







*ರೋಗ ಬರುವ ಮುನ್ನ ಎಚ್ಚೆತ್ತುಕೊಳ್ಳಿ-ವಂ|ಡಾ|ಜೆ.ಬಿ ಸಲ್ದಾನ್ಹಾ
*ಕ್ಯಾನ್ಸರ್ ದೇಹದ ಯಾವುದೇ ಭಾಗಕ್ಕೆ ಭಾದಿಸಬಹುದು-ಡಾ.ಎಲ್ರೋಯ್ ಸಲ್ದಾನ್ಹಾ


ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಪುತ್ತೂರು, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿ.ಎಲ್.ಸಿ) ಪುತ್ತೂರು, ಮಾಯಿದೆ ದೇವುಸ್ ಚರ್ಚ್ ಆರೋಗ್ಯ ಆಯೋಗ ಪುತ್ತೂರು, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮಂಗಳೂರು ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವು ಆ.23 ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆಯಿತು.



ರೋಗ ಬರುವ ಮುನ್ನ ಎಚ್ಚೆತ್ತುಕೊಳ್ಳಿ-ವಂ|ಡಾ|ಜೆ.ಬಿ ಸಲ್ದಾನ್ಹಾ:
ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ಹಾಗೂ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಆತ್ಮೀಕ ನಿರ್ದೇಶಕರಾಗಿರುವ ವಂ|ಡಾ|ಜೆ.ಬಿ ಸಲ್ದಾನ್ಹಾರವರು ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿನ ಜನರ ತಮ್ಮ ಜೀವನಶೈಲಿಯಲ್ಲಿನ ಬದಲಾವಣೆಯನ್ನು ನಾವು ಗಮನಿಸಬೇಕಾಗಿದೆ. ಮನುಷ್ಯ ತನ್ನ ಶರೀರದ ಸದೃಢತೆಗೆ ಮನಸ್ಸು ಕೊಡಬೇಕಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಿನದಲ್ಲಿ ಸುಮಾರು ಎರಡರಿಂದ ಮೂರು ಸಾವಿರದಷ್ಟು ರೋಗಿಗಳು ದಾಖಲಾತಿ ದಾಖಲಾಗುತ್ತಿರುವುದು ನೋಡಿದಾಗ ಆಸ್ಪತ್ರೆಯಲ್ಲಿನ ಸೇವೆಯ ಬಗ್ಗೆ ನಾವು ತಿಳಿಯಬೇಕಾಗಿದೆ. ಮನುಷ್ಯ ಯಾವಾಗಲೂ ರೋಗ ಬರುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿರುವುದು ಇಂದಿನ ಅತ್ಯವಶ್ಯಕ ಎಂದರು.
ಕ್ಯಾನ್ಸರ್ ದೇಹದ ಯಾವುದೇ ಭಾಗಕ್ಕೆ ಭಾದಿಸಬಹುದಾಗಿದೆ-ಡಾ.ಎಲ್ರೋಯ್ ಸಲ್ದಾನ್ಹಾ:
ಮಂಗಳೂರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಕ್ಯಾನ್ಸರ್ ವಿಭಾಗದ ತಜ್ಞರಾದ ಡಾ.ಎಲ್ರೋಯ್ ಸಲ್ದಾನ್ಹಾರವರು ಕ್ಯಾನ್ಸರ್ ಸಂಬಂಧ ಪಿ.ಪಿ.ಟಿ ಮೂಲಕ ವಿಸ್ತರಿಸಿ ಮಾತನಾಡಿ, ಕ್ಯಾನ್ಸರ್ ಎನ್ನುವುದು ದೇಹದ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆದು ವಿಭಜನೆಗೊಂಡು, ಗಡ್ಡೆಗಳನ್ನು ಉಂಟುಮಾಡುವ ಮತ್ತು ಆರೋಗ್ಯಕರ ಅಂಗಾಂಶಗಳನ್ನು ಹಾನಿಗೊಳಿಸುವ ಒಂದು ಗಂಭೀರ ಕಾಯಿಲೆಯಾಗಿದೆ. ಇದು ದೇಹದ ಯಾವುದೇ ಭಾಗದಲ್ಲಿ ಸಂಭವಿಸಬಹುದು ಮತ್ತು ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯದಿದ್ದರೆ ಇತರ ಅಂಗಗಳಿಗೆ ಹರಡಬಹುದು ಎಂದು ಹೇಳಿ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ವಿವರಿಸಿದರು.

