






ಅಧ್ಯಕ್ಷ; ಸುಂದರ ಕರ್ಕೇರ ಮರ್ದಾಳ, ಉಪಾಧ್ಯಕ್ಷೆ: ಮಾಯಾ ನೆಟ್ಟಣ


ಕಡಬ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ನೆಟ್ಟಣ ಶಾಖಾ ಸಲಹಾ ಸಮಿತಿಯ ಪುನರ್ರಚನೆ ಸಭೆ ಆ.೧೯ರಂದು ನೆಟ್ಟಣ ಶಾಖೆಯಲ್ಲಿ ಸಂಘದ ಅಧ್ಯಕ್ಷರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರ ಉಪಸ್ಥಿತಿಯಲ್ಲಿ ನಡೆಯಿತು.



ಸಲಹಾ ಸಮಿತಿಯ ಅಧ್ಯಕ್ಷರಾಗಿ ಸುಂದರ ಕರ್ಕೇರ ಮರ್ದಾಳ, ಉಪಾಧ್ಯಕ್ಷರಾಗಿ ಮಾಯಾ ನೆಟ್ಟಣ, ಗೌರವಾಧ್ಯಕ್ಷರಾಗಿ ಸಂತೋಷ್ ಕುಮಾರ್ ಆರ್. ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯರಾಗಿ ರವಿ ಕಕ್ಕೆಪದವು, ಕುಮಾರಿ ವಾಸುದೇವನ್, ಮಾಯಿಲಪ್ಪ ಪೂಜಾರಿ ಕೊಂಬಾರು, ಮೋನಪ್ಪ ಪೂಜಾರಿ ಕರ್ಮಾಯಿ, ಸಂಗೀತ ಮದೆಪರ್ಲ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಜನಾರ್ದನ ಪೂಜಾರಿ ಕದ್ರ, ನಿರ್ದೇಶಕರಾದ ಆನಂದ ಪೂಜಾರಿ ಮಠದ ಬೈಲು, ಲಕ್ಷ್ಮೀಶ ಬಂಗೇರ ಪೆಲತ್ತೋಡಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೋಗೀಶ್ ಕುಮಾರ್ ಅಗತ್ತಾಡಿ ಉಪಸ್ಥಿತರಿದ್ದರು. ನೆಟ್ಟಣ ಶಾಖಾ ವ್ಯವಸ್ಥಾಪಕ ದೀಕ್ಷಿತ್ ಸ್ವಾಗತಿಸಿ, ಸಿಬ್ಬಂದಿ ಮನೀಶ್ ವಂದಿಸಿದರು.










