






ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಪುತ್ತೂರು ವತಿಯಿಂದ ಹಾರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.೧೯ರಂದು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.


ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾ ರಾಣಿ ಅವರು ಕಾಡು ಹಣ್ಣುಗಳಾದ ಅವಕಾಡೊ, ನೇರಳೆ, ಪನ್ನೇರಳೆ, ಹಲಸು, ಮಾವು, ಪುನರ್ಪುಳಿ, ಚಪ್ತ ಮುಂತಾದ ವಿವಿಧ ಗಿಡಗಳನ್ನು ಹಸ್ತಾಂತರಿಸಿದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಿದ್ಯಾಗೌರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಎಲ್.ಟಿ. ಹಾಗೂ ಜಂಟಿ ಕಾರ್ಯದರ್ಶಿ ಸುನಿತಾ ಎಂ., ಉಪಾಧ್ಯಕ್ಷೆ ವೇದಾವತಿ ಅವರು ಉಪಸ್ಥಿತರಿದ್ದರು. ಹಾರಾಡಿ ಶಾಲೆಯ ಮುಖ್ಯಗುರು ಕೆ.ಕೆ. ಮಾಸ್ಟರ್ ಅವರು ವಂದಿಸಿದರು. ಎಸ್ಡಿಎಂಸಿ ಅಧ್ಯಕ್ಷ ಹರಿಪ್ರಸಾದ್, ಮಂಜಪ್ಪ ನಾಯಕ್ ಹಾಗೂ ಸ್ಕೌಟ್ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.