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಲಸ್ರಾದೋ, ಚರ್ಚ್ 21 ಆಯೋಗಗಳ ಸಂಯೋಜಕ ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್, ಫಾದರ್ ಮುಲ್ಲರ್ ಮೆಡಿಕಲ್ ತಜ್ಞೆ ಭಾಗ್ಯಶ್ರೀ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇದರ ಸಮಾಜ ಸೇವಕಿ ಸ್ವಾತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಅನುಷಾ ಪಿಂಟೊ ಮತ್ತು ಬಳಗ ಪ್ರಾರ್ಥಿಸಿದರು. ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಅಧ್ಯಕ್ಷ ವಿಲಿಯಂ ನೊರೋನ್ಹಾ ಸ್ವಾಗತಿಸಿ, ಸದಸ್ಯ ವಾಲ್ಟರ್ ಡಿ’ಸೋಜ ವಂದಿಸಿದರು. ಸದಸ್ಯ ಓಸ್ವಾಲ್ಡ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು ಸಿಬ್ಬಂದಿ, ಮಂಗಳೂರು ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಸದಸ್ಯರು ಸಹಕರಿಸಿದರು.
300ಕ್ಕೂ ಮಿಕ್ಕಿ ಫಲಾನುಭವಿಗಳು..
ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಲಭ್ಯವಿರುವ ವೈದ್ಯಕೀಯ ಸೇವೆಗಳಾದ ಮೆಡಿಸಿನ್ ವಿಭಾಗ, ಚರ್ಮ ರೋಗ ವಿಭಾಗ, ಸ್ತ್ರೀ ರೋಗ ತಜ್ಞರ ವಿಭಾಗ, ಕ್ಯಾನ್ಸರ್ ರೋಗದ ಮಾಹಿತಿ, ಶಸ್ತ್ರ ಚಿಕಿತ್ಸಾ ತಜ್ಞರ ವಿಭಾಗ, ಕಿವಿ, ಮೂಗು, ಗಂಟಲು ವಿಭಾಗ, ಮಕ್ಕಳ ತಜ್ಞರ ವಿಭಾಗ, ಮೂಳೆ ತಜ್ಞರ ವಿಭಾಗ, ಕಿವಿ ಮತ್ತು ಶ್ರವಣ ವಿಭಾಗ, ಉಚಿತ ಕ್ಯಾನ್ಸರ್ ತಪಾಸಣೆ, ನೇತ್ರಾ ವಿಭಾಗ(ರಿಯಾಯಿತಿ ದರದಲ್ಲಿ ಕನ್ನಡಕ ನೀಡಲಾಗುವುದು), ಮಹಿಳೆಯರಿಗೆ ಉಚಿತ ಪ್ಯಾಪ್ ಸ್ಮಿಯರ್ ತಪಾಸಣೆ ನಡೆಸಲಾಯಿತು. ಸುಮಾರು 300ಕ್ಕೂ ಮಿಕ್ಕಿ ಅರ್ಹ ಫಲಾನುಭವಿಗಳು ಶಿಬಿರದಲ್ಲಿ ಪಾಲ್ಗೊಂಡು ತಜ್ಞ ವೈದ್ಯರಿಂದ ಸೂಕ್ತ ಪ್ರಯೋಜನ ಪಡೆದುಕೊಂಡರು.










