ಕೋಡಿಂಬಾಡಿ ಗ್ರಾಮ ಒಕ್ಕಲಿಗ ಗೌಡರ ಆಟಿ ಕಾರ್ಯಕ್ರಮ, ವಿವಿಧ ಆಟೋಟ ಸ್ಪರ್ಧೆ, ಸನ್ಮಾನ ಕಾರ್ಯಕ್ರಮ

0

ಕೋಡಿಂಬಾಡಿ:ಕೋಡಿಂಬಾಡಿ ಒಕ್ಕಲಿಗ ಗೌಡ ಸೇವಾ ಸಂಘ, ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಮತ್ತು ಒಕ್ಕಲಿಗ ಗೌಡ ಯುವ ಘಟಕ ಹಾಗೂ ಮಹಿಳಾ ಘಟಕದ ನೇತ್ರತ್ವದಲ್ಲಿ ಒಕ್ಕಲಿಗ ಗೌಡರ ಆಟಿ ಕಾರ್ಯಕ್ರಮ ಆ.16 ರಂದು ಸುಂದರ ಗೌಡ ನಿಡ್ಯ ಅವರ ಮನೆಯಲ್ಲಿ ನಡೆಯಿತು.


ಉದ್ಘಾಟನಾ ಕಾರ್ಯಕ್ರಮ ಬೆಳಿಗ್ಗೆ 9.30 ಕ್ಕೆ ಕಾರ್ಯಕ್ರಮವನ್ನು ಹಿರಿಯರಾದ ಸುಂದರ ಗೌಡ ನಿಡ್ಯ ದೀಪ ಪ್ರಜ್ವಲಿಸಿ ಉದ್ಘಾಟಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸುರೇಶ್ ಗೌಡ ಬೋಳಾಜೆ, ಒಕ್ಕಲಿಗ ಗೌಡ ಗ್ರಾಮ ಸಮಿತಿ ಅಧ್ಯಕ್ಷರಾದ ವಾಸಪ್ಪ ಗೌಡ, ಒಕ್ಕೂಟ ಅಧ್ಯಕ್ಷರಾದ ದಯಾನಂದ ಗೌಡ ಬೋಳಾಜೆ, ಮಹಿಳಾ ಅಧ್ಯಕ್ಷರಾದ ಲೀಲಾವತಿ ಮೇಲಿನಹಿತ್ತಿಲು ಉಪಸ್ಥಿತರಿದ್ದರು. ಅನಂತರ ಅಂಗನವಾಡಿ ಮಕ್ಕಳಿಗೆ, ಬಾಲಕ ಬಾಲಕಿಯರಿಗೆ, ಪುರುಷರಿಗೆ, ಮಹಿಳೆಯರಿಗೆ ಹಾಗೂ ಹಿರಿಯರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು.

ಗ್ರಾಮ ಮಟ್ಟದಲ್ಲಿ ಸಂಘಟನೆ ಬಲಿಷ್ಠವಾಗಬೇಕು -ಸಂಜೀವ -ಮಠಂದೂರು
ಮದ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರು ಮಾತನಾಡಿ ಗ್ರಾಮ ಮಟ್ಟದಲ್ಲಿ ಆಟಿ ಕೂಟದಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಪ್ರತಿ ಮನೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು, ಇಂತಹ ಕಾರ್ಯಕ್ರಮ ಗ್ರಾಮ ಮಟ್ಟದಲ್ಲಿ ಸಮುದಾಯದ ಸಂಘಟನೆ ಬಲಿಷ್ಠವಾಗಿ ಬೆಳೆಯಲು ಸಾಧ್ಯ. ಗ್ರಾಮದಲ್ಲಿ ಸಮುದಾಯದ ಸಂಖ್ಯೆ ಕಡಿಮೆ ಇದ್ದರೂ ಬಹಳ ಅದ್ದೂರಿಯಾಗಿ ಕಾರ್ಯಕ್ರಮ ವನ್ನು ನಡೆಸಿದ ಗ್ರಾಮದ ಸಮಾಜ ಭಾಂದವರಿಗೆ ಅಭಿನಂದನೆ ತಿಳಿಸಿದರು.

