ಕರ್ನಾಟಕ ಶಿಕ್ಷಣ ಇಲಾಖೆಯಿಂದ ಭರ್ಜರಿ ಸಿಹಿಸುದ್ದಿ : 15,000 ಸರಕಾರಿ ಶಾಲಾ ಶಿಕ್ಷಕರ (PSTR, GPSTR, HSTR) ನೇಮಕಾತಿ ಅಧಿಸೂಚನೆ ಪ್ರಕಟ! ವಿದ್ಯಾಮಾತಾದಲ್ಲಿ ಆನ್ಲೈನ್ ತರಬೇತಿ ಪ್ರಾರಂಭ

0

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು ಸದ್ಯದಲ್ಲೇ ನಡೆಯುವ ಶಿಕ್ಷಕರ ನೇಮಕಾತಿಗಳಾದ PSTR,GPSTR, HSTR ಪರೀಕ್ಷೆಗಳ ನೇಮಕಾತಿ ಪರೀಕ್ಷೆಗಳಿಗೆ ತರಬೇತಿಯನ್ನು ಪ್ರಾರಂಭಿಸಿರುತ್ತದೆ. ಸರಕಾರಿ ಶಿಕ್ಷಕ ವೃತ್ತಿಯ ಕನಸು ಕಾಣುತ್ತಿರುವ ಬಿ.ಎಡ್ ಹಾಗೂ ಡಿ.ಎಡ್ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಒಟ್ಟು 15,000 ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.

ಕಳೆದ ಶಿಕ್ಷಕರ ನೇಮಕಾತಿಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ವಿದ್ಯಾಮಾತಾ ಅಕಾಡೆಮಿಯಿಂದ ಆನ್ಲೈನ್ ಮೂಲಕ ತರಬೇತಿ ಆಯೋಜನೆ
KARTET, KSET, NET, CTET ಸೇರಿದಂತೆ ಅನೇಕ ಶಿಕ್ಷಕರ/ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಿಗೆ ಯಶಸ್ವೀ ತರಬೇತಿಯನ್ನು ನೀಡಿ ಯಶಸ್ಸು ಪಡೆದಿರುವ ವಿದ್ಯಾಮಾತಾವು ಕಳೆದ ನೇಮಕಾತಿ ವರ್ಷದಲ್ಲಿ ನಡೆದಿದ್ದ GPSTR ನೇಮಕಾತಿಯಲ್ಲಿ 5 ಅಭ್ಯರ್ಥಿಗಳನ್ನು ನೇಮಕಾತಿಗೊಳಿಸುವಲ್ಲಿ ಯಶಸ್ವಿಯಾಗಿತ್ತು, ಅಲ್ಲದೇ ಅರ್ಹತಾ ಪರೀಕ್ಷೆಗಳಾದ KARTET ನಲ್ಲಿ 500ಕ್ಕೂ ಅಧಿಕ ಅಭ್ಯರ್ಥಿಗಳು, KSET ಅರ್ಹತಾ ಪರೀಕ್ಷೆಯಲ್ಲಿ 60ಕ್ಕೂ ಅಧಿಕ ಅಭ್ಯರ್ಥಿಗಳು ಅಲ್ಲದೇ ಹಲವಾರು ಸರಕಾರಿ ನೇಮಕಾತಿ ಪರೀಕ್ಷೆಗಳಿಗೆ ವಿದ್ಯಾಮಾತಾದಲ್ಲಿ ತರಬೇತಿ ಪಡೆದು ಉತ್ತೀರ್ಣರಾಗಿ ಸರಕಾರಿ ಉದ್ಯೋಗವನ್ನು ಹೊಂದಿರುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ನೇಮಕಾತಿಯಲ್ಲಿ ಬದಲಾವಣೆ:
ಶಿಕ್ಷಣ ಇಲಾಖೆಯು ನೂತನ ವಿಶೇಷ ನೇಮಕಾತಿ ನಿಯಮಾವಳಿಗಳನ್ನು ಜಾರಿಗೆ ತಂದಿರುತ್ತದೆ. ಅದರನ್ವಯ ಈ ಬಾರಿ ಪರೀಕ್ಷಾ ಮಾದರಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಲಾಗಿದೆ. KARTET ಉತ್ತೀರ್ಣರಾದ ಅಭ್ಯರ್ಥಿಗಳು (HSTR ಹೊರತುಪಡಿಸಿ) ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ನೇಮಕಾತಿಯ ಪ್ರಮುಖ ಮುಖ್ಯಾಂಶಗಳು
ನೇಮಕಾತಿ ಇಲಾಖೆ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ
ಹುದ್ದೆಗಳ ವಿವರ: ಪ್ರಾಥಮಿಕ ಶಾಲಾ ಶಿಕ್ಷಕರು (PST), ಪದವೀಧರ ಪ್ರಾಥಮಿಕ ಶಿಕ್ಷಕರು (GPT), ಪ್ರೌಢಶಾಲಾ ಸಹ ಶಿಕ್ಷಕರು (HSTR), ಕಂಪ್ಯೂಟರ್ ಸೈನ್ಸ್ (CST) ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು (PET)
ಒಟ್ಟು ಹುದ್ದೆಗಳು: 15,000
ಆನ್‌ಲೈನ್ ಅರ್ಜಿ ಆರಂಭ: 18 ಆಗಸ್ಟ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನ: 07 ಸೆಪ್ಟೆಂಬರ್ 2026
ಶುಲ್ಕ ಪಾವತಿಗೆ ಕೊನೆಯ ದಿನ: 10 ಸೆಪ್ಟೆಂಬರ್ 2026
ಪರೀಕ್ಷಾ ವಿಧಾನ: ಸಂಪೂರ್ಣ OMR ಮಾದರಿ

