







ಪುತ್ತೂರು: ಪುರಾತನ ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ,17ರಂದು ನಾಗರಪಂಚಮಿಯ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ.


ಬೆಳಿಗ್ಗೆ 7 ಗಂಟೆಯಿಂದ ಕ್ಷೇತ್ರದ ನಾಗ ಸನ್ನಿಧಿಯಲ್ಲಿ ನಾಗಪೂಜೆ, ನಾಗತಂಬಿಲ, ಪಂಚಾಮೃತ ಅಭಿಷೇಕ, ಸೀಯಾಳಾಭಿಷೇಕ, ಕ್ಷೀರಾಭಿಷೇಕಗಳು ಮೊದಲಾದ ಸೇವೆಗಳು ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೂರೇಲು ಸದಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













