ನೆಕ್ಕಿಲಾಡಿ: ಬಳ್ಳಿ ಆಯುರ್ ಗ್ರಾಮದ ಆಯುರ್ವೇದ ಆಸ್ಪತ್ರೆಯಲ್ಲಿ ಕರ್ಕಾಟಕ ಮಾಸದ ಔಷಧ ಗಂಜಿ ವಿತರಣೆ-ಹಿರಿಯರೊಂದಿಗೆ ಸಂವಾದ

0

ಪುತ್ತೂರು: 34ನೇ ನೆಕ್ಕಿಲಾಡಿಯಲ್ಲಿರುವ ಡಾ. ಸುಪ್ರೀತ್ ಲೋಬೋ ಅವರ ಬಳ್ಳಿ ಆಯುರ್ ಗ್ರಾಮದ ಆಯುರ್ವೇದ ಆಸ್ಪತ್ರೆಯಲ್ಲಿ ಪಾಲಕ್ಕಾಡ್ ನ ಪ್ರಸಿದ್ಧ ನಾಟಿ ವೈದ್ಯರಿಂದ ಕರ್ಕಾಟಕ ಮಾಸದ ಔಷಧಿ ಗಂಜಿ ಪ್ರಾತ್ಯಕ್ಷಿಕ ಶಿಬಿರ ಆ.15ರಂದು ನಡೆಯಿತು.

ಔಷಧೀಯ ಭೋಜನ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರೊಂದಿಗೆ ಸಾಂಪ್ರದಾಯಿಕ ಅಡುಗೆ ಬಗ್ಗೆ ಸಂವಾದ ನಡೆಸಲಾಯಿತು. ಮಂಗಳೂರು ಆಯುಷ್ ಫೌಂಡೇಶನ್ ಸ್ಥಾಪಕಿ ಡಾ. ಆಶಾಜ್ಯೋತಿ ರೈ ಮಾಲಾಡಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಬಳಿಕ ವಿವಿಧ ಔಷಧೀಯ ಸಸ್ಯಗಳಿಂದ ತಯಾರಿಸಿದ ಭಕ್ಷ್ಯಗಳನ್ನು ಹಾಗೂ ಔಷಧೀಯ ಗಂಜಿಯನ್ನು ವಿತರಿಸಲಾಯಿತು. ರಾಜಶ್ರೀ ಅಂಬೆಲ ತಂಡದ ಸದಸ್ಯರು ಸಹಿತ 150ಕ್ಕೂ ಅಧಿಕ ಮಂದಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡರು. ರಾಜಶ್ರೀ ಅಂಬೆಲ ತಂಡದ ರತ್ನಾಕರ ಇಪ್ಪನೊಟ್ಟು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here