ವಿದ್ಯಾರ್ಹತೆ:
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯಲ್ಲಿ ಕನಿಷ್ಠ ಶೇ. 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಶೇಕಡಾ 5% ರಷ್ಟು ಸಡಿಲಿಕೆ ನೀಡಲಾಗಿದ್ದು, ಇವರು 45% ಅಂಕಗಳನ್ನು ಪಡೆದಿದ್ದರೂ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಶಿಕ್ಷಕರ ತರಬೇತಿ: ಬಿ.ಎಡ್ (B.Ed) ಅಥವಾ ಡಿ.ಎಡ್ (D.Ed / D.El.Ed) ಅಥವಾ ವಿಶೇಷ ಶಿಕ್ಷಣದಲ್ಲಿ ಬಿ.ಎಡ್ / ಡಿ.ಎಡ್ ಪೂರೈಸಿರಬೇಕು.
ಶಿಕ್ಷಕರ ಅರ್ಹತಾ ಪರೀಕ್ಷೆ (TET ಅಥವಾ CTET) ಯಲ್ಲಿ ಕಡ್ಡಾಯವಾಗಿ ಅರ್ಹತೆ ಪಡೆದಿರಬೇಕು ಆದರೆ HSTR ನೇಮಕಾತಿಗೆ ಅರ್ಜಿ ಸಲ್ಲಿಸುವವರಿಗೆ TET ಅರ್ಹತೆ ಕಡ್ಡಾಯವಲ್ಲ

ವಯೋಮಿತಿ ಸಡಿಲಿಕೆ ಹಾಗೂ ಅರ್ಹತೆ:
ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ
  • ಎಸ್ಸಿ, ಎಸ್ಟಿ, ಪ್ರವರ್ಗ-1 ಮತ್ತು ವಿಕಲಚೇತನರಿಗೆ 45 ವರ್ಷ ಗರಿಷ್ಠ ವಯೋಮಿತಿ ಇದೆ.

