವನ್ನು ಪ್ರದರ್ಶಿಸಿದ ರೇಖಾ ರೈ ಅತ್ಯುತ್ತಮ ಆಟಗಾರ್ತಿಯಾಗಿ ಮೂಡಿಬಂದು ಇ.ವಿ ಸ್ಕೂಟರ್ ತನ್ನದಾಗಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here