







ಪುತ್ತೂರು: ಬಂಟರ ಸಂಘ ಪುತ್ತೂರು ತಾಲೂಕು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಇದರ ಪುತ್ತೂರು ತಾಲೂಕು ಸಮಿತಿ ಇವರ ಮಾರ್ಗದರ್ಶನದೊಂದಿಗೆ, ಯುವ ಬಂಟರ ವಿಭಾಗ, ವಿದ್ಯಾರ್ಥಿ ಬಂಟರ ವಿಭಾಗ ಇವರ ಸಹಕಾರದೊಂದಿಗೆ ಮಹಿಳಾ ಬಂಟರ ವಿಭಾಗದ ಸಾರತ್ಯದಲ್ಲಿ ಆಟಿದ ಕೂಟ ಆ. 16 ರಂದು ಪುತ್ತೂರು ಎಂ ಸುಂದರ ರಾಮ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರುಗಿತು.



ಸಭಾಧ್ಯಕ್ಷತೆಯನ್ನು ಬಂಟರ ವಿಭಾಗದ ಅಧ್ಯಕ್ಷರಾದ ಗೀತಾ ಮೋಹನ ರೈ ವಹಿಸಿದ್ದರು. ಶಾಸಕ ಅಶೋಕ್ ಕುಮಾರ್ ರೈ ಪತ್ನಿ ಸುಮಾ ಅಶೋಕ್ ರೈ ದೀಪ ಪ್ರಜ್ವಲನೆ ಮಾಡಿ ಹಿಂಗಾರ ಅರಳಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ , ಮಾತೃ ಸಂಘದ ಪುತ್ತೂರು ತಾಲೂಕು ಸಂಚಾಲಕ ಸಹಕಾರ ರತ್ನ ದoಬೆಕಾನ ಸದಾಶಿವ ರೈ, ಮಹಿಳಾ ಬಂಟರ ವಿಭಾಗದ ನಿಕಟಪೂರ್ವ ನಿಕಟಪೂರ್ವ ಅಧ್ಯಕ್ಷರಾದ ಸಬಿತಾ ಭಂಡಾರಿ, ಮಾಜಿ ಅಧ್ಯಕ್ಷರಾದ ಕುಮುದಾ ಎಲ್. ಎನ್. ಶೆಟ್ಟಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ಪ್ರತಿಮಾ ರೈ, ಮಹಿಳಾ ಬಂಟರ ವಿಭಾಗದ ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿ ಹಾಗೂ ಕೋಶಾಧಿಕಾರಿ ಅರುಣಾ ಡಿ ರೈ ಉಪಸ್ಥಿತರಿದ್ದರು.




ಶಾಸಕ ಅಶೋಕ್ ಕುಮಾರ್ ರೈ ಅವರು ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಐಸಿರಿ ನೃತ್ಯ ತಂಡದ ಎಲ್ಲಾ ಹೆಣ್ಣು ಮಕ್ಕಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನೃತ್ಯ ಗುರು ಪ್ರಮೋದ್ ರೈ ಬೆಳ್ಳಾರೆ ಇವರನ್ನು ಸನ್ಮಾನಿಸಲಾಯಿತು.
ಆಟಿಯ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ಮಹಿಳೆಯರಿಗೆ ಬಹುಮಾನ ನೀಡಲಾಯಿತು. ಹಾಗೆಯೇ ಅಟಿಯ 48 ಬಗೆಯ ತಿಂಡಿ ತಿನಿಸು ಮಾಡಿ ತಂದ ಪ್ರತಿಯೊಬ್ಬ ಮಹಿಳೆಯರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಬಹುಮಾನದ ಪ್ರಯೋಜಕರಾದ ಸಬಿತ ಭಂಡಾರಿ, ಮಾಧವಿ ರೈ , ಅನ್ನಪೂರ್ಣಿಮಾ ರೈ, ಇಂದಿರಾ ಎಸ್ ರೈಇಳಂತಾಜೆ, ಪದ್ಮಾವತಿ ಎಸ್ ರೈ ಇವರನ್ನು ಹಾಗೆಯೇ ನಿರೂಪಣೆಗೈದ ಯಶುಭಾ ರೈಯವರನ್ನು ಗೌರವಿಸಲಾಯಿತು. ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರಾದ ಮಲ್ಲಿಕಾ ಪಕ್ಕಳ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಳಿನಿ ಪಿ ಶೆಟ್ಟಿ ಉಪಸ್ಥಿತರಿದ್ದರು.

ವಸಂತಿ ರೈ ಪ್ರಾರ್ಥಿಸಿದರು. ಗೀತಾ ಮೋಹನ ರೈ ಸ್ವಾಗತಿಸಿ. ಸ್ವರ್ಣಲತಾ ಜೆ ರೈ, ಮಾಧವಿ ಎಂ. ರೈ, ಎಲ್ಲಾ ಮಹಿಳಾ ಪದಾಧಿಕಾರಿಗಳು ಸಹಕರಿಸಿದರು. ಅರುಣಾ ಡಿ ರೈ ವಂದಿಸಿದರು.