ಗ್ರಾಮದ ಪ್ರತಿ ಮನೆಯವರು ಗೌಡ ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು – ಸುಂದರ ಗೌಡ ನಡುಬೈಲು
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಸುಂದರ ಗೌಡ ನಡುಬೈಲು ಮಾತನಾಡಿ, ತಾಲೂಕು ಗೌಡ ಸಂಘದ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜ ಭಾಂದವರು ಭಾಗವಹಿಸಬೇಕು, ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಸದಸ್ಯತ್ವ ನೊಂದಣಿ ಅಭಿಯಾನ ಕೈಗೊಂಡಿದ್ದು ಪ್ರತಿ ಮನೆಯವರು ಸದಸ್ಯತ್ವ ಪಡೆದುಕೊಳ್ಳುವಂತೆ ವಿನಂತಿಸಿದರು.


ತುಳುನಾಡಿನ ಸಂಸ್ಕೃತಿ ಸಂಪ್ರದಾಯಗಳನ್ನು ಮಕ್ಕಳಿಗೆ ತಿಳಿಸುವಂತಾಗಬೇಕು -ಗುಡ್ಡಪ್ಪ ಗೌಡ ಬಲ್ಯ
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಬನ್ನೂರು ಎ ವಿ ಜಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಗುಡ್ಡಪ್ಪ ಬಲ್ಯ ಮಾತನಾಡಿ ಆಟಿ ತಿಂಗಳ ವಿಶೇಷತೆಗಳನ್ನು ತಿಳಿಸಿ ಪೋಷಕರು ತಮ್ಮ ಮಕ್ಕಳಿಗೆ ತುಳುನಾಡಿನ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಸುವಂತಗಬೇಕು, ಮುಂದಿನ ಪೀಳಿಗೆ ಕೂಡ ತುಳುನಾಡಿನ ಸಂಸ್ಕೃತಿ, ಆಚರಣೆ, ಸಂಪ್ರದಾಯಗಳು ನಿರಂತರವಾಗಿ ನಡೆಯುವಂತಾಗಬೇಕು ಎಂದರು.


ಪೋಷಕರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು – ಎ ವಿ ನಾರಾಯಣ
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಎ ವಿ ನಾರಾಯಣ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು, ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳನ್ನು ಬೆಳೆಸಬೇಕು, ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಮೂಡಿಬರಬೇಕು ಎಂದರು.

ಸ್ವ ಸಹಾಯ ಸಂಘಗಳಲ್ಲಿ ತಮನ್ನು ತಾವು ತೊದಗಿಸಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಬೇಕು- ವಿಶ್ವನಾಥ ಗೌಡ ಬನ್ನೂರು
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷರಾದ ವಿಶ್ವನಾಥ ಗೌಡ ಬನ್ನೂರು ಮಾತನಾಡಿ ಗ್ರಾಮದ ಪ್ರತಿ ಮನೆಯವರು ಸ್ವ ಸಹಾಯ ಸಂಘಗಳಲ್ಲಿ ಸದಸ್ಯರಾಗಿ ಸೇರ್ಪಡೆಗೊಂಡು ಉಳಿತಾಯ, ಸಾಲದ ವ್ಯವಹಾರ ನಡೆಸಿ ಆರ್ಥಿಕವಾಗಿ ಬಲಿಷ್ಠರಾಗಿ ಕಟ್ಟ ಕಡೆಯ ವ್ಯಕ್ತಿಯು ಕೂಡ ಸ್ವಾವಲಂಬಿ ಜೀವನ ನಡೆಸುವತಾಗಬೇಕು ಎಂದರು.


ಕಾರ್ಯಕ್ರಮ ಯಶಸ್ವಿಗೆ ಸಹಕರಿದ ಎಲ್ಲರಿಗೂ ಅಭಿನಂದನೆ- ದಯಾನಂದ ಬೋಳಾಜೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷರಾದ ದಯಾನಂದ ಗೌಡ ಬೋಳಾಜೆ ಮಾತನಾಡಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬರಲು ಸಹಕರಿಸಿದ ಗ್ರಾಮದ ಎಲ್ಲಾ ಸಮಾಜ ಭಾಂಧವರಿಗೂ ಅಭಿನಂದನೆ ತಿಳಿಸಿದಿದರು.


ವೇದಿಕೆಯಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಪೂರ್ವ ಅಧ್ಯಕ್ಷರಾದ ಡಿ ವಿ ಮನೋಹರ್, ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಪ್ರಶಾಂತ್ ಕೆಮ್ಮಾಯಿ,ಒಕ್ಕಲಿಗ ಸ್ವ ಸಹಾಯ ಸಂಘಗಳ ವಲಯ ಅಧ್ಯಕ್ಷರಾದ ಗಂಗಯ್ಯ ಗೌಡ ಕನ್ನಡಾರು,ಮನೆಯವರಾದ ಸುಂದರ ಗೌಡ ನಿಡ್ಯ, ಗ್ರಾಮ ಸಮಿತಿ ಅಧ್ಯಕ್ಷರಾದ ವಾಸಪ್ಪ ಗೌಡ, ಮಹಿಳಾ ಘಟಕದ ಲೀಲಾವತಿ ಮೇಲಿನಹಿತ್ತಿಲು ಉಪಸ್ಥಿತರಿದ್ದರು.


ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರೀತಿಕಾ ಬೋಳಾಜೆ, ಜಿಲ್ಲಾ ಮಟ್ಟದ ಚಿತ್ರಕಲೆ ಸ್ಪರ್ಧೆಗೆ ಆಯ್ಕೆಯಾಗಿರುವ ಸಾನ್ವಿ ಬಾರ್ತಿಕುಮೇರು, ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಧೀರಜ್ ಮೇಲಿನಹಿತ್ತೀಲು, 2025 -2026 ನೇ ಸಾಲಿನಲ್ಲಿ ಪಿಯುಸಿ ನಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ನಿಶ್ಚಿತಾ ಕೆ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮತ್ತು ಕಾರ್ಯಕ್ರಮದಲ್ಲಿ ಅಂಗನವಾಡಿಯಿಂದ ಹತ್ತನೇ ತರಗತಿ ವರೆಗೆ ಮಕ್ಕಳಿಗೆ ಪುಸ್ತಕ ವಿತರಣೆಯ ಪ್ರಾಯೋಜಕತ್ವ ನೀಡಿದ ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರು ಎ ವಿ ನಾರಾಯಣ ಇವರಿಗೆ ಶಾಲು ಹಾಕಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಹಾಗೂ ಎಲ್ಲಾ ಮಕ್ಕಳಿಗೂ ಟಿಪಿನ್ ಬಾಕ್ಸ್ ನೀಡಿದ ಸುರೇಂದ್ರ ಗೌಡ ಬಾರ್ತಿಕುಮೇರು, ಆಟೋಟ ಸ್ಪರ್ಧೆಯ ಬಹುಮಾನ ಪ್ರಾಯೋಜಕತ್ವ ನೀಡಿದ ಬಾಲಕೃಷ್ಣ ಗೌಡ ಕಾಪು ಇವರಿಗೆ ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ನೀಡಿದ ಸುಂದರ ಗೌಡ ಮತ್ತು ಮೋಹಿನಿ ನಿಡ್ಯ ದಂಪತಿಗಳಿಗೆ ಮತ್ತು ಸಾಂಪ್ರದಾಯಿಕವಾಗಿ ತೆಂಗಿನ ಗರಿಯಲ್ಲಿ ಅಲಂಕಾರಗೊಂಡಿದ್ದ ಸೆಲ್ಫಿ ಪೋಯಿ0ಟ್ ನ್ನು ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಶ್ವನಾಥ ಗೌಡ ಪಾದೆ, ಹಾಗೂ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಮೇಲ್ವಿಚಾರಕರು ಸುಮಲತಾ ಪ್ರೇರಕರಾದ ಶ್ರೀಕಾಂತ್, ಗ್ರಾಮ ಒಕ್ಕೂಟದ ಕಾರ್ಯದರ್ಶಿ ವಿಜಯ ಬಾರ್ತಿಕುಮೇರು ಇವರುಗಳನ್ನು ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಪ್ರಿಯ, ಅನಿತಾ, ಕವಿತಾ ಪ್ರಾಥಿಸಿದರು. ಒಕ್ಕೂಟದ ಮಾಜಿ ಕಾರ್ಯದರ್ಶಿ ಎಲ್ಯಣ್ಣ ಗೌಡ ಮೇಲಿನ ಹಿತ್ತಿಲು ಸ್ವಾಗತಿಸಿದರು. ಒಕ್ಕೂಟದ ಪೂರ್ವ ಅಧ್ಯಕ್ಷರು ಬಾಬು ಗೌಡ ಭಂಡಾರದಮನೆ ವಂದಿಸಿದರು. ಟ್ರಸ್ಟ್ ನ ಮೇಲ್ವಿಚಾರಕಿ ಸುಮಲತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಆಟಿ ಖಾದ್ಯಗಳ ಭೋಜನ ನಡೆಯಿತು.

LEAVE A REPLY

Please enter your comment!
Please enter your name here