






ಪುತ್ತೂರು: ಮೆಡಿಕಲ್ ಕಾಲೇಜಿಗೆ ಸರ್ಕಾರದಿಂದ 574 ಕೋಟಿ ರೂಪಾಯಿ ಆಡಳಿತಾತ್ಮಕ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಅರಿಯಡ್ಕ ವಲಯ ಕಾಂಗ್ರೆಸ್ ಸಮಿತಿಯಿಂದ ಕೌಡಿಚ್ಚಾರ್ ಜಂಕ್ಷನ್ ಬಳಿ ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.


ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಇಕ್ಬಾಲ್ ಹುಸ್ಸೇನ್ ನೇತೃತ್ವದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಬೂತ್ ಅಧ್ಯಕ್ಷರಾದ ಚಂದ್ರಶೇಖರ ಮಾಣಿಯಾಣಿ ಕುರಿಂಜ, ಬಿ.ಎಲ್.ಎ. ಹನೀಫ್ ಪಟ್ಲಕಾನ, ಬೂತ್ ಅಧ್ಯಕ್ಷರಾದ ಬಶೀರ್ ಕೌಡಿಚ್ಚಾರ್, ನಾಗರಾಜ್ CRC, ವನರಾಜ್ CRC, , ಸೀತಾರಾಮ್ ಮಣ್ಣಾಪು, ಸತ್ಯೇಂದ್ರನ್ ಸಿಆರ್ ಸಿ, ಪ್ರಕಾಶ್ CRC, ಗೋಪಾಲಕೃಷ್ಣ CRC, ಭಾರತ್ ಜೋಡೋ ಸದಸ್ಯರಾದ ರಿಫಾನ್, ಮಿದ್ಲಾಜಿ,, ಮಹಮ್ಮದ್ ಮಿಸ್ಬಾ ಮತ್ತು ಹಲವು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.













