






ಆಲಂಕಾರು: ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಯ 37ನೇ ಸೇವೆಯಾಗಿ ’ ಪಂಚವಟಿ’ ತಾಳಮದ್ದಳೆ ಆ.22ರಂದು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.


ಹಿಮ್ಮೇಳದಲ್ಲಿ ಗೋಪಾಲ ಭಟ್ ನೈಮಿಷ, ಡಿ.ಕೆ.ಆಚಾರ್ಯ ಹಳೆನೇರೆಂಕಿ, ಚಂದ್ರ ದೇವಾಡಿಗ ನಗ್ರಿ, ಮೋಹನ ಶರವೂರು, ಮುಮ್ಮೇಳದಲ್ಲಿ ದಿವಾಕರ ಆಚಾರ್ಯ ಹಳೆನೇರೆಂಕಿ, ರಾಘವೇಂದ್ರ ಭಟ್ ತೋಟಂತಿಲ, ಗುರು ಪ್ರಸಾದ್ ಆಲಂಕಾರು (ರಾಮ), ರಾಮ್ ಪ್ರಸಾದ್ ಆಲಂಕಾರು, ರಾಮ್ ಪ್ರಕಾಶ್ ಕೊಡಂಗೆ (ಸೀತೆ ), ರಾಮ್ ಪ್ರಕಾಶ್ ಕೊಡಂಗೆ (ಅಗಸ್ತ್ಯ), ಶಂಕರ್ ನೆಲ್ಯಾಡಿ (ಋಷಿಗಳು), ಜಯರಾಮ್ ಗೌಡ ಬಲ್ಯ (ಘೋರ ಶೂರ್ಪನಖಿ ), ಈಶ್ವರ ಪ್ರಸಾದ್ ಧರ್ಮಸ್ಥಳ (ಮಾಯಾ ಶೂರ್ಪನಖಿ ), ರವಿ ಭಟ್ ನೆಲ್ಯಾಡಿ, ರಾಮ್ ಪ್ರಕಾಶ್ ಕೊಡಂಗೆ (ಲಕ್ಷ್ಮಣ ) ಸಹಕರಿಸಿದರು. ಶ್ರೇಯಾ ರಾವ್ ಶರವೂರು ಬೆಂಗಳೂರು ಸೇವಾರ್ಥಿಯಾಗಿದ್ದರು. ಕೋಶಾಧಿಕಾರಿ ರಾಮ್ ಪ್ರಸಾದ್ ಆಲಂಕಾರು ಸ್ವಾಗತಿಸಿ, ವಂದಿಸಿದರು. ಕಲಾವಿದರು, ಕಲಾಭಿಮಾನಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.













