







ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಈಸ್ಟ್ ವತಿಯಿಂದ ಮನಿಷಾ ಸಭಾಂಗಣದಲ್ಲಿ ಆಟಿದ ಕೂಟ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕಿ ಶ್ರೀಮತಿ ರೇಣುಕಾ ಕಣಿಯೂರು ಆಗಮಿಸಿ ಆಟಿದ ಆಚರಣೆ ಬಗ್ಗೆ ಮಾಹಿತಿ ನೀಡಿದರು, ಕಾರ್ಯಕ್ರಮದಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು ಇಲ್ಲಿಗೆ 9 ಕಂಪ್ಯೂಟರ್ ಮತ್ತು 1 ಎಲ್ಇಡಿ ಪ್ರಾಜೆಕ್ಟರ್ ಅನ್ನು ಕೊಡುಗೆ ನೀಡಿದ ಲೆಫ್ಟಿನೆಂಟ್ ಕರ್ನಲ್ ಗೋಪಾಲಕೃಷ್ಣ ಭಟ್ ಮತ್ತು ಮನೆಯವರಿಂದ ಕೊಡುಗೆ ನೀಡಿದವರನ್ನು ಸನ್ಮಾನಿಸಲಾಯಿತು.



ಕು. ಉನ್ನತಿ ಆರ್ ರೈ ಪ್ರಾರ್ಥಿಸಿದರು. ಆಟಿದ ವಿವಿಧ ಬಗೆಯ ಖಾದ್ಯಗಳನ್ನು ಸದಸ್ಯರು 45ಕ್ಕೂ ಹೆಚ್ಚು ಖಾದ್ಯಗಳನ್ನು ತಮ್ಮ ತಮ್ಮ ಮನೆಯಲ್ಲೇ ತಯಾರಿಸಿ ಕುಟುಂಬ ಸಮೇತ ಬಂದಂತ ಪದಾಧಿಕಾರಿಗಳು ಸದಸ್ಯರೊಂದಿಗೆ ಇನ್ನಿತರ ಕ್ಲಬ್ ಗಳ ಪದಾಧಿಕಾರಿಗಳು ಹಂಚಿ ಆಟಿದ ಆಚರಣೆಯನ್ನು ಆಚರಿಸಿದರು. ಮಾಡಿದರು ಕಾರ್ಯಕ್ರಮದಲ್ಲಿ ತೆಂಗಿನಕಾಯಿ ಕುಟ್ಟುವ, ಮಕ್ಕಳಿಗೆ ಸಂಗೀತ ಇನ್ನಿತರ ಕ್ರೀಡಾ ಚಟುವಟಿಕೆಗಳು ಮತ್ತು ಮಹಿಳೆಯರಿಗೆ ಚಿನ್ನೆಮನೆ ಮತ್ತು ಇನ್ನಿತರ ಕ್ರೀಡೆಗಳನ್ನು ನಡೆಸಲಾಯಿತು. ರೋಟರಿ ಈಸ್ಟ್ ನಿಕಟಪೂರ್ವ ಅಧ್ಯಕ್ಷ ಶಶಿಧರ್ ಕಿನ್ನಿಮಜಲು, ನಿಯೋಜಿತ ಅಧ್ಯಕ್ಷ ದೀಪಕ್ ಶೆಟ್ಟಿ, ಕಾರ್ಯದರ್ಶಿ ಜಯಂತ್ ಬಾಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.