ಈ ಬಾರಿಯ ನೇಮಕಾತಿ ನಿಯಮಗಳಲ್ಲಿನ ಪ್ರಮುಖ ಬದಲಾವಣೆಗಳು:

ವಿವರಣಾತ್ಮಕ ಪತ್ರಿಕೆ ರದ್ದು:
ಈ ಬಾರಿಯ ಶಿಕ್ಷಕರ ನೇಮಕಾತಿಯಲ್ಲಿ ಹಳೆಯ ದೀರ್ಘ ಬರವಣಿಗೆಯ ವಿವರಣಾತ್ಮಕ ಪತ್ರಿಕೆಯನ್ನು ಕೈಬಿಡಲಾಗಿದೆ. ಪರೀಕ್ಷೆಯು ಕೇವಲ ಬಹು ಆಯ್ಕೆ ಪ್ರಶ್ನೆಗಳನ್ನು (MCQ) ಒಳಗೊಂಡಿರಲಿದೆ.

  • ಒಂದೇ ಅರ್ಜಿಯಲ್ಲಿ ಹಲವು ಹುದ್ದೆಗಳಿಗೆ ಅವಕಾಶ:
    ಅಭ್ಯರ್ಥಿಗಳು ಬೇರೆ ಬೇರೆ ಹುದ್ದೆಗಳಿಗೆ ಪ್ರತ್ಯೇಕ ಅರ್ಜಿ ಹಾಕುವಂತಿಲ್ಲ. ಅರ್ಹತೆಗೆ ತಕ್ಕಂತೆ ಒಂದೇ ಆನ್‌ಲೈನ್ ಅರ್ಜಿಯಲ್ಲಿ ಆದ್ಯತೆಗಳನ್ನು ನೀಡಬಹುದು.
  • ಸೇವಾನಿರತ ಶಿಕ್ಷಕರಿಗೆ ನಿರ್ಬಂಧ:
    ಈಗಾಗಲೇ ಸರಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ತಾವು ಕೆಲಸ ಮಾಡುತ್ತಿರುವ ಅದೇ ವೃಂದದ ಹುದ್ದೆಗೆ ಮರು ಅರ್ಜಿ ಸಲ್ಲಿಸುವಂತಿಲ್ಲ.

ವಿದ್ಯಾಮಾತಾ ಅಕಾಡೆಮಿಯಲ್ಲಿ ಈ ರೀತಿ ತರಬೇತಿ ನಡೆಯುತ್ತದೆ
ಎರಡು ತಿಂಗಳ ಅವಧಿಯಲ್ಲಿ ನಡೆಯುವ ತರಬೇತಿಗಳು ಪ್ರತಿದಿನ ರಾತ್ರಿ 7ರಿಂದ 10ರ ವರೆಗೆ ಆನ್ಲೈನ್ Live ತರಗತಿಗಳು ಪಠ್ಯಕ್ರಮಗಳಿಗೆ ಹಾಗೂ ಪ್ರತ್ಯೇಕ ಪತ್ರಿಕೆಗಳಿಗೆ ಅನುಸಾರವಾಗಿ ನಡೆಯುತ್ತದೆ ಹಾಗೂ ದಿನನಿತ್ಯ Mock Test ಪರೀಕ್ಷೆಗಳನ್ನು ನಡೆಸುವುದಲ್ಲದೇ ತರಬೇತಿಯ ಅಧ್ಯಯನ ಸಾಮಾಗ್ರಿ ಸಹ ನೀಡಲಾಗುತ್ತದೆ ಹಾಗೂ ಸದ್ರಿ ತರಬೇತಿಯ ಅವಧಿಯಲ್ಲಿ ಕಾರ್ಯಗಾರಗಳನ್ನು ಸಹ ಒಳಗೊಂಡಂತೆ ತರಬೇತಿಯು ಆಯೋಜನೆಯಾಗಿದ್ದು,
ಈ ಕುರಿತು ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಪುತ್ತೂರಿನ APMC ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿಯ ಕಛೇರಿ ಸಂಖ್ಯೆ 9620468869 / 99451 82516 ನ್ನು ಸಂಪರ್ಕಿಸಿ ದಾಖಲಾತಿಯನ್ನು ಪಡೆದುಕೊಳ್ಳಬಹುದು.

LEAVE A REPLY

Please enter your comment!
Please enter your name here