






ಕಾಣಿಯೂರು: ಬೆಳಂದೂರು ಗ್ರಾಮದ ಅಬೀರ ಅಂಗನವಾಡಿ ಕೇಂದ್ರದಲ್ಲಿ ೮೦ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷೆ ಕಾವ್ಯ ಕಂಡೂರು ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ದಿನೇಶ್ ಅಬೀರ, ಅವ್ವಮ್ಮ, ಗೌರಿ ಮಾದೋಡಿ, ಹೇಮಲತಾ, ಸಾಜಿದಾ, ಗುಲಾಬಿ, ಪ್ರಮೀಳಾ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ರೋಹಿಣಿ ಸುವರ್ಣ ಅಬೀರ, ಸ್ತ್ರೀಶಕ್ತಿ ಸಂಘದ ಸದಸ್ಯರು, ಹಳೆ ವಿದ್ಯಾರ್ಥಿಗಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಬೇಬಿ ಸ್ವಾಗತಿಸಿ, ಸಹಾಯಕಿ ವಾರಿಜ ವಂದಿಸಿದರು.












