ಬೆಟ್ಟಂಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಸಂಭ್ರಮದ ”  ಆಟಿದ ಲೇಸ್”  ಕಾರ್ಯಕ್ರಮ

0

ನಿಡ್ಪಳ್ಳಿ;  ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿಯಲ್ಲಿ ಆಟಿದ ಲೇಸ್ ಕಾರ್ಯಕ್ರಮವನ್ನು ಆ.12 ರಂದು ಏರ್ಪಡಿಸಲಾಯಿತು.

ಮುಖ್ಯ ಅತಿಥಿ  ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಉಮೇಶ್ ಮಿತ್ತಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಹಿರಿಯರು ಮಕ್ಕಳಿಗೆ ತಿಳಿಸಬೇಕು ಮತ್ತು ಅದನ್ನುಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು. ಪುತ್ತೂರು ತಾಲೂಕು ನಲಿಕೆ ಸಮಾಜ ಸಮಿತಿಯ ಅಧ್ಯಕ್ಷ ಶ್ರೀಧರ ಪೆರ್ಲಂಪಾಡಿ ಅಟಿಕಲೆಂಜನ ಮಹತ್ವದ ಬಗ್ಗೆ ವಿವರಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಬೆಟ್ಟಂಪಾಡಿಯ ಪ್ರಾಂಶುಪಾಲರಾದ  ಡಾI ಶ್ರೀ ಅಬ್ದುಲ್ ರಝಾಕ್ ಚೆನ್ನೆ ಮಣೆ ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ  ನಾಗೇಶ ಗೌಡ ಪುಳಿತ್ತಡಿ  ವಿದ್ಯಾರ್ಥಿಗಳಿಗೆ ತುಳು ತಿಂಗಳುಗಳ ಬಗ್ಗೆ ಮತ್ತು  ಹಬ್ಬಗಳ ಆಚರಣೆಯ ಬಗ್ಗೆ ತಿಳಿಸಿದರು .

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಮುಖ್ಯ ಗುರು ವಿಜಯಕುಮಾರ್ ಎಂ. ಇವರು ವಹಿಸಿ ಹಿಂಗಾರ ಅರಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು .

ವೇದಿಕೆಯಲ್ಲಿ ಎಸ್.  ಡಿ . ಎಂ . ಸಿ ಪದನಿಮಿತ ಸದಸ್ಯರಾದ ಹಮೀದ್ ಕೊಮ್ಮೆಮಾರ್ , ಶಿವಪ್ಪ ಗೌಡ ಚಿಕ್ಕೊಡಿ, ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ್ ಕರ್ಕೇರ  ಹಾಜರಿದ್ದರು.

10ನೇ ತರಗತಿಯ ಬಾಲಕರು ಪ್ರಾರ್ಥಿಸಿದರು 9ನೇ ತರಗತಿಯ ತ್ರಿಷಾ  ಸ್ವಾಗತಿಸಿ, ಗಗನ್ ವಂದನಾರ್ಪಣೆ ಮಾಡಿದರು. 10ನೇ ತರಗತಿಯ ವಿದ್ಯಾರ್ಥಿ ಅರ್ಪಿತ ಮತ್ತು ಎಂಟನೇ ತರಗತಿಯ ಅಶ್ವಿತ್ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು  ಪೋಷಕ ವೃಂದ ಸಹಕರಿಸಿದರು.ಕಾರ್ಯಕ್ರಮದ ಬಳಿಕ ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ಒಳಗೊಂಡ ಸಹ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

ವೇದಿಕೆಯನ್ನು ಹಿರಿಯ ವಿದ್ಯಾರ್ಥಿಗಳಾದ ನಾರಾಯಣ.ಕೆ ವೀರಪ್ಪ, ಶಿವಕುಮಾರ ಇವರು ವಿಶೇಷವಾಗಿ ತೆಂಗಿನ ಗರಿಯಿಂದ  ಕಲಾತ್ಮಕವಾಗಿ ಸಿಂಗರಿಸಿದ್ದರು.

LEAVE A REPLY

Please enter your comment!
Please enter your name here