ಆ.16: ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್‌ನಿಂದ`ಎಕ್ಸೆಲೆನ್ಸಿಯಾ-2026′ ಕಾರ್ಯಕ್ರಮ

0

ಪುತ್ತೂರು: ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ `ಎಕ್ಸಲೆನ್ಸಿಯಾ-2026′ ಕಾರ್ಯಕ್ರಮವನ್ನು ಆ.16ರಂದು ನೇರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ನಡೆಯಲಿದೆ.

“Beyond Marks, Beyond Obstacles” ಎಂಬ ಘೋಷವಾಕ್ಯದಡಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧಕರಿಗೆ ಸನ್ಮಾನ, ರ್‍ಯಾಂಕ್ ಗಳಿಸಿದ ವಿದ್ಯಾರ್ಥಿಗಳ ಯಶಸ್ಸಿನ ಪಯಣದ ಹಂಚಿಕೆ, ಗಣ್ಯರಿಂದ ಪ್ರೇರಣಾದಾಯಕ ಉಪನ್ಯಾಸ ಹಾಗೂ ಯುವಜನತೆಗೆ ಸ್ಪೂರ್ತಿ ತುಂಬುವ ವಿಶೇಷ ಅಧಿವೇಶನ ನಡೆಯಲಿವೆ.


ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇದರ ಉಪಕುಲಪತಿ ಪ್ರೊ. ಡಾ.ಎ.ಎಂ ಖಾನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕತಾರ್ ರಾಷ್ಟ್ರೀಯ ಅಂಡರ್-19 ಕ್ರಿಕೆಟ್ ತಂಡದ ಆಟಗಾರ ಎಸ್ಸಾಮ್ ಮನ್ಸೂರ್ ಅವರನ್ನು ವಿಶೇಷವಾಗಿ ಗೌರವಿಸಲಾಗುವುದು. ಪ್ರೇರಣಾತ್ಮಕ ಭಾಷಣಕಾರರಾಗಿ ಡಾ. ಮೊಹಮ್ಮದ್ ವಾಸಿಫ್ (DM Neurology, AIIMS ನವದೆಹಲಿ, ಫೋರ್ಟಿಸ್ ಆಸ್ಪತ್ರೆ, ದೆಹಲಿ), ಡಾ. ಖತೀಜಾ ಸಲ್ವಾ (MD Ophthalmology, AIIMS ನವದೆಹಲಿ) ಭಾಗವಹಿಸಲಿದ್ದಾರೆ. ಇದಲ್ಲದೆ ಫಾರ್ಮೆಡ್ ಲಿಮಿಟೆಡ್ ಬೆಂಗಳೂರು ಇದರ ಸೀನಿಯರ್ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಡಾ. ಉಮ್ಮರ್ ಬೀಜದಕಟ್ಟೆ, ಚಾರ್ಟರ್ಡ್ ಅಕೌಂಟೆಂಟ್ ಸಿಎ ಅಬ್ದುಲ್ ಖಾದರ್ ತಮೀಮ್ ಹಾಗೂ ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್, ದೆಹಲಿ-ಎನ್‌ಸಿಆರ್‌ನ ಅಂತಿಮ ವರ್ಷದ ಃಃಂ ಐಐಃ ವಿದ್ಯಾರ್ಥಿ ಜಸೀಮ್ ಅಹ್ಮದ್ ಸಿರಾಜ್ ಅವರು ಭಾಗವಹಿಸಲಿದ್ದಾರೆ.


ಬೆಳಿಗ್ಗೆ 9 ಗಂಟೆಗೆ ಆರಂಭಗೊಳ್ಳಲಿರುವ ಕಾರ್ಯಕ್ರಮವನ್ನು ಇಇಎಫ್ ಕೌನ್ಸಿಲರ್ ಡಾ. ವಾಜಿದಾ ಬಾನು ನಡೆಸಿಕೊಡಲಿದ್ದು, ಪ್ರೇರಣಾದಾಯಕ ಭಾಷಣಕಾರ ರಫೀಕ್ ಮಾಸ್ಟರ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್‌ನ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here