







ಉಪ್ಪಿನಂಗಡಿ: ವಿಮ್ (ವುಮೆನ್ ಇಂಡಿಯಾ ಮೂವ್‌ಮೆಂಟ್) ಉಪ್ಪಿನಂಗಡಿ ಬ್ಲಾಕ್ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಫಾಹಿನ ನಝೀರ್, ಉಪಾಧ್ಯಕ್ಷರಾಗಿ ಫಾತಿಮಾ ನಿರ್ಮಾ, ಕಾರ್ಯದರ್ಶಿಯಾಗಿ ನುಶ್ರತ್, ಜೊತೆ ಕಾರ್ಯದರ್ಶಿಯಾಗಿ ಆಶುರ ಆತೂರು ಹಾಗೂ ಕೋಶಾಧಿಕಾರಿಯಾಗಿ ಮೆಹರು ಅಬ್ದುಲ್ ಖಾದರ್ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ನೆಬೀಸ ಮಠ ಹಾಗೂ ಫೌಝಿಯಾ ಕಲ್ಲಡ್ಕ ಆಯ್ಕೆಯಾಗಿದ್ದಾರೆ.


ಚುನಾವಣಾ ಪ್ರಕ್ರಿಯೆಯನ್ನು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯರು ಹಾಗೂ ವಿಮ್‌ನ ಕೋಆರ್ಡಿನೇಟರ್ ಝೀನತ್ ಬಂಟ್ವಾಳ ಮತ್ತು ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಝೈನಾಬ್ ಬಂಟ್ವಾಳ ಅವರು ನಡೆಸಿಕೊಟ್ಟರು.
ಫಾತಿಮಾ ನಿರ್ಮಾ ಸ್ವಾಗತಿಸಿದರು. ಫಾಹಿನ ನಝೀರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಝೀನತ್ ಬಂಟ್ವಾಳ ಪಕ್ಷದ ಕುರಿತಾಗಿ ತರಬೇತಿ ನೀಡಿದರು.













