ಚೂರಿಪದವು ಶಾಲಾ ವಠಾರದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಕಾರ್ಯಕ್ಷೇತ್ರದ ಚೂರಿಪದವು ಒಕ್ಕೂಟದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೂರಿಪದವು ಇಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ಆ.23 ರಂದು ನಡೆಯಿತು. 

ಶಾಲೆಯ ವಠಾರದಲ್ಲಿ ಗಿಡ ನೆಡುವುದರ ಮೂಲಕ ಪರಿಸರ ಜಾಗೃತಿಯ ಬಗ್ಗೆ ತಾಲೂಕು ಕೃಷಿ ಮೆಲ್ವೀಚಾರಕ ಹರೀಶ್ ಮಾಹಿತಿ ನೀಡಿದರು.  ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶರೀಫ್, ಉಪಾಧ್ಯಕ್ಷೆ ಭಾರತಿ ಎಸ್,  ವಲಯ ಮೇಲ್ವಿಚಾರಕ ಆದರ್ಶ್,ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.ವಿವಿಧ ಜಾತಿಯ ಗಿಡಗಳನ್ನು ಶಾಲೆಯ ವಠಾರದಲ್ಲಿ ನೆಡಲಾಯಿತು.ಸೇವಾ ಪ್ರತಿನಿಧಿ ಕಲಾವತಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here