ಸವಣೂರಿನಲ್ಲಿ ಯಕ್ಷಗಾನ ಬಯಲಾಟ- ಸನ್ಮಾನ

0

ಪುತ್ತೂರು: ಸವಣೂರು ಯಕ್ಷಕಲಾಭಿಮಾನಿಗಳ ಸಹಯೋಗದಲ್ಲಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಠಾರದಲ್ಲಿ ಆಗಸ್ಟ್ 18 ರಂದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇದರ ಪ್ರಸಿದ್ಧ ಕಲಾವಿದರಿಂದ ಚಂದ್ರಾವಳಿ ವಿಲಾಸ, ಮಕರಾಕ್ಷ ಕಾಳಗ ಎನ್ನುವ ಪೌರಾಣಿಕ ಯಕ್ಷಗಾನ ನಡೆಯಿತು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಪ್ರಸಾದ್ ಸವಣೂರು ಮತ್ತು ಮೇಳದ ವ್ಯ‌‌ವಸ್ಥಾಪಕ ಈಶ್ವರ ಚಂದ್ರ ನಿಡ್ಲೆ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಗಿರಿಶಂಕರ ಸುಲಾಯ, ರಾಕೇಶ್ ರೈ ಕೆಡೆಂಜಿ, ತಾರನಾಥ ಕಾಯರ್ಗ, ತಾರನಾಥ ಸವಣೂರು, ಚಂದ್ರಶೇಖರ್ ಪಿ, ಸುರೇಶ್ ರೈ ಸೂಡಿ ಮುಳ್ಳು, ಮೋಹನ್ ರೈ ಕೆರೆಕ್ಕೋಡಿ ಸಚಿನ್ ಸವಣೂರು, ಚೇತನ್ ಕುಮಾರ್ ಕೋಡಿಬೈಲು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here