ಕಡಬ ತಾಲೂಕು ಸಂಯುಕ್ತ ಜಮಾಅತ್ ಅಸ್ತಿತ್ವಕ್ಕೆ : ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಪ್ರ. ಕಾರ‍್ಯದರ್ಶಿಯಾಗಿ ಅಶ್ರಫ್ ಶೇಡಿಗುಂಡಿ ಆಯ್ಕೆ

0

ಕಡಬ: ಕಡಬ ತಾಲೂಕು ಕೇಂದ್ರೀಕರಿಸಿಕೊಂಡು ತಾಲ್ಲೂಕು ವ್ಯಾಪ್ತಿಯ 20 ಮಸೀದಿಯ ಜಮಾಅತ್‌ಗಳನ್ನು ಒಳಗೊಂಡಂತೆ ಕಡಬ ತಾಲ್ಲೂಕು ಸಂಯುಕ್ತ ಜಮಾಅತ್ ಅಸ್ತಿತ್ವಕ್ಕೆ ತರಲಾಗಿ ಪ್ರಥಮ ಅಧ್ಯಕ್ಷರಾಗಿ ಸೀಗಲ್ ಅಬ್ದುಲ್ ಖಾದರ್ ಹಾಜಿ, ಪ್ರಧಾನ ಕರ‍್ಯದರ್ಶಿಯಾಗಿ ಅಶ್ರಫ್ ಶೇಡಿಗುಂಡಿ ಕಡಬ, ಕೋಶಾಧಿಕಾರಿಯಾಗಿ ಅಹ್ಮದ್ ಕುಂಞ್ ಆತೂರು ಇವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಪದಾಧಿಕಾರಿಗಳನ್ನು
ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.


ಉಪಾಧ್ಯಕ್ಷರಾಗಿ ಹಾಜಿ ಕೆ.ಪಿ.ಎಂ. ಶರೀಫ್ ಫೈಝಿ ಪನ್ಯ, ಹಾಜಿ ಅಬ್ದುಲ್ ರಹಿಮಾನ್ ಅಡ್ಕಾಡಿ ಕಳಾರ, ಹಾಜಿ ಮಹಮ್ಮದ್ ಪುತ್ತು ಚಾಪಳ್ಳ ಸವಣೂರು, ಕೆ.ಜಿ.ಎನ್. ಶುಕೂರ್ ಕೋಲ್ಪೆ, ಕಾರ್ಯದರ್ಶಿಗಳಾಗಿ
ಅಬ್ದುಲ್ ಅಝೀಝ್ ಕಿಡ್ಸ್ ಆತೂರು, ಎನ್.ಕೆ. ಅಝಾದ್ ನೆಕ್ಕರೆ, ಶಾಹುಲ್ ಹಮೀದ್ ಕುಂಡಾಜೆ, ಸಂಘಟನಾ ಕರ‍್ಯದರ್ಶಿಯಾಗಿ ಹಾಜಿ ಅಬ್ದುಲ್ಲ ಮರುವಂತಿಲ ಕುಂತೂರು, ಗೌರವ ಸಲಹೆಗಾರರಾಗಿ ಸಯ್ಯದ್
ಜುನೈದ್ ಜಿಫ್ರಿ ತಂಙಳ್ ಆತೂರು, ಪಿ.ಎಂ. ಇಬ್ರಾಹಿಂ ದಾರಿಮಿ ಕಡಬ, ಮೊಯಿದು ಫೈಝಿ ಕುಂತೂರು, ಸಿದ್ದಿಕ್ ದಾರಿಮಿ ಕಡಬ, ಕಾನೂನು ಸಲಹೆಗಾರರಾಗಿ ವಕೀಲ ಮುಸ್ತಪಾ ಕೊರುಂದೂರು, ಪತ್ರಿಕಾ ಕರ‍್ಯದರ್ಶಿಯಾಗಿ ಪತ್ರಕರ್ತ ಸಿದ್ದಿಕ್ ನೀರಾಜೆ, ಸದಸ್ಯರುಗಳಾಗಿ ಹೈದರ್ ಕಲಾಯಿ ಆತೂರು, ಅಬ್ದುಲ್ ರಹಿಮಾನ್ ಗಂಡಿಬಾಗಿಲು, ಇಸ್ಮಾಯಿಲ್ ಕೆ.ವೈ. ಕುದ್ಲೂರು, ಸುಲೈಮಾನ್ ಹಳೆನೇರೆಂಕಿ, ಹಾಜಿ ಮೂಸಾ ಪಣೆಮಜಲು ಸವಣೂರು, ಮೂಸಾ ಪರಣೆ, ಆಲಿಕುಂಞ್ ಸುರುಳಿ, ಮಹಮ್ಮದ್ ಅನೀಸ್ ನೂಜಿಲ ಕುಂತೂರು, ಹಾಜಿ ಕೆ.ಎಂ. ಶರೀಫ್ ಕಡಬ, ಟಿ.ಹೆಚ್. ಶರೀಫ್ ದಾರಿಮಿ ಕಡಬ, ಟಿ.ಹೆಚ್. ಶರೀಫ್ ದಾರಿಮಿ ನೆಟ್ಟಣ, ಹಾಜಿ ಯೂಸುಫ್ ಪೊಸೊಳಿಗೆ, ಆರಿಫ್ ಗೋಳಿತೊಟ್ಟು, ರಫೀಕ್ ಗಂಡಿಬಾಗಿಲು, ಮುಸ್ತಫಾ ಪೆರಿಯಡ್ಕ ಉಪ್ಪಿನಂಗಡಿ ಇವರುಗಳನ್ನು ಒಳಗೊಂಡ ಕಾರ‍್ಯಕಾರಿ ಸಮಿತಿ ಸಮಿತಿ ಮತ್ತು ವ್ಯಾಪ್ತಿಯಲ್ಲಿ ಬರುವ ಮಸೀದಿಗಳ ಜಮಾಅತ್ ಸಮಿತಿಗಳ ಅಧ್ಯಕ್ಷ, ಪ್ರಧಾನ ಕಾರ‍್ಯದರ್ಶಿ, ಕೋಶಾಧಿಕಾರಿಗಳನ್ನು ಒಳಗೊಂಡ ತಾಲ್ಲೂಕು ಸಮಿತಿಯನ್ನು ರಚಿಸಲಾಯಿತು.

LEAVE A REPLY

Please enter your comment!
Please enter your name here