ಕಿಲ್ಲೆ ಮೈದಾನ ಗಣೇಶೋತ್ಸವ : ವಿಗ್ರಹ ಮುಹೂರ್ತ, ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು : ಕಿಲ್ಲೆ ಮೈದಾನ ದೇವತಾ ಸಮಿತಿ ಆಶ್ರಯದಲ್ಲಿ ನಡೆಯಲಿರುವ 69ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಗಣಪತಿ ವಿಗ್ರಹ ರಚನಾ ಮುಹೂರ್ತ ಮತ್ತು ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಗರದ ಕಮಲ್‌ ಜ್ಯುವೆಲ್ಲರ್ಸ್‌ ಮಾಲಕತ್ವದ ವಿಶ್ವ ಸಂಕೀರ್ಣದಲ್ಲಿ ಆ.17ರಂದು ನಡೆಯಿತು.

ವೇದಮೂರ್ತಿ ಸುಬ್ರಹ್ಮಣ್ಯ ಹೊಳ್ಳ, ಶುದ್ಧಿಕರಣ ಪೂಜೆ,ಷೋಡಶ ಉಪಚಾರ ಪೂಜೆ ನೆರವೇರಿಸಿ ಶಾಸ್ತ್ರೋಕ್ತವಾಗಿ ಗಣಪತಿ ವಿಗ್ರಹ ರಚನೆಗೆ ಮುಹೂರ್ತ ನೆರೆವೇರಿಸಿದರು. ಶಿಲ್ಪಿ ರಮೇಶ್‌ ಪೂಜಾರಿ ಗಣಪತಿ ವಿಗ್ರಹವನ್ನು ರಚಿಸಲಿದ್ದಾರೆ. ಆಮಂತ್ರಣ ಪತ್ರವನ್ನು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ ಪತ್ರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್‌ ಶೆಟ್ಟಿ ನೆಲ್ಲಿಕಟ್ಟೆ, ಪ್ರಧಾನ ಕಾರ್ಯದರ್ಶಿ ದಿನೇಶ್‌ ಕುಲಾಲ್‌ ಪಿ.ವಿ, ಕೋಶಾಧಿಕಾರಿ ಸಿ ಶ್ರೀಧರ್‌ ನಾಯಕ್, ಕಾರ್ಯದರ್ಶಿ ರಮೇಶ್‌, ಗಣಪತಿ ಪೈ, ರತ್ನಾಕರ ಆಚಾರ್ಯ,ಶಾಂತಿನಾಥ ಪ್ರೆಸ್‌ ನ ಸುದರ್ಶನ್‌ ಶೆಟ್ಟಿ, ಸುರೇಂದ್ರ ನೆಹರೂನಗರ,ಗಣೇಶ್‌ ಶೆಟ್ಟಿ ನೆಲ್ಲಿಕಟ್ಟೆ, ಸುಧೇಶ್‌ ಕುಮಾರ್‌ ಚಿಕ್ಕಪುತ್ತೂರು,ವಸಂತ ನಾಯಕ್‌ ಸೇರಿದಂತೆ ಸಮಿತಿ ಸದಸ್ಯರು, ಅರ್ಚನಾ ಅಭಿಜಿತ್‌ ಶೆಟ್ಟಿ, ಗೀತಾ ಸುಧಾಕರ್‌ ಶೆಟ್ಟಿ, ಸೂತ್ರಬೆಟ್ಟು ಜಗನ್ನಾಥ್‌ ರೈ, ಯುಪಿ ರಾಮಕೃಷ್ಣ, ವ್ಯವಸ್ಥಾಪನ ಸಮಿತಿ ಸದಸ್ಯ ಬೆಳ್ಳಿಪ್ಪಾಡಿ ಸುಭಾಶ್‌ ರೈ, ಪ್ರಜ್ವಲ್‌ ಕೃಷ್ಣ ಮಚ್ಚಿಮಲೆ,ವಿಲಿಯಮ್‌, ಮತ್ತೀತರರು ಉಪಸ್ಥಿತರಿದ್ದರು. ಸೆ.14ರಿಂದ 20ರವರೆಗೆ ಕಿಲ್ಲೆ ಮೈದಾನ  ಶ್ರೀ ಮಹಾ ಗಣೇಶೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here