ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಪಿ.ಡಿ.ಗಂಗಾಧರ್ ರೈ ದೇವಸ್ಯರವರ ಉತ್ತರ ಕ್ರಿಯೆ- ಶ್ರದ್ಧಾಂಜಲಿ ಸಭೆ

0

ಪುತ್ತೂರು: ಆ.1 ಎಂದು ನಿಧಾನರಾದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸವಣೂರು ಗ್ರಾ.ಪಂ, ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ್ ರೈ ದೇವಸ್ಯರವರ ಉತ್ತರ ಕ್ರಿಯೆ- ಶ್ರದ್ಧಾಂಜಲಿ ಸಭೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಆ. 21 ರಂದು ಜರಗಿತು.

ಶ್ರಮ ಜೀವಿಯಾಗಿದ್ದರು- ಗಿರಿಶಂಕರ್ ಸುಲಾಯ
ನುಡಿನಮನ ಕಾರ್‍ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಗಿರಿಶಂಕರ್ ಸುಲಾಯ ದೇವಸ್ಯರವರು ನನ್ನ ಮಾವ ಗಂಗಾಧರ್ ರೈಯವರು ಸಾಮಾಜಿಕ ಧಾರ್ಮಿಕ, ಸಹಕಾರ, ಕ್ರೀಡೆ ಸಹಿತ ಎಲ್ಲಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ. ಉತ್ಯಾಹ ಚಿಲುಮೆಯಾಗಿ, ನ್ಯಾಯ ಪರ ವ್ಯಕ್ತಿತ್ವದ ಶ್ರಮ ಜೀವಿಯಾಗಿದ್ದರು ಎಂದರು

ಪ್ರೀತಿಯ ಗಂಗಣ್ಣ ಆಗಿದ್ದರು- ಕೃಷ್ಣ ರೈ ಪನ್ನೆಗುತ್ತು
ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಎ.ಕೃಷ್ಣ ರೈ ಪನ್ನೆಗುತ್ತುರವರು ಮಾತನಾಡಿ ಕೃಷಿ ಕಾಯಕದಲ್ಲಿ ಮಾದರಿ ಯಾಗಿದ್ದ ಗಂಗಾಧರ್ ರೈ ಅವರು ಉತ್ತಮ ಅಡಿಕೆ ಕೃಷಿಕನಾಗಿ ಈ ಬಾಗದಲ್ಲಿ ಕಂಡು ಬರುತ್ತಾರೆ. ಕೃಷಿಯಲ್ಲಿ ಉತ್ಸಾಹದಲ್ಲಿ ಕಾರ್‍ಯ ನಿರ್ವಹಿಸುತ್ತಿದ್ದ ಗಂಗಾಧರ್ ರೈ ಎಲ್ಲರಿಗೂ ಪ್ರೀತಿಯ ಗಂಗಣ್ಣ ಆಗಿದ್ದರು ಎಂದರು

ಗೌರವಕ್ಕೆ ಪಾತ್ರರಾಗಿದ್ದರು- ಸದಾಶಿವ ರೈ
ಸಹಕಾರರತ್ನ ದಂಬೆಕ್ಕಾನ ಸದಾಶಿವ ರೈ ಅವರು ಮಾತನಾಡಿ ಒಳ್ಳೆಯ ಸಂಸ್ಕಾರಯುತ ಜೀವನವನ್ನು ನಡೆಸಿಕೊಂಡು ಬಂದಿರುವ ಗಂಗಾಧರ್ ರೈ ಅವರು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು ಎಂದರು

ಹೆಸರನ್ನು ಪಡೆದಿದ್ದರು- ಮೋಹನ್ ರೈ
ಪುತ್ತೂರು ತಾ.ಪಂ, ಮಾಜಿ ಸದಸ್ಯ ಮೋಹನ್ ರೈ ನರಿಮೊಗ್ರು ಅವರು ಮಾತನಾಡಿ ಉತ್ತಮ ವ್ಯಕ್ತಿತ್ವದ ಮೂಲಕ ಗಂಗಾಧರ್ ರೈ ಸಮಾಜ ಮತ್ತು ಕುಟುಂಬದಲ್ಲಿ ಹೆಸರನ್ನು ಪಡೆದಿದ್ದರು ಎಂದರು.


ಪಿ.ಡಿ.ಗಂಗಾಧರ್ ರೈ ಅವರ ಸಹೋದರ, ಪುಣ್ಚಪ್ಪಾಡಿ-ದೇವಸ್ಯ ತರವಾಡು ಕುಟುಂಬದ ಯಜಮಾನ ವಿಶ್ವನಾಥ ರೈ ದೇವಸ್ಯ, ಬಾಲಕೃಷ್ಣ ರೈ ದೇವಸ್ಯ ಹಾಗೂ ಬಾಲಕೃಷ್ಣ ಗಾಂಬೀರರವರುಗಳು ಸಂದಭೋಚಿತವಾಗಿ ಮಾತನಾಡಿ ಶ್ರದ್ಧಾಂಜಲಿ ಸಲ್ಲಿಸಿದರು.


ಪಿ.ಡಿ. ಗಂಗಾಧರ್ ರೈಯವರ ಪತ್ನಿ ಸುವಾಸಿನಿ ರೈ, ಮಕ್ಕಳಾದ ಯುವ ಉದ್ಯಮಿ ಶರತ್ ಕುಮಾರ್ ರೈ ದೇವಸ್ಯ, ಸನತ್ ಕುಮಾರ್ ರೈ, ಸೊಸೆಯಂದಿರಾದ ವಂದನಾ ಶರತ್ ಕುಮಾರ್ ರೈ, ಶಾಲಿನಿ ಸನತ್ ಕುಮಾರ್ ರೈ ಹಾಗೂ ಸಹೋದರ ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ, ಸಹೋದರಿ ಈಶ್ವರಿ ಸುಲಾಯ ದೇವಸ್ಯ ಮತ್ತು ಕುಟುಂಬಸ್ಥರು ವೇದಿಕೆಯಲ್ಲಿ ಉಪಸಿತರಿದ್ದರು.


ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿ ನಿರ್ದೇಶಕ ಅರಿಯಡ್ಕ ಚಿಕ್ಕಪ್ಪ ನಾಕ್, ನಿವೃತ್ತ ಡಿವೈಎಸ್‌ಪಿ ಭಾಸ್ಕರ್ ರೈ ಗುಂಡ್ಯಡ್ಕ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷರುಗಳಾದ ಬೂಡಿಯಾರ್ ರಾಧಾಕೃಷ್ಣ ರೈ, ದಿನೇಶ್ ಮೆದು, ಉದ್ಯಮಿ ಕರುಣಾಕರ್ ರೈ ದೇರ್ಲ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಜಿ.ಪಂ, ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಹಿರಿಯ ಉದ್ಯಮಿ ಸವಣೂರು ಸುಂದರ ರೈ, ನಾರಾಯಣ ರೈ ಬಾರಿಕೆ-ಪರ್ಪುಂಜ ಸೇರಿದಂತೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಹಕಾರ ಕ್ಷೇತ್ರದ ಮುಖಂಡರುಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here