ಬುರೂಜ್: 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

0

ಬಂಟ್ವಾಳ, ಮೂಡುಪಡುಕೋಡಿ: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಯಾರ ಪೆಟ್ರೋಲ್ ಬಂಕ್ ಕಾವಳಕಟ್ಟೆಯಿಂದ ಎನ್.ಸಿ. ರೋಡ್ ವರೆಗೆ ಮೆರವಣಿಗೆ ನಡೆಯಿತು.

ಶಾಲಾ ಸ್ಕೌಟ್ಸ್-ಗೈಡ್ಸ್, ಕಬ್-ಬುಲ್ ಬುಲ್ ವಿದ್ಯಾರ್ಥಿಗಳು ಶಾಲಾ ಸಂಚಾಲಕರ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡರು.ಕಾರ್ಯಕ್ರಮದ ಧ್ವಜಾರೋಹಣವನ್ನು ಖ್ಯಾತ ಸ್ಯಾಕ್ಸ್ ಫೋನ್ ವಾದಕರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೆ.ಬಾಬು ಸಪಲ್ಯ ಅವರು ನೆರವೇರಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಆನಂದ್ ಆಚಾರ್ಯ, ಸ್ಕೌಟ್ಸ್-ಗೈಡ್ಸ್ ವಾಮದಪದವು ಸ್ಥಳೀಯ ಸಂಸ್ಥೆ, ಹೈದರ್ ಧೂಮಳಿಕೆ – ಅಧ್ಯಕ್ಷರು ಬಿಸ್ಮಿಲ್ಲಾ ಜುಮ್ಮಾ ಮಸೀದಿ ಧೂಮಳಿಕೆ, ಪ್ರಶಾಂತ್ ಜೈನ್ – ಮಾಜಿ ಸದಸ್ಯರು ಗ್ರಾಮ ಪಂಚಾಯತ್ ಇರ್ವತ್ತೂರು, ಫರಾಝ್ – ಕಾರ್ಯದರ್ಶಿ ಬಿಸ್ಮಿಲ್ಲಾ ಮಸೀದಿ ಕಾವಳಕಟ್ಟೆ, ಆರೀಫ್ ಕಾವಳಕಟ್ಟೆ, ಅಶ್ಫಾಕ್ ಕಾವಳಕಟ್ಟೆ, ಶಬಾನಾ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಿಂದ ದೇಶಭಕ್ತಿಯನ್ನು ಬಿಂಬಿಸುವ ನೃತ್ಯ, ಕಿರುನಾಟಕ, ದೇಶಭಕ್ತಿ ಗೀತೆಗಳು, ಭಾಷಣ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಶಾಲಾ ವತಿಯಿಂದ ಪೋಷಕರು ಮತ್ತು ಶಾಲಾಭಿಮಾನಿಗಳ ಸಹಕಾರದೊಂದಿಗೆ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here