






ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ, ತುಳು ನಾಟಕ ಪ್ರದರ್ಶನ


ಪುತ್ತೂರು: ಡಿಗ್ನಿಟಿ ಸೋಷಿಯಲ್ ಫೋರಂ ಚಾರಿಟೇಬಲ್ ಟ್ರಸ್ಟ್ ದರ್ಬೆ ಇದರ ಪ್ರಥಮ ವಾರ್ಷಿಕೋತ್ಸವವು ಆ.16ರಂದು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ 2026ರ ಹೆಲ್ತ್ಕೇರ್ ಎಕ್ಸಲೆನ್ಸ್ ಅವಾರ್ಡ್ ಪುರಸ್ಕೃತ ದರ್ಬೆ ಧನ್ವಂತರಿ ಲ್ಯಾಬ್ನ ಚೇತನ್ ಪ್ರಕಾಶ್ ಕಜೆ ಅವರಿಗೆ ಡಿಗ್ನಿಟಿ ಮೆಡಿಕಲ್ ಪ್ರಶಸ್ತಿ, ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರಿಗೆ ಡಿಗ್ನಿಟಿ ಸಾಹಿತ್ಯ ಪ್ರಶಸ್ತಿ, ಡಿಜಿ, ಐಜಿಪಿ ಶ್ಲಾಘನಾ ಪದಕಕ್ಕೆ ಆಯ್ಕೆಯಾದ ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕ ಜಯರಾಮ, ಹಾಗೂ ಅಗ್ನಿವೀರ್ಗೆ ಯುವಕರಿಗೆ ತರಬೇತಿ ನೀಡುತ್ತಿರುವ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಅವರಿಗೆ ಡಿಗ್ನಿಟಿ ವಿಶಿಷ್ಟ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.




ಪ್ರಶಸ್ತಿ ಸ್ಚೀಕರಿಸಿದ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಮಾತನಾಡಿ, ಸಂಘ ಸಂಸ್ಥೆಗಳು ತಂಡವಾಗಿ ಕೆಲಸ ಮಾಡಿದಾಗ ಅದು ಬೆಳೆಯಲು ಸಾಧ್ಯ. ಸಂಸ್ಥೆಯ ಉತ್ತಮ ಕೆಲಸ ಕಾರ್ಯಗಳ ನಮ್ಮ ಪೂರ್ಣ ಸಹಕಾರವಿದೆ. ವಾರ್ಷಿಕೋತ್ಸವದಲ್ಲಿ ಸಾಧಕರನ್ನು ಗುರುತಿಸುವ ಜೊತೆಗೆ ನಾಟಕ ಆಯೋಜಿಸುವ ಮೂಲಕ ಕಲಾ ಕ್ಷೇತ್ರಕ್ಕೂ ಕೊಡುಗೆ ನೀಡಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಸಾಮಾಜಿಕವಾಗಿ ತೊಡಗಿಸಿಕೊಂಡಿರುವ ಡಿಗ್ನಿಟಿ ಸೋಷಿಯಲ್ ಫೋರಂ ಟ್ರಸ್ಟ್ ಸಮಾಜದ ಸಾಧಕರನ್ನು ಸಾಶಕರನ್ನು ಗುರುತಿಸುತ್ತಿರುವುದನ್ನು ಶ್ಲಾಘಿಸಿದರು.
ಧನ್ಚಂತರಿ ಲ್ಯಾಬ್ನ ಚೇತನ್ ಪ್ರಕಾಶ್ ಕಜೆ ಮಾತನಾಡಿ, ಪ್ರಶಸ್ತಿ,, ಸನ್ಮಾನಗಳನ್ನು ಪಡೆಯುವುದು ಮಾತ್ರವಲ್ಲ. ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ನಮ್ಮ ಜವಾಬ್ದಾರಿ. ನಮ್ಮ ಮೇಲಿನ ಗೌರವ, ವಿಶ್ವಾಸದಿಂದ ಪ್ರಶಸ್ತಿ ನೀಡುತ್ತಿದ್ದು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕಾದ ನಮ್ಮ ಮೇಲಿದೆ ಎಂದರು.

ಸಂಪ್ಯ ಅಕ್ಷಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಜಯಂತ ನಡುಬೈಲು, ಉದ್ಯಮಿ ಎಂ.ಆರ್ ಜಯಕುಮಾರ್ ರೈ, ವೀ ಟಾಕ್ ಸ್ಪೋಕನ್ ಇಂಗ್ಲಿಷ್ನ ಸಂಚಾಲಕ ಸೂರ್ಯನಾರಾಯಣ ಪುತ್ತೂರು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಡಿಗ್ನಿಟಿ ಸೋಷಿಯಲ್ ಫೋರಂ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಬಶೀರ್ ಪುತ್ತೂರು ಸ್ವಾಗತಿಸಿದರು. ಟ್ರಸ್ಟ್ನ ರಶೀದ್, ಹಸೈನಾರ್ ಬನಾರಿ, ನೌಶಾದ್, ಗಿರೀಶ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಚಾ ಪರ್ಕ,ಕಲಾವಿದರು ಕುಡ್ಲ ಇವರಿಂದ ದೇವದಾಸ್ ಕಾಪಿಕಾಡ್ ನಟಿಸಿ, ನಿರ್ದೇಶಿಸಿದ ‘ಯಾನೋರಿ ಬರೋಲಿಯಾ’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.










