







ಪುತ್ತೂರು: ಪುತ್ತೂರಿನ ಹೃದಯಭಾಗದಲ್ಲಿ ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರದ ಕಟ್ಟಡವನ್ನು ಮೂಲ ಉದ್ದೇಶ ಬಿಟ್ಟು ಬೇರೆ ಉದ್ದೇಶಕ್ಕೆ ಬಳಸುವುದು ಯಾಕೆ ಈ ಕುರಿತು ಪುತ್ತೂರಿನ ಶಾಸಕರು ಉತ್ತರ ಕೊಡಬೇಕು ಎಂದು ಎಸ್ ಡಿ ಪಿ ಐ ಕಾರ್ಯದರ್ಶಿ ಹರ್ಷದ್ ಹುಸೈನ್ ಬನ್ನೂರು ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
20219-20 ನೇ ಬಜೆಟ್ ನಲ್ಲಿ ಕೇಂದ್ರದ ಶೇ.60 ಮತ್ತು ರಾಜ್ಯದ ಶೇ.40 ಅನುದಾನದಲ್ಲಿ ರೂ.1.40 ಕೋಟಿ ರೂಪಾಯಿ ವೆಚ್ಚದಲ್ಲಿ 2022 ರಲ್ಲಿ ನಿರ್ಮಾಣವಾದ ಅಲ್ಪಸಂಖ್ಯಾತರ ಸಾಮಾನ್ಯ ಕೇಂದ್ರ ಇವತ್ತಿನ ತನಕ ಕಟ್ಟಡ ಅದೇ ರೀತಿ ಇದೆ. 4 ವರ್ಷದಿಂದ ಕಟ್ಟಡ ವ್ಯವಸ್ಥೆಗೆ ಕಾರ್ಯಗತಗೊಳಿಸದೆ ಬಂದ್ ಮಾಡಲಿರಲು ಕಾರಣ ಏನು. ಕಳೆದ ಮೇ ತಿಂಗಳಲ್ಲಿ ಪುತ್ತೂರಿನ ಶಾಸಕರು ಹಾಸ್ಟೇಲ್ ಗಾಗಿ ಸಚಿವರಿಗೆ ಮನವಿ ಮಾಡಿದ್ದಾರೆ. ಯಾಕಾಗಿ ಹಾಸ್ಟೇಲ್ . ಹಾಸ್ಟೇಲ್ ಬೇಕು ಆದರೆ ಸಾಮಾನ್ಯ ಕೇಂದ್ರ ದ ನಿರ್ಲಕ್ಷ್ಯ ಯಾಕೆ. ಇವತ್ತು ಕಡ್ಟಡ ಇದ್ದರೂ ಸಮಾಜಕಲ್ಯಾಣ ಇಲಾಖೆಯಲ್ಲಿ ಸಣ್ಣ ಚಯರ್ ಇಟ್ಡು ಮಾಹಿತಿ ನೀಡುವ ಕೆಲಸ ಆಗಿದೆ. ಸರಕಾರದಿಂದ ಬರುವ 40 ಕ್ಕೂ ಅಧಿಕ ಸವಲತ್ತು ಅಲ್ಪ ಸಂಖ್ಯಾತರಿಗೆ ನೀಡಲು ಸಾಮಾನ್ಯ ಕೇಂದ್ರ ಅಗತ್ಯ ಎಂದರು.
ಈ ಕುರಿತು 3 ವಾರಗಳ ಹಿಂದೆ ಎ ಸಿ ಗೆ ಮನವಿ ಕೊಟ್ಟೆವು. ಶಾಸಕರಿಗೆ ಪತ್ರಿಕಾಗೋಷ್ಟಿ ಮೂಲಕ ಮನವಿ ಮಾಡುತ್ತಿದ್ದೇವೆ. ಪುತ್ತೂರಿನ ಜನರಲ್ಲಿ ವಿಚಾರಿಸದೆ ಏಕಾಏಕಿ ಹೋಗಿ ಉದ್ದೇಶ ಬದಲಾವಣೆ ಮಾಡಬಾರದು. ಆದಷ್ಟು ಬೇಗ ಮೂಲ ಉದ್ದೇಶದಲ್ಲೇ ತೆರಯಬೇಕು. ಬಾಲಕರ ಹೊಸ್ಟಲ್ ಗೆ ಕೊಟ್ಟ ಮನವಿಯನ್ನು ಬಿಡಬೇಕು. ಮುಂದಿನ ದಿನ ಓಪನ್ ಮಾಡುವ ತನಕ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತೇವೆ.21 ದಿವಸದಲ್ಲಿ ಯಾವ ಸ್ಪಂಧನೆ ಇಲ್ಲದಿದ್ದರೆ ಮುಂದಿನ ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಬಿಜೆಪಿ, ಕಾಂಗ್ರೆಸ್ ಮೋರ್ಚಾ ಎಲ್ಲಿ ಹೋಗಿದೆ:
ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯ ಪಕ್ಷದಲ್ಲಿ ಅಲ್ಪಸಂಖ್ಯಾತ ಮೋರ್ಚಾ ಇದೆ. ಆದರೆ ಯಾಕೆ ಎರಡು ಪಕ್ಷದವರು ಇಲ್ಲಿಯ ತನಕ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಡಿಯಲ್ಲಿ ನಗರಸಮಿತಿ ಪ್ರಧಾನ ಕಾರ್ಯದರ್ಶಿ ಇಫಾನ್ ಬನ್ನೂರು, ನಗರ ಸಮಿತಿ ಸದಸ್ಯರಾದ ಅಶ್ರಫ್ ಪರ್ಲಡ್ಕ, ಇಶಾನ್ ಗೋಳಿಕಟ್ಟೆ, ರಫೀಕ್ ಬಲ್ನಾಡು ಉಪಸ್ಥಿತರಿದ್ದರು.















